ಮಡಿಕೇರಿ, ಅ. ೪: ಕಾವೇರಿಯ ಉಗಮ ಸ್ಥಳ ತಲಕಾವೇರಿಯಲ್ಲಿ ಪ್ರತಿವರ್ಷ ತೀರ್ಥರೂಪಿಣಿಯಾಗಿ ದರ್ಶನ ನೀಡುವ ಕಾವೇರಿ ಮಾತೆಯ ದರ್ಶನಕ್ಕೆ ಜಿಲ್ಲಾಡಳಿತ ವಿಧಿಸಿರುವ ನಿರ್ಬಂಧಗಳನ್ನು ವಿವಿಧ ಸಂಘಟನೆಗಳು ಹಾಗೂ ಪ್ರಮುಖರು ವಿರೋಧಿಸಿದ್ದು, ಕೂಡಲೇ ನಿರ್ಬಂಧವನ್ನು ಹಿಂತೆಗೆದುಕೊಳ್ಳುವAತೆ ಆಗ್ರಹಿಸಲಾಗಿದೆ.

ಅಖಿಲ ಅಮ್ಮ ಕೊಡವ ಸಮಾಜ

ಗೋಣಿಕೊಪ್ಪಲು: ಕೊಡಗಿನ ಕಾವೇರಿ ಸಂಕ್ರಮಣದ ಸಂದರ್ಭ ತೀರ್ಥೋದ್ಭವಕ್ಕೆ ಯಾವುದೇ ನಿರ್ಬಂಧ ಬೇಡ. ಭಾಗಮಂಡಲದಿAದ ತಲಕಾವೇರಿವರೆಗೆ ಕಾಲ್ನಡಿಗೆಯಲ್ಲಿ ತೆರಳುವದು ಎಲ್ಲರಿಗೂ ಅಸಾಧ್ಯ.

ಭಕ್ತಾದಿಗಳಿಗೆ ಯಾವದೇ ನಿರ್ಬಂಧ ಹೇರದೆ ಮುಕ್ತ ಪ್ರವೇಶಕ್ಕೆ ಅವಕಾಶ ಕಲ್ಪಿಸುವದು ಉತ್ತಮ ಎಂದು ಅಖಿಲ ಅಮ್ಮ ಕೊಡವ ಸಮಾಜ ಅಧ್ಯಕ್ಷರು ಹಾಗೂ ಜಿ.ಪಂ. ಮಾಜಿ ಸದಸ್ಯ ಬಾನಂಡ ಪ್ರಥ್ಯು ಅಭಿಪ್ರಾಯಪಟ್ಟಿದ್ದಾರೆ.

ಭಾಗಮಂಡಲದಿAದ ಎಲ್ಲ ಭಕ್ತಾದಿಗಳಿಗೆ ತಲಕಾವೇರಿವರೆಗೆ ಬಸ್ ವ್ಯವಸ್ಥೆ ಕಲ್ಪಿಸಲಿ. ಇಲ್ಲವೇ ಖಾಸಗಿ ವಾಹನ ತಲಕಾವೇರಿವರೆಗೆ ತೆರಳಲು ಅನುಮತಿ ನೀಡಲಿ ಎಂದು ಪತ್ರಿಕಾ ಹೇಳಿಕೆ ನೀಡಿದ್ದಾರೆ.

ಧರ್ಮಸ್ಥಳ, ಕುಕ್ಕೆ ಸುಬ್ರಮಣ್ಯ, ತಿರುಪತಿ ಇತ್ಯಾದಿ ದೇವಸ್ಥಾನಗಳಲ್ಲಿ ಇಲ್ಲದ ನಿರ್ಬಂಧ ಕೊಡಗಿಗೂ ಬೇಡ. ಈ ಬಗ್ಗೆ ಜಿಲ್ಲಾಧಿಕಾರಿಗಳು, ಪೊಲೀಸ್ ಅಧೀಕ್ಷಕರು, ಸಂಬAಧಿಸಿದ ಜನಪ್ರತಿನಿಧಿಗಳು ಪುನರ್‌ವಿಮರ್ಶೆ ಮಾಡುವ ಮೂಲಕ ಭಕ್ತಾದಿಗಳಿಗೆ ತೀರ್ಥೋದ್ಭವ ವೀಕ್ಷಣೆಗೆ ಮುಕ್ತ ಅವಕಾಶ ಕಲ್ಪಿಸಲಿ ಎಂದು ಬಿ.ಎನ್. ಪ್ರಥ್ಯು ಒತ್ತಾಯಿಸಿದ್ದಾರೆ.

ಸಿಎನ್‌ಸಿ ನಾಚಪ್ಪ ಆಗ್ರಹ

ಮಡಿಕೇರಿ: ಕೋವಿಡ್ ವೈರಸ್‌ಪ್ರಮಾಣ ಅತ್ಯಂತ ಹೆಚ್ಚಿದ್ದಾಗಲೇ ಉತ್ತರ ಭಾರತದಲ್ಲಿ ಕುಂಬ ಮೇಳ ನಡೆಸಿ ೫೦ ಲಕ್ಷದಷ್ಟು ಜನರಿಗೆ ಅವಕಾಶ ಮಾಡಲಾಗಿತ್ತು. ಆದರೆ ತಲಕಾವೇರಿಗೆ ತೆರಳಲು ಮಾತ್ರ ನಿರ್ಬಂಧಗಳು ಏಕೆ ಎಂದು ಪ್ರಶ್ನಿಸಿರುವ ಸಿ.ಎನ್.ಸಿ. ಅಧ್ಯಕ್ಷ ಎನ್.ಯು ನಾಚಪ್ಪ, ತಾ.೧೬ ರಿಂದ ೧೮ ರವರೆಗೆ ೩ ದಿನಗಳ ಕಾಲ ಜಿಲ್ಲೆಗೆ ಪ್ರವಾಸಿಗರ ಆಗಮನವನ್ನು ನಿರ್ಬಂಧಿಸಿ ಭಕ್ತಾದಿಗಳಿಗೆ ತಲಕಾವೇರಿಗೆ ಮುಕ್ತ ಪ್ರವೇಶಕ್ಕೆ ಅವಕಾಶ ನೀಡುವಂತೆ ಆಗ್ರಹಿಸಿದ್ದಾರೆ.

