ಸೋಮವಾರಪೇಟೆ, ಅ. ೪: ಕೊಡ್ಲಿಪೇಟೆಯ ಕಡೇಪೇಟೆ ಜಂಕ್ಷನ್‌ನಲ್ಲಿ ಶಾಸಕರ ನಿಧಿಯಡಿ ರೂ. ೩.೫೦ ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಹೈ ಮಾಸ್ಟ್ ದೀಪವನ್ನು ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಅವರು ಉದ್ಘಾಟಿಸಿದರು.

ಈ ಸಂದರ್ಭ ಪ್ರಮುಖರಾದ ಕಿರಿಕೊಡ್ಲಿ ಮಠಾಧೀಶರಾದ ಶ್ರೀ ಸದಾಶಿವ ಸ್ವಾಮೀಜಿ, ಭಗವಾನ್, ಪ್ರಸಾದ್ ಪಟೇಲ್, ಬಿಜೆಪಿ ಪ್ರಧಾನ ಕಾರ್ಯದರ್ಶಿ ಮೋಕ್ಷಿಕ್, ಗೌತಮ್, ನಾಗರಾಜು, ಮಳಲಿ ನಾಗೇಶ್, ಯತೀಶ್, ಚಂದ್ರಶೇಖರ್ ಹೇರೂರು, ಲಾವಣ್ಯ ಪ್ರಕಾಶ್, ನಂದೀಶ್, ದಿವಾಕರ್, ಧರ್ಮಪ್ರಕಾಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.