ನಾಡಿನ ಜೀವನದಿ, ಕೊಡಗಿನ ಆರಾಧ್ಯದೈವ, ಕೊಡವರ ಕುಲಮಾತೆಯಾಗಿರುವ ಶ್ರೀ ಮಾತೆ ಕಾವೇರಿ ವರ್ಷಂಪ್ರತಿ ತೀರ್ಥರೂಪಿಣಿಯಾಗಿ ಆವೀರ್ಭವಿಸುವುದರೊಂದಿಗೆ ಭಕ್ತರನ್ನು ಹರಸುವುದು ತುಲಾಸಂಕ್ರಮಣದAದು ಜರುಗುವ ಕೊಡಗಿನ ಧಾರ್ಮಿಕ ಕೈಂಕರ್ಯವಾಗಿ ಆರಾಧಿಸಲ್ಪಡುತ್ತದೆ. ಇದು ಪ್ರತಿ ವರ್ಷ ಜರುಗುವ ಒಂದು ಅಪರೂಪದ ಸನ್ನಿವೇಶ ಹಾಗೂ ಧಾರ್ಮಿಕವಾಗಿ ನಡೆದುಕೊಂಡು ಬಂದಿರುವ ಪದ್ಧತಿ.

ತೀರ್ಥೋದ್ಭವ ಹಾಗೂ ಇದರ ಬಳಿಕ ಒಂದು ತಿಂಗಳ ಕಾಲ ತಲಕಾವೇರಿಯಲ್ಲಿ ಜಾತ್ರಾಮಹೋತ್ಸವ ಜರುಗುತ್ತದೆ. ಕೊಡಗಿನ ಜನರೊಂದಿಗೆ ರಾಜ್ಯ ಹಾಗೂ ಇತರೆಡೆಯ ಜನರೂ ಇಲ್ಲಿ ಭಾಗಿಗಳಾಗುತ್ತಾರೆ. ಈ ಆಚರಣೆ ಹಾಗೂ ಸಂಬAಧಿತ ಕಾರ್ಯಕ್ರಮಗಳು ವ್ಯವಸ್ಥಿತವಾಗಿ ಆಚರಿಸಲ್ಪಡುತ್ತಾ ಬರುತ್ತಿತ್ತು. ಆದರೆ ಕಳೆದ ಕೆಲವು ವರ್ಷಗಳಿಂದ ಅಕ್ಟೋಬರ್ ತಿಂಗಳು ಆರಂಭವಾಗುತ್ತಿರುವAತೆ ಕಾವೇರಿಯ ವಿಚಾರ ಕಾವೇರಿಸುತ್ತಿರುವ ಬೆಳವಣಿಗೆ ವಿಪರ್ಯಾಸವೆಂಬAತಾಗಿದೆ.

ಕಳೆದ ವರ್ಷದಿಂದ ಕೊರೊನಾ ಎಂಬ ‘ಗುಮ್ಮ’ ಇಲ್ಲಿ ವಕ್ಕರಿಸಿಕೊಂಡಿ ರುವುದು ಒಂದೆಡೆಯಾದರೆ... ಇದರ ಒಳ ಹೊಕ್ಕು ಅವಲೋಕಿಸಿದಾಗ ಮತ್ತೂ ಕೆಲವಾರು ಕಾರಣಗಳು ಗೊಂದಲಮಯ ಸನ್ನಿವೇಶಕ್ಕೆ ಎಡೆಯಾಗುತ್ತಿದೆ. ಇಲ್ಲಿ ಎಲ್ಲವನ್ನೂ ವಿವರವಾಗಿ ಹೇಳಬೇಕಾಗಿಲ್ಲ... ಏನಾಗುತ್ತಿದೆ, ಯಾವುದನ್ನು ಪ್ರಶ್ನಿಸಲಾಗುತ್ತಿದೆ, ಯಾತಕ್ಕಾಗಿ ಇದು ಮರುಕಳಿಸುತ್ತಿದೆ ಎಂಬದು ಜಿಲ್ಲೆಯ ಜನತೆಗೆ, ಆಡಳಿತ ವರ್ಗಕ್ಕೆ, ರಾಜಕಾರಣಿಗಳಿಗೆ ಹೀಗೆ ಎಲ್ಲರಿಗೂ ಗೊತ್ತು.

ಈ ಸಂದಿಗ್ಧತೆಯ ಪರಿಸ್ಥಿತಿಯ ನಡುವೆ ಕೊರೊನಾ ಎಂಬ ಕಾರಣವನ್ನು ಮುಂದಿಟ್ಟುಕೊಳ್ಳುತ್ತಿರುವುದು ವ್ಯವಸ್ಥೆಯನ್ನು ಮತ್ತೂ ಹಾಳುಗೆಡುವುತ್ತಿದೆ. ಎಲ್ಲೂ ಇಲ್ಲದ ನಿರ್ಬಂಧಗಳನ್ನು ಈ ಕಾರಣ ಹೇಳಿಕೊಂಡು ಹೇರಲು ಮುಂದಾಗುವ ಪ್ರಯತ್ನ ಖಾರವಾದ ಪ್ರಶ್ನೆಗಳಿಗೆ, ಪ್ರತಿಭಟನಾತ್ಮಕ ಬೆಳವಣಿಗೆಗಳಿಗೆ ಆಸ್ಪದವಾಗುತ್ತಿದೆ.