ತೀರ್ಥಕ್ಷೇತ್ರ ತಲಕಾವೇರಿಯು ಕೊಡವರಿಗೆ ಅತ್ಯಂತ ಪವಿತ್ರ ಸ್ಥಳವಾಗಿದೆ. ಪ್ರತಿ ವರ್ಷ ತುಲಾ ಸಂಕ್ರಮಣದAದು ತಲಕಾವೇರಿಗೆ ಭೇಟಿ ನೀಡುವುದು ನಮ್ಮ ಸಂಪ್ರದಾಯ. ಕೊಡವರಿಗೆ ತಲಕಾವೇರಿಯಲ್ಲದೆ ಇತರ ಯಾವುದೇ ತೀರ್ಥಕ್ಷೇತ್ರ ಇಲ್ಲ. ತೀರ್ಥೋದ್ಭವದಲ್ಲಿ ಪಾಲ್ಗೊಳ್ಳಲು ತಮ್ಮ ಕಚೇರಿಗಳಿಗೆ ರಜೆ ಹಾಕಿ ವಿವಿಧೆಡೆಗಳಿಂದ ಕೊಡವರು ಆಗಮಿಸುತ್ತಾರೆ. ಆದರೆ ಕಳೆದೆರಡು ವರ್ಷಗಳಿಂದ ನಮಗೆ ಅನ್ಯಾಯವಾಗಿದೆ. ಸಂವಿಧಾನದಲ್ಲೇ ಸಾಂಪ್ರದಾಯಿಕ ಸ್ವಾತಂತ್ರದ ಬಗ್ಗೆ ಉಲ್ಲೇಖವಾಗಿದ್ದರೂ ಕೆಲವರು ಕೋವಿಡ್ ಸಂದರ್ಭದ ಬಳಕೆ ಮಾಡಿಕೊಂಡು ನಮ್ಮ ವಿರುದ್ಧ ಪಿತೂರಿ ನಡೆಸುತ್ತಿದ್ದಾರೆ ಎಂದು ಸಿ.ಎನ್.ಸಿ ಅಧ್ಯಕ್ಷ ಎನ್.ಯು ನಾಚಪ್ಪ ಅವರು ಆರೋಪಿಸಿದ್ದಾರೆ.

ಜಿಲ್ಲಾ ಕಾಂಗ್ರೆಸ್ ಎಚ್ಚರಿಕೆ

ಪೊನ್ನಂಪೇಟೆ: ಕೊಡಗಿನ ಪವಿತ್ರ ಕಾವೇರಿ ತೀರ್ಥೋದ್ಭವ ವಿಚಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಅನಗತ್ಯ ಹೇಳಿಕೆ ತೀವ್ರ ಹಾಸ್ಯಾಸ್ಪದವಾಗಿದೆ. ತೀರ್ಥೋದ್ಭವವನ್ನು ರಾಜಕೀಯವಾಗಿ ಬಳಸಿಕೊಳ್ಳಲು ಯಾರೂ ಮುಂದಾಗಬಾರದು. ಈ ವಿಷಯದಲ್ಲಿ ಕಾವೇರಿಯ ಅಸಂಖ್ಯಾತ ಭಕ್ತಾದಿಗಳ ಭಾವನೆಗೆ ಬೆಲೆ ದೊರೆಯಬೇಕು. ಆದ್ದರಿಂದ ಜನಪ್ರತಿನಿಧಿಗಳು ಮತ್ತು ಜಿಲ್ಲಾಡಳಿತ ಭಕ್ತರ ಧಾರ್ಮಿಕ ಭಾವನೆಗೆ ಸ್ಪಂದಿಸಲಿ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ತನ್ನ ನಿಲುವು ಪ್ರಕಟಿಸಿದೆ.

ಈ ಕುರಿತು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಸಮಿತಿ ಕಾರ್ಯಾಧ್ಯಕ್ಷರಾದ ತೀತಿರ ಧರ್ಮಜ ಉತ್ತಪ್ಪ ಅವರು, ಭಕ್ತರ ಭಾವನೆಗೆ ವಿರುದ್ಧವಾಗಿ ಈ ಬಾರಿಯೂ ಜಿಲ್ಲಾಡಳಿತ ಅಂತಿಮ ನಿರ್ಧಾರ ತೆಗೆದುಕೊಂಡರೆ ಕೊಡಗಿನ ಜನರ ತೀವ್ರ ಪ್ರತಿರೋಧವನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

