ಮಡಿಕೇರಿ, ಅ. ೪: ಕೊಡಗಿನ ಸೋಮವಾರಪೇಟೆಯವರಾದ ಅಂತರರಾಷ್ಟಿçÃಯ ಹಾಕಿ ಕ್ರೀಡಾಪಟು ಎಸ್.ವಿ ಸುನಿಲ್ ಅವರು ತಮ್ಮ ಸುದೀರ್ಘ ೧೪ ವರ್ಷಗಳ ಅಂತರರಾಷ್ಟಿçÃಯ ಹಾಕಿಗೆ ವಿದಾಯ ಹೇಳಿದ್ದಾರೆ. ಸುನಿಲ್(೩೨) ಅವರು ೨೬೪ ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿ ೭೨ ಗೋಲ್ಗಳ ದಾಖಲೆ ಮಾಡಿದ್ದಾರೆ. ತಾ.೨ ರಂದು ಅವರು ಅಧಿಕೃತವಾಗಿ ತಮ್ಮ ನಿವೃತ್ತಿಯನ್ನು ಘೋಷಿಸಿದರು.
ಅರ್ಜುನ ಪ್ರಶಸ್ತಿ ಪುರಸ್ಕೃತ ಸುನಿಲ್, ಭಾರತ ತಂಡವನ್ನು ೨೦೧೨, ೨೦೧೬ ರ ಒಲಂಪಿಕ್ಸ್ನಲ್ಲಿಯೂ ಪ್ರತಿನಿಧಿಸಿದ್ದರು. ಏಷಿಯನ್ ಗೇಮ್ಸ್ನಲ್ಲಿ ಚಿನ್ನದ ಪದಕ, ಕಾಮನ್ವೆಲ್ತ್ ಗೇಮ್ಸ್ನಲ್ಲಿ ಬೆಳ್ಳಿ ಪದಕ ಗಳಿಸಿದ ಭಾರತ ತಂಡದ ಸದಸ್ಯರಾಗಿದ್ದರು.
ತಮ್ಮ ನಿವೃತ್ತಿ ಕುರಿತು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಇವರು, ಇತ್ತೀಚೆಗೆ ಟೋಕ್ಯೋದಲ್ಲಿ ನಡೆದ ಒಲಂಪಿಕ್ಸ್ನಲ್ಲಿ ಭಾರತ ತಂಡವನ್ನು ತಾವು ಪ್ರತಿನಿಧಿಸದೆ ಇರುವುದಕ್ಕೆ ಬೇಸರ ವ್ಯಕ್ತಪಡಿಸಿದರು. ಮುಂದಿನ ಒಲಂಪಿಕ್ಸ್ಗೆ ಕೇವಲ ೩ ವರ್ಷಗಳ ಕಾಲಾವಧಿ ಇದೆ. ಹಿರಿಯ ಆಟಗಾರನಾಗಿರುವ ತಾನು, ