ಮಡಿಕೇರಿ, ಅ. ೫: ಕೊಡಗು ಬೆಳೆಗಾರರ ಸಂಘದ ೧೪೨ನೇ ವಾರ್ಷಿಕ ಸಭೆ ತಾ.೨ ರಂದು ನಗರದ ಹೊರವಲಯದ ಖಾಸಗಿ ರೆಸಾರ್ಟ್ನಲ್ಲಿ ನಡೆಯಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಯು.ಪಿ.ಎ.ಎಸ್.ಐ. ಅಧ್ಯಕ್ಷ ಚೆರಿಯನ್ ಮಾತನಾಡಿ, ಕೊಡಗು ಪ್ಲಾಂಟರ್ಸ್ ಅಸೋಸಿ ಯೇಶನ್ ದೇಶದಲ್ಲಿಯೇ ಪ್ರಥಮವಾಗಿ ಸ್ಥಾಪಿತವಾದ ಪ್ಲಾಂಟರ್ಸ್ ಅಸೋಸಿಯೇಶನ್ ಆಗಿದ್ದು, ೧೮೯೩ ರಲ್ಲಿ ದಕ್ಷಿಣ ಭಾರತದ ಯುನೈಟೆಡ್ ಪ್ಲಾಂಟರ್ಸ್ ಅಸೋಸಿಯೇಶನ್ (ಯು.ಪಿ.ಎ.ಎಸ್.ಐ) ಅನ್ನು ರಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ನೆನಪಿಸಿಕೊಂಡರು.
ಯು.ಪಿ.ಎ.ಎಸ್.ಐ ವಿವಿಧ ಹಂತಗಳಲ್ಲಿ ಕೊಡಗು ಬೆಳೆಗಾರರ ಸಂಘ (ಸಿಪಿಎ) ಮತ್ತು ಕರ್ನಾಟಕ ಬೆಳೆಗಾರರ (ಕೆಪಿಎ) ಸದಸ್ಯರ ಆಸಕ್ತಿಯನ್ನು ಉತ್ತೇಜಿಸುವುದನ್ನು ಮುಂದುವರಿಸುತ್ತದೆ. ಕಾಫಿ ಬೆಳೆಗಾರರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಯುಪಿಎಎಸ್ಐ ನಿಯೋಗವು ದೆಹಲಿಗೆ ಕೂಡ ಭೇಟಿ ನೀಡಿದ್ದಾಗಿ ಹೇಳಿದರು. ಕಾಫಿ ಮತ್ತು ಚಿಕೋರಿ ಮಿಶ್ರಣಕ್ಕೆ ಸಂಬAಧಿಸಿದAತೆ ಎಫ್.ಎಸ್.ಎಸ್.ಎ.ಐ ಲೇಬಲಿಂಗ್ ವಿಧಾನವನ್ನು ತಿದ್ದುಪಡಿ ಮಾಡಬೇಕೆಂಬ ಪ್ರಸ್ತಾವನೆಯನ್ನು ಕಾಫಿ ಬೋರ್ಡ್ ವತಿಯಿಂದ ಮಾಡಲಾ ಗಿದ್ದು, ಈ ವಿಷಯವನ್ನು ವಾಣಿಜ್ಯ ಸಚಿವಾಲಯದ ಗಮನಕ್ಕೆ ತರಲಾಗಿದೆ ಎಂದರು.
ಕಾಫಿಯ ಬೆಲೆ ಜಾಗತಿಕ ಕಾಫಿ ಪೂರೈಕೆ ಮತ್ತು ಬೇಡಿಕೆಗೆ ಅನುಗುಣವಾಗಿ ನಿರ್ಧರಿಸಲ್ಪಡುತ್ತದೆ. ಆದರೆ ಇತ್ತೀಚೆಗೆ ಬೆಳೆಗಾರರು ಮೌಲ್ಯ ಸರಪಳಿಯ ಕೇವಲ ೧೦% ರಷ್ಟಿರುವ ಹಸಿರು ಕಾಫಿಯನ್ನು ಮಾರಾಟ ಮಾಡುತ್ತಿದ್ದಾರೆ. ಕಾಫಿ ಸಂಸ್ಕರಣೆ ಮತ್ತು ಉತ್ಪನ್ನೀಕರಣಕ್ಕೆ ಹೆಚ್ಚು ಗಮನ ಹರಿಸುವ ಮೂಲಕ ಉತ್ತಮ ಬೆಲೆ ದೊರಕುವಂತೆ ಬೆಳೆಗಾರರು ಕಾರ್ಯಪ್ರವೃತ್ತರಾಗಬೇಕಾಗಿ ಅವರು ಬೆಳಗಾರರಿಗೆ ಸಲಹೆ ನೀಡಿದರು.