(ಮೊದಲ ಪುಟದಿಂದ) ಕಾವೇರಿ ತೀರ್ಥೋದ್ಭವದಂದು ವಿಧಿವಿಧಾನ ಪೂರೈಸಲು ಭಕ್ತಾದಿಗಳಿಗೆ ಮುಕ್ತ ಅವಕಾಶ ದೊರೆಯಬೇಕು. ಇದರಲ್ಲಿ ಯಾವ ರಾಜಿಯ ಪ್ರಶ್ನೆಯೇ ಇಲ್ಲ. ಜೊತೆಗೆ ಭಕ್ತಾದಿಗಳನ್ನು ಹೊರತುಪಡಿಸಿ ಮೋಜು ಮಸ್ತಿಗಾಗಿ ಜಿಲ್ಲೆಗೆ ಬರುವ ಪ್ರವಾಸಿಗರಿಗೆ ತೀರ್ಥೋದ್ಭವದ ಸಮಯದಲ್ಲಿ ನಿರ್ಬಂಧ ಹೇರಲು ಪಕ್ಷದ ಯಾವುದೇ ಆಕ್ಷೇಪಣೆ ಇಲ್ಲ ಎಂದು ಸ್ಪಷ್ಟಪಡಿಸಿರುವ ಧರ್ಮಜ ಉತ್ತಪ್ಪ, ಕೋವಿಡ್ ನಿಯಂತ್ರಣಕ್ಕೆ ಸಂಬAಧಿಸಿದAತೆ ಜನರ ಹಿತಾಸಕ್ತಿಗೆ ಪೂರಕವಾಗಿ ಜಿಲ್ಲಾಡಳಿತದ ವತಿಯಿಂದ ತೆಗೆದುಕೊಳ್ಳುವ ಯಾವುದೇ ತೀರ್ಮಾನಗಳಿಗೆ ಪಕ್ಷದ ಸಂಪೂರ್ಣ ಬೆಂಬಲವಿದೆ ಎಂದು ಅವರು ತಿಳಿಸಿದ್ದಾರೆ.

ಗೋಷ್ಠಿಯಲ್ಲಿ ಉಪಸ್ಥಿತರಿದ್ದ ಜಿಲ್ಲಾ ಕಾಂಗ್ರೆಸ್ ವಕ್ತಾರರಾದ ಆಪಟ್ಟೀರ ಟಾಟು ಮೊಣ್ಣಪ್ಪ ಮಾತನಾಡಿ, ಕೊಡಗಿನ ಧಾರ್ಮಿಕ ಹಿನ್ನೆಲೆ ಮತ್ತು ಇಲ್ಲಿನ ಆಚಾರ ವಿಚಾರಗಳ ಬಗ್ಗೆ ಕಿಂಚಿತ್ತೂ ಅರಿವಿಲ್ಲದ ಜಿಲ್ಲಾ ಉಸ್ತುವಾರಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿಯವರ ಹೇಳಿಕೆ ಅವೈಜ್ಞಾನಿಕವಾಗಿದೆ ಎಂದು ಅವರು ಕಿಡಿಕಾರಿದ್ದಾರೆ.

ಗೋಷ್ಠಿಯಲ್ಲಿ ಗೋಣಿಕೊಪ್ಪಲು ನಗರ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಕುಲ್ಲಚಂಡ ಪ್ರಮೋದ್ ಗಣಪತಿ ಉಪಸ್ಥಿತರಿದ್ದರು.

ಕೆ.ಪಿ. ಚಂದ್ರಕಲಾ ಆಕ್ರೋಶ

ತುಲಾ ಸಂಕ್ರಮಣದ ದಿನ ತಲಕಾವೇರಿಯಲ್ಲಿ ಭಕ್ತರ ಪ್ರವೇಶಕ್ಕೆ ಸರ್ಕಾರ ನಿರ್ಬಂಧ ಹೇರಿರುವುದಕ್ಕೆ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷೆ ಕೆ.ಪಿ. ಚಂದ್ರಕಲಾ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾವೇರಿ ಮಾತೆಯ ಭಕ್ತರ ಭಾವನೆಗಳಿಗೆ ಧಕ್ಕೆಯಾಗುವ ರೀತಿಯಲ್ಲಿ ನಿರ್ಧಾರಗಳನ್ನು ಉಸ್ತುವಾರಿ ಸಚಿವರು ಜಿಲ್ಲೆಯ ಶಾಸಕರ ಕುಮ್ಮಕ್ಕಿನಿಂದ ಪ್ರಕಟಿಸಿರುವುದು ಸರಿಯಲ್ಲ. ಕೊಡಗಿನ ಜನರಿಗೆ ನಿರ್ಬಂðಧ ವಿಧಿಸಲು ಉಸ್ತುವಾರಿ ಸಚಿವರು ಯಾರು? ಎಂದು ಚಂದ್ರಕಲಾ ಪ್ರಶ್ನಿಸಿದ್ದಾರೆ .ಕಾವೇರಿ ಮಾತೆ ಉಸ್ತುವಾರಿ ಸಚಿವರ ಅಥವಾ ಬಿಜೆಪಿ ಶಾಸಕರ ಖಾಸಗಿ ಸ್ವತ್ತಲ್ಲ. ಆರೂವರೆ ಲಕ್ಷ ಕೊಡಗಿನ ಜನರ ಧಾರ್ಮಿಕ ಸ್ವತ್ತಾಗಿದ್ದು, ಪ್ರವೇಶಕ್ಕೆ ಯಾವ ದೊಣ್ಣೆನಾಯಕನ ಅಪ್ಪಣೆ ಬೇಕಾಗಿಲ್ಲ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕೋವಿಡ್ ಮಾರ್ಗಸೂಚಿಗಳನ್ನು ಜಾರಿ ಮಾಡಿ ಸೂಕ್ತ ಬಂದೋಬಸ್ತ್ ಕಲ್ಪಿಸುವುದು ಜಿಲ್ಲಾಡಳಿತದ ಜವಾಬ್ದಾರಿಯಾಗಿದ್ದು ಅವರ ಕೆಲಸ ಅವರು ಮಾಡುತ್ತಾರೆ. ಕಾನೂನು ಸುವ್ಯವಸ್ಥೆ ಪೊಲೀಸ್ ಇಲಾಖೆಯ ಹೊಣೆಗಾರಿಕೆ. ಅದು ಬಿಟ್ಟು ಸರ್ಕಾರದ ಮೂಗು ತೂರಿಸುವಿಕೆ ಯಾಕೆ ಎಂದು ಚಂದ್ರಕಲಾ ಟೀಕಿಸಿದ್ದಾರೆ.

