ಸೋಮವಾರಪೇಟೆ, ಅ. ೪: ಇಲ್ಲಿನ ಇನ್ನರ್ ವ್ಹೀಲ್ ಕ್ಲಬ್ ಆಫ್ ಸೋಮವಾರಪೇಟೆ ಗೋಲ್ಡ್ ವತಿಯಿಂದ ಒಕ್ಕಲಿಗರ ಸಮುದಾಯ ಭವನದ ಮುಂಭಾಗದ ರಸ್ತೆಗೆ ಉಚಿತವಾಗಿ ಸೋಲಾರ್ ಬೀದಿ ದೀಪವನ್ನು ಅಳವಡಿಸಲಾಯಿತು. ಕ್ಲಬ್ ಜಿಲ್ಲಾ ಅಧ್ಯಕ್ಷೆ ಪುಷ್ಪ ಗುರುರಾಜ್ ದೀಪ ಬೆಳಗಿಸಿದರು. ಕ್ಲಬ್ ಅಧ್ಯಕ್ಷೆ ಆಶಾ ಯೋಗೇಂದ್ರ, ಕಾರ್ಯದರ್ಶಿ ಅಮೃತ ಕಿರಣ್ ಮತ್ತು ಪದಾಧಿಕಾರಿಗಳು ಇದ್ದರು.