SಂಖಈAಇSI ಕಾಯಿದೆಯ ಕುರಿತು ಮಾತನಾಡಿದ ಅವರು, ಕೃಷಿ ಬೆಳೆಗಳ ಬಗೆಗಿನ ಅರಿವಿನ ಕೊರತೆ ಯಿಂದಾಗಿ ಕಾಫಿಯಂತಹ ತೋಟದ ಬೆಳೆಗಳನ್ನು ತಪ್ಪಾಗಿ SಂಖಈAಇSI ಅಡಿಯಲ್ಲಿ ತರಲಾಗಿದೆ ಎಂದರು. ಇದನ್ನು ಸರಿಪಡಿಸಲು ಯು.ಪಿ.ಎ. ಎಸ್.ಐ. ಈಗಾಗಲೇ ವಾಣಿಜ್ಯ ಸಚಿವಾಲಯದ ಗಮನಕ್ಕೆ ತಂದಿರುವುದಾಗಿ ಮಾಹಿತಿ ನೀಡಿದರು. ಸರ್ಕಾರವು ತಿಂಗಳಿಗೆ ೨೦೦ ಚೀಲಗಳಂತೆ ಸಬ್ಸಿಡಿ ರಸಗೊಬ್ಬರ ವಿತರಣೆಗೆ ವಿಧಿಸಿರುವ ನಿರ್ಬಂಧಗಳ ಕುರಿತು ಮಾತನಾಡಿದ ಅವರು, ಈ ವಿಷಯದ ಕುರಿತು ಸರಕಾರದ ಗಮನ ಸೆಳೆದು ಇದೀಗ ೧,೨೦೦ ಚೀಲಗಳಿಗೆ ಹೆಚ್ಚಿಸಲಾಗಿದೆ ಎಂದರು.
ಗೌರವ ಅತಿಥಿಗಳಾಗಿ ಭಾಗವಹಿಸಿದ್ದ ಕರ್ನಾಟಕ ಬೆಳೆಗಾರರ ಸಂಘದ ಅಧ್ಯಕ್ಷ ಎಸ್. ಅಪ್ಪದುರೈ ಮಾತನಾಡಿ ರಾಜ್ಯ ಸಂಘವಾಗಿರುವ ಕೆ.ಪಿ.ಎ. ಕಾಫಿ ಮಂಡಳಿಯ ಸಿ.ಇ.ಒ ಹಾಗೂ ಕಾರ್ಯದರ್ಶಿಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಬೆಳೆಗಾರರ ಸಮಸ್ಯೆಗಳನ್ನು ಆಲಿಸಲಾಗಿರುವುದಾಗಿ ಹೇಳಿದರು.
ಮಾನವ-ಪ್ರಾಣಿ ಸಂಘರ್ಷದ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು ಇದರಿಂದಾಗಿ ಹಲವು ವರ್ಷಗಳಿಂದ ಚೆನ್ನಾಗಿ ಅಭಿವೃದ್ಧಿ ಹೊಂದಿರುವ ತೋಟಗಳು ಕಾಡು ಆನೆಗಳಿಂದ ಹಾನಿಗೊಳಗಾಗಿದ್ದು ಬೆಳೆಗಾರನಿಗೆ ಆರ್ಥಿಕ ನಷ್ಟ ಉಂಟುಮಾಡುತ್ತಿ ರುವುದಕ್ಕೆ ವಿಷಾಧಿಸಿದರು. ಇದಲ್ಲದೆ, ಕೆಲವು ಸಂದರ್ಭಗಳಲ್ಲಿ ಈ ಆನೆಗಳು ವೃದ್ಧಾಪ್ಯದಿಂದ ಸಾವನ್ನಪ್ಪಿದಲ್ಲಿ ಅಥವಾ ಖಾಸಗಿ ತೋಟಗಳಲ್ಲಿ ಜಗಳವಾಡಿ ಸಾವನ್ನಪ್ಪಿದರೂ, ಬೆಳೆಗಾರರ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗುತ್ತದೆ. ಇದರಿಂದಾಗಿ ಬೆಳೆಗಾರನು ಮಾನಸಿಕವಾಗಿಯೂ ಕುಗ್ಗುತ್ತಾನೆ ಎಂದರು.