ವಾಹನ ಪ್ರವೇಶವಿಲ್ಲ, ಎಂಟು ಕಿಲೋಮೀಟರ್ ನಡೆದುಕೊಂಡು ಹೋದರೆ ಅಭ್ಯಂತರವಿಲ್ಲ ಎಂದು ಹೇಳಿರುವುದು ನೋಡಿದರೆ ಇವರ ಅಜ್ಞಾನದ ಪರಮಾವಧಿ ಎದ್ದು ಕಾಣುತ್ತದೆ. ಹಾಗಾದರೆ ನಡೆದುಕೊಂಡು ಹೋದರೆ ಎಷ್ಟು ಜನ ಬೇಕಾದರೂ ಸೇರಬಹುದೇ ಎಂದು ಪ್ರಶ್ನಿಸಿದ್ದಾರೆ. ಕಾವೇರಿ ತಾಯಿಯ ಭಕ್ತರು ತೀರ್ಥೊದ್ಭವದ ಪವಿತ್ರ ಕ್ಷಣಗಳನ್ನು ಭಾವನಾತ್ಮಕವಾಗಿ ಕಣ್ತುಂಬಿಕೊಳ್ಳಲು ಬರುತ್ತಾರೆಯೇ ಹೊರತು ಟ್ರೆಕ್ಕಿಂಗ್‌ಗೆ ಬರುವುದಿಲ್ಲ. ವಯಸ್ಸಾದವರು, ಮಕ್ಕಳು, ದುರ್ಬಲರು ಹೇಗೆ ಅಷ್ಟು ದೂರ ನಡೆಯಲು ಸಾಧ್ಯ. ಯಾವ ಜಿಲ್ಲೆಯಲ್ಲೂ ಇಲ್ಲದ ನಿರ್ಬಂಧ ಕೊಡಗಿನಲ್ಲಿ ಯಾಕೆ ಇದೆ. ಇದರ ಹಿಂದೆ ಯಾರ ಕುತಂತ್ರವಿದೆ ಎಂದು ಬಹಿರಂಗ ಪಡಿಸಲು ಚಂದ್ರಕಲಾ ಒತ್ತಾಯಿಸಿದ್ದಾರೆ .

ತಕ್ಷಣವೇ ಉಸ್ತುವಾರಿ ಸಚಿವರು ಈ ನಿರ್ಬಂಧವನ್ನು ಹಿಂಪಡೆಯಬೇಕು. ಇಲ್ಲದಿದ್ದರೆ ತಾವೇ ಮುಂದೆ ನಿಂತು ಕಾವೇರಿ ಭಕ್ತರೊಂದಿಗೆ ಸೇರಿ ವಾಹನಗಳಲ್ಲಿ ತಲಕಾವೇರಿ ಪ್ರವೇಶಿಸುವುದಾಗಿ ಕೆ.ಪಿ. ಚಂದ್ರಕಲಾ ಎಚ್ಚರಿಕೆ ನೀಡಿದ್ದಾರೆ.

ಮಹಿಳಾ ಘಟಕ ಒತ್ತಾಯ

ಮಡಿಕೇರಿ: ನಾಡಿನ ಜೀವನದಿ ಕಾವೇರಿಯ ಉಗಮ ಸ್ಥಾನ ತಲಕಾವೇರಿಯಲ್ಲಿ ತಾ. ೧೭ ರಂದು ನಡೆಯುವ ತೀರ್ಥೋದ್ಭವದ ಸಂದರ್ಭ ಪವಿತ್ರ ಕ್ಷೇತ್ರದ ದರ್ಶನಕ್ಕೆ ಕೊಡಗಿನ ಭಕ್ತರಿಗೆ ಮುಕ್ತ ಅವಕಾಶ ಕಲ್ಪಿಸುವಂತೆ ಫೆಡರೇಶನ್ ಆಫ್ ಕೊಡವ ಸಮಾಜದ ಮಹಿಳಾ ವಿಂಗ್ ಜಿಲ್ಲಾಡಳಿತವನ್ನು ಒತ್ತಾಯಿಸಿದೆ.

ಪತ್ರಿಕಾ ಪ್ರಕಟಣೆ ನೀಡಿರುವ, ಮಹಿಳಾ ವಿಂಗ್‌ನ ಅಧ್ಯಕ್ಷೆ ಚಿರಿಯಪಂಡ ಇಮ್ಮಿ ಉತ್ತಪ್ಪ, ಕಾರ್ಯದರ್ಶಿ ಬೊಳ್ಳಮ್ಮ, ಖಜಾಂಚಿ ಶಾಲಿನಿ ಕಾರ್ಯಪ್ಪ ಹಾಗೂ ಅನಿತಾ ಕಾರ್ಯಪ್ಪ, ಕಾವೇರಿ ನಮ್ಮ ಕುಲದೇವತೆಯಾಗಿದ್ದು, ಕೊಡಗಿನ ಆರಾಧ್ಯ ದೇವಿಯಾಗಿದ್ದಾಳೆ. ತುಲಾಸಂಕ್ರಮಣದಲ್ಲಿ ಪಿಂಡ ಪ್ರದಾನ ಮತ್ತು ವಿವಿಧ ಧಾರ್ಮಿಕ ವಿಧಿ ವಿಧಾನಗಳನ್ನು ಮಾಡುವುದು ಕೊಡವರ ಆಚಾರವಾಗಿದೆ. ಇದಕ್ಕೆ ಯಾರೂ ಅಡ್ಡಿಪಡಿಸಬಾರದೆಂದು ಮನವಿ ಮಾಡಿದ್ದಾರೆ.

