ಮಡಿಕೇರಿ, ಅ. ೪ : ವಿದ್ಯುತ್ ಮಾರ್ಗಗಳ ಬದಿಯ ಮರದ ಕೊಂಬೆಗಳನ್ನು ಕಡಿಯುವುದು ಮತ್ತು ವಿದ್ಯುತ್ ಮಾರ್ಗದ ನಿರ್ವಹಣೆ ಮತ್ತು ದುರಸ್ತಿ ಕಾರ್ಯವನ್ನು ನಿರ್ವಹಿಸಬೇಕಿರುವುದರಿಂದ ಎಫ್೬ ಭಾಗಮಂಡಲ, ಎಫ್೨ ನಾಪೋಕ್ಲು, ಎಫ್೫ ಹೊದ್ದೂರು, ಎಫ್೧ ನಲ್ಲೂರು, ಎಫ್೧೦ ಹೈಸೂಡ್ಲೂರು, ಎಫ್೯ ಹಾತೂರು, ಎಫ್೧ ಸಿದ್ದಾಪುರ, ಎಫ್೧ ಅಮ್ಮತ್ತಿ, ಎಫ್೨ ಭುವನಗಿರಿ, ಎಫ್೨ ಗೋಣಿಮರೂರು, ಎಫ್೨ ಚೆಟ್ಟಳ್ಳಿ, ಎಫ್೬ ಮತ್ತಿಕಾಡು ವಿದ್ಯುತ್ ಮಾರ್ಗಗಳಲ್ಲಿ ತಾ. ೫ರಂದು (ಇಂದು) ಬೆಳಿಗ್ಗೆ ೯.೩೦ ಗಂಟೆಯಿAದ ಸಂಜೆ ೦೪ ಗಂಟೆಯವರೆಗೆ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗುವುದು.

ಬೆಟ್ಟಗೇರಿ, ಚೇರಂಬಾಣೆ, ಭಾಗಮಂಡಲ, ತಲಕಾವೇರಿ, ನಾಪೋಕ್ಲು, ಬೇತು, ಹೊದ್ದೂರು, ಕಕ್ಕಬೆ, ನೆಲಜಿ, ನಲ್ಲೂರು, ಕಿರುಗೂರು, ಕಾನೂರು, ಹೈಸೂಡ್ಲೂರು, ಹುದಿಕೇರಿ, ಟಿ ಎಸ್ಟೇಟ್, ಹಾತೂರು, ಕಳತ್ಮಾಡು, ಕುಂದ, ಕೊಳತ್ತೋಡು, ಬೈಗೋಡು, ಸಿದ್ದಾಪುರ, ಕರಡಿಗೋಡು, ಮೈಸೂರು ರಸ್ತೆ, ಅಮ್ಮತ್ತಿ, ಕಾವಾಡಿ, ಬಿಳುಗುಂದ, ಭುವನಗಿರಿ, ಯಡವನಾಡು, ಹುದುಗೂರು, ಸೀಗೆಹೊಸೂರು, ಗಣಗೂರು, ಬಾಣಾವಾರ, ಸಂಗಯ್ಯನಪುರ, ನಾಗವಾಲ, ಚೆಟ್ಟಳ್ಳಿ, ಅಭ್ಯತ್‌ಮಂಗಳ, ವಾಲ್ನೂರು ತ್ಯಾಗತ್ತೂರು, ಚೇರಳ, ಶ್ರೀಮಂಗಲ, ಮತ್ತಿಕಾಡು, ಮೋದೂರು, ಗೇರುಬಾಣೆ ವ್ಯಾಪ್ತಿಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲ. ಸಾರ್ವಜನಿಕರು ಸಹಕರಿಸುವಂತೆ ಮಡಿಕೇರಿ ವಿಭಾಗದ ಸೆಸ್ಕ್ ಕಾರ್ಯನಿರ್ವಾಹಕ ಎಂಜಿನಿಯರ್ ಅವರು ಕೋರಿದ್ದಾರೆ.