ಬೆಳೆೆಗಾರರ ಸಂಘವು ಇತ್ತೀಚೆಗೆ ಕೇಂದ್ರ ವಾಣಿಜ್ಯ ಸಚಿವ ಪಿಯುಶ್ ಗೋಯಲ್ ಅವರನ್ನು ಭೇಟಿ ಮಾಡಿ ಬೆಳೆಗಾರರ ನಿಜವಾದ ಸಮಸ್ಯೆಗಳ ಕುರಿತು ವಿವರಿಸಿರುವುದಾಗಿ ಹೇಳಿದರು.
ಕಾಫಿ ಬೋರ್ಡ್ನ ಸಂಶೋಧನಾ ಘಟಕದ ನಿರ್ದೇಶಕ ಡಾ.ಎನ್ ಸೂರ್ಯಪ್ರಕಾಶ್ರಾವ್ ಅವರು ತಾಂತ್ರಿಕ ವಿಚಾರ ಸಂಕಿರಣ ನಡೆಸಿಕೊಟ್ಟರು.
ಈ ಸಂದರ್ಭ ಕೃಷಿ ಸಂಬAಧ ಬಳಸುವ ಆಧುನಿಕ ಯಂತ್ರಗಳನ್ನು ಯಂತ್ರ ಉತ್ಪಾದಕ ಸಂಸ್ಥೆಗಳು ಪ್ರದರ್ಶನಕ್ಕಿಟ್ಟಿದ್ದವು.
೨೦೨೧-೨೨ ಸಾಲಿಗೆ ಬಿ.ವಿ. ಮೋಹನ್ ದಾಸ್ ಅವರು ಅಧ್ಯಕ್ಷರಾಗಿ ಹಾಗೂ ಸಿ.ಯು. ಅಶೋಕ್ ಅವರು ಆಯ್ಕೆಯಾದರು.
ಅಸೋಸಿಯೇಶನ್ನ ಹಿಂದಿನ ಅಧ್ಯಕ್ಷ ಎಂ.ಎನ್. ಬೋಸ್ ಮಂದಣ್ಣ, ಕೆ.ಎ. ಚಿನ್ನಪ್ಪ, ಸಿ.ಎ. ಮುತ್ತಣ್ಣ, ಎಎಲ್ ಆರ್.ಎಂ. ನಾಗಪ್ಪನ್, ಎನ್.ಎ. ಅಪ್ಪಯ್ಯ, ಪಿ.ಎಸ್. ಸುಬ್ರಮಣಿ, ಡಾ. ಬಿ.ಎಂ. ಬೋಪಯ್ಯ, ಕೆ.ಸಿ. ಆಚಿಯಾ, ಕೆ.ಜಿ. ರಾಜೀವ್ ಮತ್ತು ಎಂ.ಸಿ. ಕಾರ್ಯಪ್ಪ ಹಾಜರಿದ್ದರು.
ಕೊಡಗು ಬೆಳೆಗಾರರ ಸಂಘದ ಅಧ್ಯಕ್ಷ ರಮಾನಾಥನ್ ನಾಗಪ್ಪನ್ ಅವರು ಸ್ವಾಗತಿಸಿದರು. ನೂತನವಾಗಿ ಚುನಾಯಿತರಾದ ಅಧ್ಯಕ್ಷ ಮೋಹನ್ ದಾಸ್ ವಂದಿಸಿದರು.