ಕೊಡವರು ತಲಕಾವೇರಿಗೆ ತೆರಳಿ ಮಾತೆ ಕಾವೇರಿಗೆ ವಿಶೇಷ ಪೂಜೆ ಸಲ್ಲಿಸಿ ತೀರ್ಥವನ್ನು ಮನೆಗೆ ತರುವುದು ತಲೆತಲಾಂತರಗಳಿAದ ನಡೆದುಕೊಂಡು ಬಂದ ಪದ್ಧತಿಯಾಗಿದೆ. ಇದಕ್ಕೆ ಅಡಚಣೆಯಾಗುವ ರೀತಿಯಲ್ಲಿ ಕೋವಿಡ್ ನೆಪವೊಡ್ಡಿ ನಿರ್ಬಂಧಗಳನ್ನು ಹೇರುವುದು ಸರಿಯಲ್ಲವೆಂದು ತಿಳಿಸಿರುವ ಪ್ರಮುಖರು, ತಲಕಾವೇರಿಯಲ್ಲಿ ಪ್ರವಾಸಿಗರಿಗೆ ಕಡಿವಾಣ ಹಾಕಿ ಕೊಡಗಿನ ಭಕ್ತರಿಗೆ ಮುಕ್ತ ಅವಕಾಶ ನೀಡಬೇಕೆಂದು ಒತ್ತಾಯಿಸಿದ್ದಾರೆ.

ಕೊಡವಾಮೆರ ಕೊಂಡಾಟ

ಮಡಿಕೇರಿ: ಪತ್ರಿಕಾ ಪ್ರಕಟಣೆ ನೀಡಿರುವ ಕೊಡವಾಮೆರ ಕೊಂಡಾಟ ಸಂಘಟನೆ ಪ್ರಮುಖರು ನಿರ್ಲಕ್ಷö್ಯ ವಹಿಸಿದರೆ ಮುಂದೆ ಎದುರಾಗಬಹುದಾದ ಎಲ್ಲಾ ಸಂಘರ್ಷ ಹಾಗೂ ಬೆಳವಣಿಗೆಗಳಿಗೆ ಜನಪ್ರತಿನಿಧಿಗಳೇ ನೇರ ಹೊಣೆಗಾರರಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ವರ್ಷಕೊಮ್ಮೆ ತುಲಾಸಂಕ್ರಮಣದAದು ತೀರ್ಥ ರೂಪಿಣಿಯಾಗಿ ಬಂದು ದರ್ಶನ ನೀಡಿ ತನ್ನ ಇರುವಿಕೆಯನ್ನು ತೋರ್ಪಡಿಸಿ ತನ್ನ ಮಕ್ಕಳ ಹಕ್ಕು ಬಾಧ್ಯತೆಯನ್ನು ಪೂರೈಸಿ ಕೊಡುವೆನೆಂದು ವಚನವಿತ್ತ ದಿನದಿಂದ ಇಂದಿನವರೆಗೂ ಕೊಟ್ಟ ಮಾತಿಗೆ ತಪ್ಪದೆ ಮಾತೆ ಕಾವೇರಿ ದರ್ಶನ ನೀಡುತ್ತಿದ್ದಾಳೆ. ಆದರೆ ಕಳೆದ ಒಂದೆರಡು ವರ್ಷಗಳಿಂದ ಸರಕಾರಿ ನಿಯಮಗಳು ಕೊಡವರಿಗೆ ಕಾವೇರಿ ಮಾತೆಯ ದರ್ಶನ ಸಿಗದಂತೆ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.

ಉಸ್ತುವಾರಿ ಸಚಿವರ ಸಭೆಯಲ್ಲಿ ಮೌನ ವಹಿಸಿ ಇದೀಗ ಪ್ರತ್ಯೇಕ ಸಭೆ ನಡೆಸುವ ಜನಪ್ರತಿನಿಧಿಗಳ ಕ್ರಮವನ್ನು ಸಂಘಟನೆ ಪ್ರಶ್ನಿಸಿದೆ. ತಾ. ೭ ರಂದು ನಡೆಯುವ ಸಭೆಯಲ್ಲಿ ಜನಪ್ರತಿನಿಧಿಗಳು ಕೊಡಗಿನ ಭಕ್ತರ ಭಾವನೆಗೆ ಪೂರಕವಾದ ನಿರ್ಧಾರವನ್ನು ಕೈಗೊಳ್ಳಬೇಕು. ತಪ್ಪಿದಲ್ಲಿ ಮುಂದೆ ಆಗುವ ಅಚಾತುರ್ಯಗಳಿಗೆ ಜನಪ್ರತಿನಿಧಿಗಳೇ ಹೊಣೆಗಾರರಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಮಕ್ಕಂದೂರು ಕೊಡವ ಸಮಾಜ

ಮಡಿಕೇರಿ: ಪ್ರತಿವರ್ಷ ತುಲಾಸಂಕ್ರಮಣದAದು ತಲಕಾವೇರಿ ಕ್ಷೇತ್ರದಲ್ಲಿ ಕಾವೇರಿ ಮಾತೆ ತೀರ್ಥರೂಪಿಣಿಯಾಗಿ ದರ್ಶನ ನೀಡುವ ಪವಿತ್ರ ಕ್ಷಣವನ್ನು ಕಣ್ತುಂಬಿಕೊಳ್ಳುವುದು ಕೊಡಗಿನ ಭಕ್ತರ ಹಕ್ಕಾಗಿದ್ದು, ಇದನ್ನು ಕಸಿದುಕೊಳ್ಳುವ ಪ್ರಯತ್ನವನ್ನು ಯಾರೂ ಮಾಡಬಾರದೆಂದು ಮಕ್ಕಂದೂರು ಕೊಡವ ಸಮಾಜ ಒತ್ತಾಯಿಸಿದೆ.