ಹೌದು ಕೊರೊನಾ ನಿಯಂತ್ರಣ, ಮುಂಜಾಗ್ರತೆ ಅಗತ್ಯವೇ ಆಗಿದೆ. ಆದರೆ ಇಲ್ಲಿ ಎದ್ದು ಕಾಣುವುದು ಇದನ್ನು ಕೊಡಗಿನಲ್ಲಿ ನೆಪಮಾಡಿಕೊಳ್ಳುತ್ತಿರು ವುದು ಯಾಕೆ ಎಂಬದು ರಾಜ್ಯದ ಎಲ್ಲೂ ಪ್ರಸ್ತುತ ಭಾರೀ ಕಟ್ಟಪ್ಪಣೆಗಳೇನೂ ಜಾರಿಯಲ್ಲಿಲ್ಲ. ಅಲ್ಲಲ್ಲಿ ನಡೆಯುವ ಕೆಲವಾರು ಕಾರ್ಯಕ್ರಮಗಳನ್ನು ಅವಲೋಕಿಸಿದರೆ ಇದು ಅರಿವಿಗೆ ಬರುತ್ತದೆ. ರಾಜಕೀಯ ಸಭೆಗಳು, ವಿವಿಧ ರಾಜಕೀಯ ಸಂಬAಧಿತ ಬೆಳವಣಿಗೆಗಳು... ಹಲವೆಡೆಗಳಲ್ಲಿ ಜಾತ್ರೆ-ಸಮಾರಂಭಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವುದನ್ನು ಎಲ್ಲರೂ ಗಮನಿಸುತ್ತಿದ್ದಾರೆ. ಆದರೆ ಇದು ಯಾವುದಕ್ಕೂ ಇಲ್ಲದ ನಿಯಮಗಳು ಕಳೆದ ವರ್ಷದಿಂದ ತುಲಾಸಂಕ್ರಮಣ ಸಮೀಪವಾಗುತ್ತಿದ್ದಂತೆ ಕೊಡಗಿಗೆ ಘೋಷಿಸಲ್ಪಡುತ್ತಿವೆ.

ಪ್ರಸ್ತುತ ವಾರಂತ್ಯಗಳಲ್ಲಿ ಸೇರಿದಂತೆ ಬಹುತೇಕ ದಿನಗಳಲ್ಲಿ ಪ್ರವಾಸಿಗರ ದಂಡೇ ಕೊಡಗಿನಲ್ಲಿ ಕಂಡುಬರುತ್ತಿದೆ. ಮೋಜು-ಮಸ್ತಿಗಳಿಗೂ ಕಡಿವಾಣವೇನೂ ಇಲ್ಲ. ತಲಕಾವೇರಿಗೆ ಆಗಮಿಸುವ ಕೊಡಗಿನ ನೈಜ ಭಕ್ತಾದಿಗಳಿಂದ ಇಂತಹ ಯಾವುದೇ ವಿಚಾರಗಳು ನಡೆಯುವುದಿಲ್ಲ. ಇಲ್ಲಿ ಜರುಗುವುದು ಕೇವಲ ದೈವಿಕ ಕೈಂಕರ್ಯ ಮಾತ್ರ. ಕ್ಷೇತ್ರಕ್ಕೆ ಆಗಮಿಸುವ ನೈಜ ಭಕ್ತರು ಈ ನಿಯಮವನ್ನು ಚಾಚೂ ತಪ್ಪದೆ ಕೇವಲ ತಮ್ಮ ಕಾರ್ಯಗಳಿಗೆ ಮಾತ್ರ ಆದ್ಯತೆ ನೀಡಿ ಮಾತೆಗೆ ನಮನ ಸಲ್ಲಿಸಿ ತಮ್ಮತಮ್ಮ ಮನೆಗಳಿಗೆ ಹಿಂದಿರುಗುತ್ತಾರೆ. ಇದು ಆಡಳಿತ ವರ್ಗಕ್ಕೂ, ಜನಪ್ರತಿನಿಧಿಗಳಿಗೂ ಅರಿವಿದೆ.

ಆದರೆ ಒಂದು ದಿನದ ಧಾರ್ಮಿಕ ಆಚರಣೆಯ ಪರಿಪಾಲನೆಗೆ ಅಗತ್ಯಕ್ಕೆ ಮೀರಿದ ನಿರ್ಬಂಧಗಳು, ಕಡಿವಾಣಗಳ ಮೂಲಕ ಕಾವೇರಿಯನ್ನು ಕಾವೇರಿಸುತ್ತಿರುವ ಪರಿಸ್ಥಿತಿಗೆ ತರುವುದು ಸರಿಯೇ ಎಂಬದು ಪ್ರಶ್ನೆಯಾಗಿದೆ.

-ಶಶಿ ಸೋಮಯ್ಯ