ಸೋಮವಾರಪೇಟೆ, ಅ. ೪: ತಲಕಾವೇರಿಯಲ್ಲಿ ತಾ.೧೭ ರಂದು ನಡೆಯುವ ತೀರ್ಥೋದ್ಭವ ಹಿನ್ನೆಲೆ, ಪಟ್ಟಣದ ಕಾವೇರಿ ಪ್ರತಿಮೆಗೆ ವಿಶೇಷ ಪೂಜೆ ಸಲ್ಲಿಸಿ, ಸಾರ್ವಜನಿಕರಿಗೆ ಕಾವೇರಿ ತೀರ್ಥ ವಿತರಿಸಲಾಗುವುದು ಎಂದು ಸೋಮವಾರಪೇಟೆ ಹರಪಳ್ಳಿ ರವೀಂದ್ರ ಅಭಿಮಾನಿಗಳ ಸಂಘದ ಅಧ್ಯಕ್ಷ ಎಚ್.ಎ. ನಾಗರಾಜು ತಿಳಿಸಿದ್ದಾರೆ.