ಅನಾದಿ ಕಾಲದಿಂದಲೂ ಕೊಡಗಿನ ಮೂಲ ನಿವಾಸಿಗಳು ಕಾವೇರಿ ತೀರ್ಥೋದ್ಭವದ ಸಂದರ್ಭ ತಲಕಾವೇರಿಯಲ್ಲಿ ಹಾಜರಿದ್ದು, ಜೀವನದಿಯ ದರ್ಶನಕ್ಕೆ ಸಾಕ್ಷಿಯಾಗುತ್ತಿದ್ದರು. ಆದರೆ ಇತ್ತೀಚಿನ ವರ್ಷಗಳಲ್ಲಿ ಕೊಡಗಿನ ಭಕ್ತರು ಅದರಲ್ಲೂ ಕೊಡವರು ತುಲಾಸಂಕ್ರಮಣದಲ್ಲಿ ಪಾಲ್ಗೊಳ್ಳುವುದೇ ಅಪರಾಧ ಎನ್ನುವ ರೀತಿ ಆಡಳಿತ ವ್ಯವಸ್ಥೆಗಳು ಅಡೆತಡೆಗಳನ್ನು ಒಡ್ಡುವ ಪ್ರಯತ್ನ ಮಾಡುತ್ತಿವೆ.

ರಾಜ್ಯದ ಇತರೆಡೆ ಎಲ್ಲಾ ಧಾರ್ಮಿಕ ಕಾರ್ಯಗಳು, ಸಭೆ, ಸಮಾರಂಭಗಳು ಯಾವುದೇ ನಿಯಮಗಳಿಗೆ ಒಳಪಡದೆ ನಡೆಯುತ್ತಿದೆ. ಆದರೆ ಪ್ರಜ್ಞಾವಂತ ಜನರಿರುವ ಕೊಡಗಿನಲ್ಲಿ ಮಾತ್ರ ಕೋವಿಡ್ ನೆಪದಲ್ಲಿ ನಿರ್ಬಂಧಗಳನ್ನು ಹೇರಲಾಗುತ್ತಿದೆ. ತಲಕಾವೇರಿಗೆ ತೆರಳದೆ ಇರಲು ಸಾಧ್ಯವಿಲ್ಲ. ಆದ್ದರಿಂದ ಸರ್ಕಾರ ಕೊಡಗಿನ ಭಕ್ತರಿಗೆ ನಿರ್ಬಂಧ ಹೇರದೆ ಪುಣ್ಯಕ್ಷೇತ್ರದಲ್ಲಿ ಅಗತ್ಯ ಸೌಲಭ್ಯಗಳನ್ನು ಒದಗಿಸಿಕೊಟ್ಟು ಸಹಕಾರ ನೀಡಬೇಕು ಎಂದು ತಿಳಿಸಿದ್ದಾರೆ.

ಚೆಟ್ಟಳ್ಳಿ ಕೊಡವ ಸಮಾಜ

ಚೆಟ್ಟಳ್ಳಿ: ವರ್ಷಕೊಮ್ಮೆ ತೀರ್ಥ ರೂಪಿಣಿಯಾಗಿ ಪವಿತ್ರಕ್ಷೇತ್ರ ತ¯ಕಾವೇರಿಯಲ್ಲಿ ಕಾಣಿಸಿಕೊಳ್ಳುವ ಕುಲದೇವಿ ಕಾವೇರಿ ಮಾತೆಯನ್ನು ಕಂಡು ಪುನೀತರಾಗಲು ತಲತಲಾಂತರದಿAದಲೂ ವರ್ಷಂಪ್ರತಿ ತಲಕಾವೇರಿಗೆ ತೆರಳುವ ಸಂಪ್ರದಾಯವಿದೆ. ಉಸ್ತುವಾರಿ ಸಚಿವರಾದ ಕೋಟಾ ಶ್ರೀನಿವಾಸ್ ಪೂಜಾರಿ ಅವರು ನಿರ್ಬಂಧ ಹೇರಿರುವ ಕ್ರಮ ಖಂಡನೀಯವೆAದು ಚೆಟ್ಟಳ್ಳಿ ಕೊಡವ ಸಮಾಜದ ಅಧ್ಯಕ್ಷ ಮುಳ್ಳಂಡರತ್ತು ಚಂಗಪ್ಪ ಹಾಗೂ ಪದಾಧಿಕಾರಿಗಳು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ದಿನೇದಿನೇ ಪ್ರವಾಸಿಗರು ತಂಡೋಪ ತಂಡವಾಗಿ ಕೊರೊನಾ ನಿಯಮ ಮೀರಿ ಕೊಡಗಿನ ಪ್ರವಾಸಿ ಕೇಂದ್ರ ಹಾಗೂ ದೇವಾಲಯಗಳಲ್ಲಿ ತುಂಬಿ ತುಳುಕುತ್ತಿದ್ದಾರೆ. ಅದನ್ನು ನಿಯಂತ್ರಿಸಲು ಜಿಲ್ಲಾಡಳಿತಕ್ಕಾಗಲಿ ಉಸ್ತುವಾರಿ ಸಚಿವರಿಗಾಗಲಿ ಸಾಧ್ಯವಾಗುತ್ತಿಲ್ಲ. ಕೊಡಗಿನ ಮೂಲ ನಿವಾಸಿಗಳನ್ನು ಕುಲದೇವಿಯು ತೀರ್ಥ ರೂಪಿಣಿಯಾಗಿ ಬರುವ ಸಂದರ್ಭ ಪವಿತ್ರಕ್ಷೇತ್ರ ತಲಕಾವೇರಿಗೆ ಭಾಗಮಂಡಲದಿAದ ಕಾಲ್ನಡಿಗೆಯಲ್ಲಿ ತೆರಳಬೇಕೆನ್ನುವ ಕ್ರಮ ಸರಿಯಲ್ಲ; ಮೂಲ ನಿವಾಸಿಗಳಿಗೆ ಧಕ್ಕೆ ತರಬೇಡಿ; ತಮ್ಮ ಆದೇಶವನ್ನು ಹಿಂಪಡೆಯಿರಿ ಎಂದು ತಿಳಿಸಿದ್ದಾರೆ.

