ಶನಿವಾರಸಂತೆ, ಅ. ೪: ಸಮೀಪದ ಕೊಡ್ಲಿಪೇಟೆಯ ಪ್ಲಾಂಟರ್ಸ್ ರಿಕ್ರಿಯೇಶನ್ ಅಸೋಸಿಯೇಷನ್ ಹಾಗೂ ಹೇಮಾವತಿ ರೋಟರಿ ಸಂಸ್ಥೆ ಸಹಭಾಗಿತ್ವದಲ್ಲಿ ವಿಶ್ವ ಕಾಫಿ ದಿನ ಆಚರಿಸಲಾಯಿತು. ಕಾಫಿ ಮಂಡಳಿ ಹಿರಿಯ ಸಂಪರ್ಕ ಅಧಿಕಾರಿ ವಿಶ್ವನಾಥ್ ಮಾತನಾಡಿ, ಕಾಫಿ ಕೃಷಿ ಸಮಸ್ಯೆ ಹಾಗೂ ಉದ್ಯಮದ ಕುರಿತು ಮಾಹಿತಿ ನೀಡಿದರು.
ಕಲ್ಲುಮಠದ ಮಹಾಂತ ಸ್ವಾಮೀಜಿ ಹಾಗೂ ರೋಟರಿ ಸಂಸ್ಥೆ ನಿರ್ದೇಶಕ ಪ್ರವೀಣ್ ಮಾತನಾಡಿದರು. ರೋಟರಿ ಸಂಸ್ಥೆ ಅಧ್ಯಕ್ಷ ದಿನೇಶ್, ಪ್ಲಾಂಟರ್ಸ್ ಕ್ಲಬ್ ಅಧ್ಯಕ್ಷ ಬಾಬು ರಾಜೇಂದ್ರ ಪ್ರಸಾದ್, ಪ್ರಮುಖರಾದ ಅಪ್ಪಸ್ವಾಮಿ, ಕೆ.ಕೆ. ರೇಣುಕ, ದಿವಾಕರ್, ಉಮೇಶ್ ಇದ್ದರು.