ಪೆರಾಜೆ, ಅ. ೪: ಮಡಿಕೇರಿ ತಾಲೂಕಿನ ಪೆರಾಜೆ ವ್ಯಾಪ್ತಿಯಲ್ಲಿ ಇರುವ ಬಿಎಸ್‌ಎನ್‌ಎಲ್ ಟವರ್ ಸ್ತಬ್ಧಗೊಂಡಿದ್ದು, ಗ್ರಾಮದ ಜನತೆ ನಿರಂತರ ನೆಟ್‌ವರ್ಕ್ ಸಮಸ್ಯೆ ಎದುರಿಸುವಂತಾಗಿದೆ.

ಕೊಡಗಿನ ಗಡಿಭಾಗ ಪೆರಾಜೆ ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ಕಳೆದ ಒಂದು ತಿಂಗಳಿನಿAದ ಬಿ.ಎಸ್.ಎನ್.ಎಲ್. ನೆಟ್‌ವರ್ಕ್ ಸಮಸ್ಯೆ ತಲೆದೋರಿದ್ದು, ಇದರಿಂದ ಕಚೇರಿ ಕೆಲಸಕಾರ್ಯಗಳಿಂದ ಹಿಡಿದು ಸಾರ್ವಜನಿಕರಿಗೆ ಪ್ರತಿ ಯೊಂದು ಕೆಲಸಕ್ಕೂ ಅಡ್ಡಿಯಾಗಿದೆ. ಕೂಡಲೇ ಸಂಬAಧಪಟ್ಟ ಅಧಿಕಾರಿ ಗಳು ಸಮಸ್ಯೆ ಸರಿಪಡಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಗ್ರಾಮವು ತೀರಾ ಗುಡ್ಡಗಾಡು ಪ್ರದೇಶವಾದ್ದರಿಂದ ಇಲ್ಲಿ ಕೆಲವು ಕಡೆಗಳಲ್ಲಿ ಮಾತ್ರವೇ ನೆಟ್‌ವರ್ಕ್ ಸಿಗುವುದು ಸಾಮಾನ್ಯವಾಗಿದೆ, ಆದರೆ ಇದೀಗ ನೆಟ್‌ವರ್ಕ್ ಸಿಗುವ ಸ್ಥಳಕ್ಕೆ ಬಂದರೂ ನೆಟ್‌ವರ್ಕ್ ಸಿಗದೆ ಪಕ್ಕದ ದ.ಕ ಜಿಲ್ಲೆಯ ಬಿ.ಎಸ್.ಎನ್.ಎಲ್ ಟವರ್ ಕಡೆಗೆ ಹೋಗಬೇಕಾದ ಅನಿವಾರ್ಯತೆ ಎದುರಾಗಿದೆ. ಗ್ರಾಮ ಪಂಚಾಯತ್, ಗ್ಯಾಸ್ ಬುಕ್ಕಿಂಗ್, ಅಂಚೆ ಕಚೇರಿ, ಸೇರಿದಂತೆ ಅಗತ್ಯ ಕೆಲಸಕಾರ್ಯಗಳಿಗೆ ಬರುವ ಸಾರ್ವಜನಿಕರು ಇಲ್ಲಿ ತಮ್ಮ ಕೆಲಸ ಕಾರ್ಯಗಳಾಗದೇ ಮನೆಗೆ ತೆರಳ ಬೇಕಾಗುತ್ತದೆ. ಮುಖ್ಯವಾಗಿ ಸರ್ಕಾರಿ ಕಚೇರಿ ಹಾಗೂ ಬ್ಯಾಂಕ್‌ಗಳಲ್ಲಿ ಬಿ.ಎಸ್.ಎನ್.ಎಲ್. ನೆಟ್‌ವರ್ಕ್ ಸಂಪರ್ಕವಿದ್ದು, ಕಳೆದ ಹಲವು ದಿನಗ ಳಿಂದ ತಲೆದೋರಿದ ಈ ನೆಟ್‌ವರ್ಕ್ ಸಮಸ್ಯೆಯಿಂದ ಸಾರ್ವಜನಿಕರಿಗೆ ಸಿಗಬೇಕಾದ ಸೇವೆಗಳು ಸಕಾಲಕ್ಕೆ ದೊರೆಯುತ್ತಿಲ್ಲ. ಇನ್ನೂ ಈ ನೆಟ್‌ವರ್ಕ್ನ್ನು ಅವಲಂಭಿಸಿರುವ ಗ್ರಾಹಕರು, ಖಾಸಗಿ ಉದ್ಯೋಗಿಗಳು, ಶಾಲಾ-ಕಾಲೇಜು ಮಕ್ಕಳು ತಮ್ಮ ಆನ್‌ಲೈನ್ ತರಗತಿಗಳು ಇತರ ಅಗತ್ಯ ಮಾಹಿತಿ ಪಡೆದು ಕೊಳ್ಳಲು ನೆಟ್‌ವರ್ಕ್ಗಾಗಿ ಗುಡ್ಡಗಾಡುಗಳಲ್ಲಿ ಅಲೆದಾಡಿದರೂ ಸಿಗುತ್ತಿಲ್ಲ. ಇದರಿಂದ ಸಂಬAಧಿಕರ ಮನೆಗೆ ತೆರಳಿ ವಾಸಿಸು ವಂತಹ ಪರಿಸ್ಥಿತಿ ಎದುರಾಗಿದೆ.

ಪೆರಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಎಲ್ಲಾ ಪ್ರದೇಶಗಳಿಗೆ ನೆಟ್‌ವರ್ಕ್ ಪೂರೈಕೆ ಮಾಡುವಂತಹ ಒಂದು ಟವರ್ ನಿರ್ಮಾಣಕ್ಕೆ ಅನೇಕ ವರ್ಷಗಳಿಂದ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಖಾಸಗಿ ಟವರ್ ಗಳು ಕೂಡ ಎಲ್ಲೂ ತಲೆಎತ್ತಿಲ್ಲ. ಹಾಗಾಗಿ ಹೆಚ್ಚಿನ ಗ್ರಾಹಕರು ಕೆಲವೊಂದು ನೆಟ್‌ವರ್ಕ್ ಸಿಗುವ ಜಾಗಗಳನ್ನು ಗುರುತಿಸಿ ಅಲ್ಲಿಗೆ ಬಂದು ನೆಟ್‌ವರ್ಕ್ ಪಡೆದುಕೊಳ್ಳುತಿದ್ದರು. ಆದರೆ ಇದೀಗ ಇಲ್ಲಿ ಹೆಚ್ಚು ಗ್ರಾಹಕರನ್ನು ಹೊಂದಿರುವ ಬಿ.ಎಸ್.ಎನ್.ಎಲ್. ಟವರೇ ಕೆಲಸ ನಿರ್ವಹಿಸದೆ ಗ್ರಾಮಸ್ಥರು ಬೇಸತ್ತು ಹೋಗಿದ್ದಾರೆ.-ಕಿರಣ್ ಕುಂಬಳಚೇರಿ