ಗೋಣಿಕೊಪ್ಪ ವರದಿ, ಅ. ೩: ತಿತಿಮತಿ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಗೋಣಿಕೊಪ್ಪ ಕಾಫಿ ಮಂಡಳಿ ವಿಸ್ತರಣಾ ಘಟಕದ ವತಿಯಿಂದ ಅಜಾದಿ ಕಾ ಅಮೃತ ಮಹೋತ್ಸವ್ ಕಾರ್ಯಕ್ರಮದಲ್ಲಿ ನಿವೃತ್ತ ಸೇನಾಧಿಕಾರಿ ಸಿ. ಎಂ. ಬೆಳ್ಯಪ್ಪ ಅವರನ್ನು ಸನ್ಮಾನಿಸಲಾಯಿತು. ಹಣ್ಣು ಗಿಡ ವಿತರಣೆ ಮಾಡಲಾಯಿತು.

ಚೆಪ್ಪುಡೀರ ರಾಧಾ ಅಚ್ಚಯ್ಯ ಆರೋಗ್ಯ ಮಹತ್ವ ತಿಳಿಸಿದರು. ಡಾ. ಶ್ವೇತಾ ಹೋಮಿಯೋಪಥಿ ಚಿಕಿತ್ಸೆ ಬಗ್ಗೆ ಸಲಹೆ ನೀಡಿದರು. ಗೋಣಿಕೊಪ್ಪ ಕಾಫಿ ಮಂಡಳಿ ವಿಸ್ತರಣಾ ನಿರೀಕ್ಷಕ ಮಿಥುನ್‌ಲಾಲ್ ಸಸ್ಯಾಭಿವೃದ್ಧಿ ಬಗ್ಗೆ ಸಲಹೆ ನೀಡಿದರು.

ತಿತಿಮತಿ ಕೃಷಿ ಪತ್ತಿನ ಸಹಕಾರ ಸಂಘ ಅಧ್ಯಕ್ಷ ಚೆಪ್ಪುಡೀರ ರಾಮಕೃಷ್ಣ, ತಿತಿಮತಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪಿ. ಪಿ. ಆಶಾ, ಕಾಫಿ ಮಂಡಳಿ ಕಿರಿಯ ವಿಸ್ತರಣಾ ಅಧಿಕಾರಿ (ನಿ) ಸಣ್ಣುವಂಡ ಬಿ. ರಮೇಶ್ ಇದ್ದರು.