ಮಡಿಕೇರಿ, ಅ. ೪: ಮಡಿಕೇರಿ ನಗರಸಭೆಗೆ ನಡೆದಿರುವ ಚುನಾವಣೆಯಲ್ಲಿ ಸಾಮಾನ್ಯ ಮಹಿಳಾ ಮೀಸಲಾತಿಯಲ್ಲಿ ಒಟ್ಟು ನಾಲ್ವರು ಜಯಗಳಿಸಿದ್ದಾರೆ. ಅನಿತಾ ಪೂವಯ್ಯ, ಬಾಳೆಯಡ ಸಬಿತಾ ಇವರುಗಳಲ್ಲದೆ ೨೧ನೇ ವಾರ್ಡ್ನಿಂದ ಕುಟ್ಟನ ಶ್ವೇತಾ ಪ್ರಶಾಂತ್ ಅವರು ಈ ಮೀಸಲಾತಿಯಲ್ಲಿ ಜಯ ಸಾಧಿಸಿದ್ದಾರೆ.

ಪ್ರಸ್ತುತ ನಗರಸಭೆಗೆ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದರೂ, ಈ ಮೂವರು ಮಾತ್ರವಲ್ಲದೆ, ಇತರ ಮಹಿಳಾ ಅಭ್ಯರ್ಥಿಗಳೂ ತಮ್ಮ ಹಕ್ಕು ಮಂಡಿಸಬಹುದಾಗಿದ್ದು, ಪಕ್ಷದ ತೀರ್ಮಾನ ಅಂತಿಮವಾಗಲಿದೆ.