ಯುವ ಸೇನೆ ವಿರೋಧ

ಮಡಿಕೇರಿ: ತಲಕಾವೇರಿಯಲ್ಲಿ ನಡೆಯುವ ಪವಿತ್ರ ತೀರ್ಥೋದ್ಭವ ಸಂದರ್ಭದಲ್ಲಿ ಕೊಡಗಿನ ಭಕ್ತಾದಿಗಳಿಗೆ ಕೋವಿಡ್ ನೆಪವೊಡ್ಡಿ ನಿರ್ಬಂಧ ಹೇರಿರುವುದು ಸರಿಯಲ್ಲ ಎಂದು ಕೊಡಗು ಯುವಸೇನೆ ಹೇಳಿದೆ.

ವರ್ಷಕ್ಕೊಮ್ಮೆ ತೀರ್ಥ ಸ್ವರೂಪಿಣಿಯಾಗಿ ಉದ್ಭವಿಸುವ ಕಾವೇರಿ ಮಾತೆಯನ್ನು ಕಣ್ತುಂಬಿಕೊಳ್ಳಲು ಭಕ್ತರು ಭಾವಪರವಶದೊಂದಿಗೆ ಪ್ರತಿವರ್ಷ ಕಾಯುತ್ತಿರುತ್ತಾರೆ. ಎಲ್ಲೆಡೆ ವಿಜೃಂಭಣೆಯಿAದ ವಿವಿಧ ಕಾರ್ಯಕ್ರಮಗಳು ನಡೆಯುತ್ತಿರುವಾಗ ಕೊರೊನಾ ನೆಪವೊಡ್ಡಿ ಕೊಡಗಿನಲ್ಲಿ ಮಾತ್ರ ನಡೆಯುವ ಕಾರ್ಯಕ್ರಮಗಳಿಗೆ ನಿರ್ಬಂಧವನ್ನು ಹೇರುತ್ತಿರುವುದನ್ನು ಕೊಡಗು ಯುವ ಸೇನೆ ವಿರೋಧಿಸುವುದಾಗಿ ಪ್ರಮುಖರಾದ ಕುಲದೀಪ್ ಪೂಣಚ್ಚ ಹಾಗೂ ಮಾಚೆಟ್ಟಿರ ಸಚಿನ್ ಮಂದಣ್ಣ ಆಗ್ರಹಿಸಿದ್ದಾರೆ.

ಹರೀಶ್ ಬೋಪಣ್ಣ ಆಗ್ರಹ

ಮಡಿಕೇರಿ: ಜಿಲ್ಲಾ ಉಸ್ತುವಾರಿ ಸಚಿವರು ಕೊಡಗಿನ ಭಕ್ತಾದಿಗಳಿಗೆ ತೀರ್ಥೋದ್ಭವ ವೀಕ್ಷಣೆಗೆ ಹೇರಿರುವ ನಿರ್ಬಂಧವನ್ನು ಹಿಂತೆಗೆದುಕೊAಡು ಪ್ರವೇಶಾವಕಾಶ ಕಲ್ಪಿಸುವಂತೆ ಕಾಂಗ್ರೆಸ್ ಮುಖಂಡ ಕದ್ದಣಿಯಂಡ ಹರೀಶ್ ಬೋಪಣ್ಣ ಆಗ್ರಹಿಸಿದ್ದಾರೆ. ಪ್ರವಾಸಿಗರನ್ನು ನಿರ್ಬಂಧಿಸಿ; ಕೊಡಗಿನ ಕಾವೇರಿ ಭಕ್ತರಿಗೆ ಅವಕಾಶ ಕಲ್ಪಿಸಿ ಎಂದು ತಿಳಿಸಿದ್ದಾರೆ.

ಶಿವು ಮಾದಪ್ಪ ಆಗ್ರಹ

ಗೋಣಿಕೊಪ್ಪ ವರದಿ: ತೀರ್ಥೋದ್ಭವಕ್ಕೆ ಭಾಗಮಂಡಲದಿAದ ಕಾಲ್ನಡಿಗೆಯಲ್ಲಿ ಭಕ್ತರು ತೆರಳಬೇಕು ಎಂದು ಹೊರಡಿಸಿರುವ ಆದೇಶ ಹಿಂಪಡೆಯಬೇಕು ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಮುಕ್ಕಾಟೀರ ಶಿವು ಮಾದಪ್ಪ ಒತ್ತಾಯಿಸಿದ್ದಾರೆ.

ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಸ್ಥಳೀಯ ಶಾಸಕರು, ಸಂಸದರು, ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ ಅವರಿಂದ ಅಭಿಪ್ರಾಯ ಪಡೆದು ಆದೇಶ ನೀಡಬೇಕಿತ್ತು. ಆದರೆ ಅವರು ಪೂರ್ವ ನಿರ್ಧಾರಿತ ನಿಯಮ ಜಾರಿ ಮಾಡಿದ್ದಾರೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ಶಾಸಕರುಗಳು ಕೂಡ ಕೊಡಗಿನವರೇ ಆಗಿದ್ದಾರೆ. ಅವರ ಅಭಿಪ್ರಾಯ ಕೇಳದೆ ಏಕಾಏಕಿ ನಿರ್ಧಾರ ಸರಿಯಲ್ಲ. ಕೊರೊನಾ ಸೋಂಕು ನಿಯಂತ್ರಣಕ್ಕೆ ಕ್ರಮ ಅಗತ್ಯ. ಅದೇ ನೆಪದಲ್ಲಿ ಭಕ್ತರನ್ನು ದೂರ ಇಡುವ ಪ್ರಯತ್ನ ಬೇಡ. ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ ವಿದ್ಯಾವಂತರು. ಇವರ ಅಭಿಪ್ರಾಯಕ್ಕೂ ಮನ್ನಣೆ ನೀಡಬೇಕು. ಭಕ್ತರಿಗೆ ಅನುಕೂಲ ಕಲ್ಪಿಸಬೇಕು. ಇದರಂತೆ ತೀರ್ಥೋದ್ಭವ ಸಂದರ್ಭವೂ, ಒಂದಷ್ಟು ನಿಯಮದೊಂದಿಗೆ ಜನರಿಗೆ ಅವಕಾಶ ನೀಡಬೇಕು. ಬಿಜೆಪಿ ಪಕ್ಷ ದೇಶಾದ್ಯಂತ ದೇವಸ್ಥಾನ ಒಡೆಯುವ ಕಾರ್ಯದಲ್ಲಿ ತಲ್ಲೀನವಾಗಿದೆ. ಇದರಂತೆ ಕಾವೇರಮ್ಮ ದರ್ಶನಕ್ಕೂ ನಿರ್ಬಂಧ ಹೇರುತ್ತಿದೆ ಎಂದು ಆರೋಪಿಸಿದರು. ಸ್ಥಳೀಯ ಶಾಸಕರು, ಸಂಸದರು ಕೂಡ ಈ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಲಿ ಎಂದರು.

