ಸುಂಟಿಕೊಪ್ಪ, ಅ. ೩: ಹೋಬಳಿಯ ಗರಗಂದೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಕೋ ಕ್ಲಬ್ ವತಿಯಿಂದ ವಿಶ್ವ ಓಝೋನ್ ಸಂರಕ್ಷಣಾ ದಿನದ ಅಂಗವಾಗಿ ಕೋವಿಡ್ ಹಿನ್ನೆಲೆಯಲ್ಲಿ ಶಾಲಾ ಮಕ್ಕಳಿಗೆ ಆನ್‌ಲೈನ್ ಮೂಲಕ ಓಝೋನ್ ಪದರ ರಕ್ಷಣೆ ಕುರಿತು ಚಿತ್ರ ರಚನೆ, ಪ್ರಬಂಧ ಹಾಗೂ ಪರಿಸರ ಘೋಷಣೆಗಳನ್ನು ಬರೆಯುವ ಸ್ಪರ್ಧೆ ಏರ್ಪಡಿಸಲಾಗಿತ್ತು.

ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ, ಸಮಗ್ರ ಶಿಕ್ಷಣ ಕರ್ನಾಟಕ,ಮಡಿಕೇರಿ ರಾಷ್ಟಿçÃಯ ಹಸಿರು ಪಡೆ ವತಿಯಿಂದ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಕೊಡಗು ಜಿಲ್ಲಾ ಸಮಿತಿಯ ಆಶ್ರಯದಲ್ಲಿ ಏರ್ಪಡಿಸಿದ್ದ ಓಝೋನ್ ಪದರ ರಕ್ಷಣೆಗೆ ಸಂಬAಧಿಸಿದAತೆ ಮಕ್ಕಳು ತಮ್ಮ ಮನೆಯಿಂದಲೇ ಆಕರ್ಷಣೀ ಯವಾಗಿ ವಿವಿಧ ಮಾದರಿಯ ಚಿತ್ರಗಳನ್ನು ರಚಿಸಿ ಮೆಚ್ಚುಗೆಗೆ ಪಾತ್ರರಾದರು.

ಆನ್‌ಲೈನ್ ಮೂಲಕ ಮಕ್ಕಳೊಂದಿಗೆ ಓಝೋನ್ ಪದರ ಸಂರಕ್ಷಣೆ ಕುರಿತು ಚರ್ಚಿಸಿದ ಶಾಲಾ ಮುಖ್ಯ ಶಿಕ್ಷಕಿ ಎಚ್.ಕೆ. ಪಾರ್ವತಿ, ಓಝೋನ್ ಪದರ ಸಂಪೂರ್ಣ ನಾಶವಾದರೆ ಇಡೀ ಜೀವ ಸಂಕುಲಕ್ಕೆ ತೊಂದರೆಯಾಗುವ ಅಪಾಯವಿದೆ. ಈ ದಿಸೆಯಲ್ಲಿ ನಾವು ಓಝೋನ್ ಪದರಕ್ಕೆ ಯಾವುದೇ ಹಾನಿಯಾಗದಂತೆ ಜಾಗ್ರತೆ ವಹಿಸಬೇಕು ಎಂದರು.

"ಓಝೋನ್ ಪದರ ಸಂರಕ್ಷಣೆಯ ಅಗತ್ಯತೆ" ಕುರಿತು ಮಾಹಿತಿ ನೀಡಿದ ಇಕೋ ಕ್ಲಬ್‌ನ ಉಸ್ತುವಾರಿ ಶಿಕ್ಷಕಿ ಎಂ.ಎಸ್.ಅನಿತಾ ಮಾತನಾಡಿ, ಓಝೋನ್ ಪದರ ತೆಳುವಾಗುತ್ತಿರುವುದರಿಂದ ನೇರಳಾತೀತ ಕಿರಣಗಳು ನೇರವಾಗಿ ಭೂಮಿಯನ್ನು ತಲುಪುತ್ತಿರುವು ದರಿಂದ ಮಾನವರಲ್ಲಿ ಚರ್ಮದ ಕ್ಯಾನ್ಸರ್ ಸೇರಿದಂತೆ ಮುಂತಾದ ಕಾಯಿಲೆಗಳ ಸಾಧ್ಯತೆ ಹೆಚ್ಚಾಗಲಿದೆ ಎಂದರು.

ಶಾಲಾ ಶಿಕ್ಷಕರಾದ ಎಂ.ಜಿ. ನಳಿನಿ, ಎಂ.ಎಸ್. ದೇಚಮ್ಮ, ಕೆ. ದೇವಕಿ ಅಭಿಯಾನದಲ್ಲಿ ಭಾಗವಹಿಸಿದ್ದರು.

ಚಿತ್ರ ರಚನೆಯಲ್ಲಿ ಮಹಮ್ಮದ್ ನಿಜಾಮುದ್ದೀನ್ (ಪ್ರಥಮ ಸ್ಥಾನ), ಯತಿನ್ ಕುಮಾರ್ (ದ್ವಿತೀಯ ಸ್ಥಾನ) ಹಾಗೂ ಅಜ್ಮಲ್ ಮತ್ತು ಬದ್ರಿನಾಥ್ (ತೃತೀಯ ಸ್ಥಾನ) ಕ್ರಮವಾಗಿ ಮೊದಲ ಮೂರು ಬಹುಮಾನ ಗಳಿಸಿದ್ದಾರೆ.

ಈ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣದ ಮೂಲಕ ಓಝೋನ್ ಪದರ ರಕ್ಷಣೆ ಕುರಿತು ಮಾಹಿತಿ ವಿನಿಮಯ ಮಾಡಿಕೊಂಡ ರಾಷ್ಟಿçÃಯ ಹಸಿರು ಪಡೆಯ ಜಿಲ್ಲಾ ನೋಡಲ್ ಅಧಿಕಾರಿ ಟಿ.ಜಿ. ಪ್ರೇಮಕುಮಾರ್, ಜೀವ ಮಂಡಲದ ರಕ್ಷಣಾ ಕವಚವಾಗಿರುವ ಓಝೋನ್ ಪದರ ಸಂರಕ್ಷಣೆ ಕುರಿತು ಇಕೋ ಕ್ಲಬ್ ಮೂಲಕ ಶಾಲಾ ಮಕ್ಕಳಲ್ಲಿ ಜಾಗೃತಿ ಮೂಡಿಸಲು ವಿವಿಧ ಪರಿಸರಾತ್ಮಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.