*ವೀರಾಜಪೇಟೆ, ಅ. ೩: ಭಾರತೀಯ ಜನತಾ ಪಾರ್ಟಿ ಕೊಡಗು ಜಿಲ್ಲೆ ಸೈನಿಕರ ಪ್ರಕೋಷ್ಠ ವೀರಾಜಪೇಟೆ ಶಾಖೆಯ ವತಿ ಯಿಂದ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಮತ್ತು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಜನ್ಮ ದಿನಾಚರಣೆ ಪ್ರಯುಕ್ತ ವೀರಾಜಪೇಟೆ ಸರ್ಕಾರಿ ಆಸ್ಪತ್ರೆಯ ಒಳರೋಗಿಗಳಿಗೆ ಮತ್ತು ಆಸ್ಪತ್ರೆಯ ಡಿ ಗ್ರೂಪ್ ನೌಕರರಿಗೆ ಹಣ್ಣು ಹಂಪಲು ವಿತರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಶಾಸಕ ಕೆ.ಜಿ ಬೋಪಯ್ಯ ಆಗಮಿಸಿದ್ದರು. ಜಿಲ್ಲಾ ಸಂಚಾಲಕ ಮೇಜರ್ ಚಿಂಗಪ್ಪ ಮಾತನಾಡಿ, ಮೊದಲು ಯೋಧರಿಗೆ ಯಾವುದೇ ಸ್ಥಾನ ಮಾನ ಇರಲಿಲ್ಲ ಮೋದಿ ಪ್ರಧಾನಿಯಾದ ನಂತರ ಯೋಧರಿಗೆ ಗೌರವ ಹೆಚ್ಚಿದೆ. ಮೊದಲ ಬಾರಿಗೆ ಇವರ ಹುಟ್ಟು ಹಬ್ಬವನ್ನು ಆಚರಿಸಲಾಗುತ್ತಿದೆ ಎಂದು ತಿಳಿಸಿದರು.

ಶಾಸಕ ಕೆ.ಜಿ. ಬೊಪಯ್ಯ ಮಾತನಾಡಿ, ನಮ್ಮ ದೇಶದ ಹೆಮ್ಮೆಯ ಪ್ರಧಾನಮಂತ್ರಿಯವರು ಮಾಡಿರುವ ಒನ್ ರ‍್ಯಾಂಕ್ ಒನ್ ಪೆನ್ಷನ್ ಯೋಜನೆ ಮಾಜಿ ಸೈನಿಕರಿಗೆ ಉತ್ತಮ ವ್ಯವಸ್ಥೆಯಾಗಿದೆ ಎಂದು ತಿಳಿಸಿದರು. ಆರಂಭದಲ್ಲಿ ವೀರಾಜಪೇಟೆ ತಾಲೂಕು ಮಾಜಿ ಸೈನಿಕರ ಪ್ರಕೋಷ್ಠ ಉಪಾಧ್ಯಕ್ಷ ಪುಗ್ಗೇರ ನಂದ ಉಪಾಧ್ಯಕ್ಷ ಕೆ. ಅಪ್ಪಯ್ಯ, ಮಡಿಕೇರಿ ತಾಲೂಕು ಅದ್ಯಕ್ಷ ಕರುಂಬಯ್ಯ ಹಾಗೂ ವೀರಾಜಪೇಟೆ ಸೈನಿಕರ ಪ್ರಕೋಷ್ಠ ಸದಸ್ಯರು ಹಾಜರಿದ್ದರು. ಕಾರ್ಯಕ್ರಮದಲ್ಲಿ ಆಸ್ಪತ್ರೆ ಮುಖ್ಯ ಶಸ್ತçಚಿಕಿತ್ಸಕ ವಿಶ್ವನಾಥ್ ಸಿಂಪಿ ಹಾಜರಿದ್ದರು.