ಮಡಿಕೇರಿ, ಅ. ೪: ಕೆ. ನಿಡುಗಣೆ ಪಂಚಾಯಿತಿಗೆ ಸೇರಿದ ಭಗವತಿನಗರ ಅಂಗನವಾಡಿ ಕೇಂದ್ರದಲ್ಲಿ ಚೇರಂಬಾಣೆ ವರ್ತುಲನ ಕಾರ್ಯಕರ್ತೆಯರು ಸೇರಿ ಪೋಷಣಾ ಮಾಸಾಚರಣೆಯ ಸಮಾರೋಪ ಸಮಾರಂಭವನ್ನು ಆಚರಿಸಿದರು.
ಸಭೆಯಲ್ಲಿ ಸಮುದಾಯದ ಜನರಿಗೆ ಅರಿವು ಕಾರ್ಯಾಗಾರ ಮತ್ತು ಪೌಷ್ಟಿಕ ಆಹಾರ ತಯಾರಿಕೆಯ ಬಗ್ಗೆ ಮಾಹಿತಿ ನೀಡಲಾಯಿತು. ಸಭೆಯಲ್ಲಿ ಕೆ. ನಿಡುಗಣೆ ಪಂಚಾಯಿತಿ ಮಾಜಿ ಅಧ್ಯಕ್ಷೆ ಹಾಗೂ ಹಾಲಿ ಸದಸ್ಯೆ ರೀಟಾ ಮುತ್ತಣ್ಣ, ಮಹಿಳಾ ಮೇಲ್ವಿಚಾರಕಿ ರೀತಾ ಬಿ.ಎಸ್, ಆಶಾಕಾರ್ಯಕರ್ತೆ ಬಾಲವಿಕಾಸ ಸಮಿತಿ ಅಧ್ಯಕ್ಷ ಹಾಗೂ ಚೇರಂಬಾಣೆ ವರ್ತುಲದ ಕಾರ್ಯಕರ್ತೆಯರು, ಪೋಷಕರು ಹಾಜರಿದ್ದರು.