ನಾಪೋಕ್ಲು, ಅ. ೪: ಸೋಮವಾರ ಮಧ್ಯಾಹ್ನ ನಾಪೋಕ್ಲು ನಗರಕ್ಕೆ ೨ ಇಂಚಿಗೂ ಅಧಿಕ ಮಳೆ ಸುರಿಯಿತು, ದಿಢೀರ್ ಮಳೆಯಿಂದಾಗಿ ಸಂತೆಗೆ ಬಂದ ಜನರು ನಗರದ ಮಾರುಕಟ್ಟೆಯಲ್ಲಿ ಕೊಡೆ ಇಲ್ಲದೆ ಒದ್ದೆಯಾಗಿ ಓಡಾಡುತ್ತಿರುವ ದೃಶ್ಯ ಕಂಡು ಬಂದಿತು. ಗುಡುಗು, ಗಾಳಿಯೊಂದಿಗೆ ಸುರಿದ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡು ಜನರು ಮನೆ ತಲುಪಲು ಆಟೋ ರಿಕ್ಷಾಗಳ ಮೊರೆ ಹೋಗಬೇಕಾಗಿ ಬಂತು. ಈ ಮಳೆಯು ಕಾಫಿ ಮತ್ತು ಭತ್ತದ ಬೆಳೆಗೆ ತೊಂದರೆಯಾಗಿದ್ದು, ಜನರು ಮಳೆಗೆ ಹಿಡಿ ಶಾಪ ಹಾಕುತ್ತಿದ್ದುದು ಕಂಡುಬAದಿತು.