ಗೋಷ್ಠಿಯಲ್ಲಿ ಜಿ.ಪಂ. ಮಾಜಿ ಸದಸ್ಯ ಕೆ.ಎಂ. ಬಾಲಕೃಷ್ಣ ಇದ್ದರು.

ಜನಪ್ರತಿನಿಧಿಗಳು ಮನವರಿಕೆ ಮಾಡಿಕೊಡಲಿ

ಮಡಿಕೇರಿ: ಕಾವೇರಿ ತುಲಾ ಸಂಕ್ರಮಣದ ಕುರಿತು ಜಿಲ್ಲಾ ಉಸ್ತುವಾರಿ ಸಚಿವರು ಪ್ರಕಟಿಸಿರುವ ನಿರ್ಧಾರ ಗೊಂದಲದಿAದ ಕೂಡಿದ್ದು, ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಇಲ್ಲಿನ ಕಟ್ಟುಪಾಡುಗಳ ಬಗ್ಗೆ ಮನವರಿಕೆ ಮಾಡಿಕೊಡುವ ಅಗತ್ಯವಿದೆ ಎಂದು ಪೀಪಲ್ ಮೂವ್‌ಮೆಂಟ್ಸ್ ಫಾರ್ ಹ್ಯೂಮನ್ ರೈಟ್ಸ್ ಸಂಘಟನೆಯ ಜಿಲ್ಲಾಧ್ಯಕ್ಷ ಹರೀಶ್ ಜಿ. ಆಚಾರ್ಯ ಅಭಿಪ್ರಾಯಪಟ್ಟಿದ್ದಾರೆ.

ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಕಳೆದ ಒಂದು ತಿಂಗಳಿನಿAದ ಕೊಡಗು ಜಿಲ್ಲೆಗೆ ಸಾವಿರಾರು ಪ್ರವಾಸಿಗರು ಆಗಮಿಸುತ್ತಿದ್ದಾರೆ. ಇವರಿಗಿಲ್ಲದ ನಿರ್ಬಂಧಗಳು ಕೊಡಗಿನ ಭಕ್ತರಿಗೆ ಏಕೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಹೊರ ಜಿಲ್ಲೆಯವರಾಗಿದ್ದು, ಕೊಡಗಿನ ಆಚಾರ, ವಿಚಾರಗಳ ಬಗ್ಗೆ ಮಾಹಿತಿಯ ಕೊರತೆ ಇರುತ್ತದೆ. ಜಿಲ್ಲೆಯ ಜನಪ್ರತಿನಿಧಿಗಳು ಕಾವೇರಿ ತೀರ್ಥೋದ್ಭವ ಮತ್ತು ಸ್ಥಳೀಯ ಭಕ್ತರ ಭಾವನೆಯ ಬಗ್ಗೆ ಮನವರಿಕೆ ಮಾಡಿಕೊಡುವ ಮೂಲಕ ತಲಕಾವೇರಿ ಪ್ರವೇಶಕ್ಕೆ ಅವಕಾಶ ನೀಡಬೇಕೆಂದು ಅವರು ಆಗ್ರಹಿಸಿದ್ದಾರೆ.

ವಯೋವೃದ್ಧರಿಗೆ ಅನ್ಯಾಯ

ಸಭೆಯಲ್ಲಿ ಕೈಗೊಂಡ ತೀರ್ಮಾನದಂತೆ ಭಾಗಮಂಡಲದಿAದ ಕಾಲ್ನಡಿಗೆಯಲ್ಲಿ ತಲಕಾವೇರಿಗೆ ತೆರಳಬೇಕಾದರೆ ಯುವಕರಿಗೆ ಮಾತ್ರ ಸಾಧ್ಯ. ಕಾವೇರಿ ಭಕ್ತರಾದ ವಯೋವೃದ್ಧರಿಗೆ ಇದರಿಂದ ತೀವ್ರ ಅನ್ಯಾಯವಾಗಲಿದೆ. ಅಧಿಕಾರಿಗಳಿಗೆ ತೆರಳಲು ಮುಕ್ತ ಅವಕಾಶ ಕಲ್ಪಿಸಿ, ಭಕ್ತಾದಿಗಳನ್ನು ತಾತ್ಸಾರ ಮಾಡಿರುವುದು ಅಂತಿಮವಾಗಿ ಕೊಡಗಿಗೆ ಕಾವೇರಿ ಮಾತೆಯ ಆಕ್ರೋಶ, ವಿರುದ್ಧ ಪರಿಣಾಮ ತರಬಹುದೆಂದು ಈ ಮೂಲಕ ಆಡಳಿತಕಾರರ ಗಮನಕ್ಕೆ ತರುತ್ತಿದ್ದೇನೆ ಎಂದು ಕಾವೇರಿ ಭಕ್ತರಾದ ಚೋವಂಡ ಗಣೇಶ್ ಅಭಿಪ್ರಾಯ ಪಟ್ಟಿದ್ದಾರೆ.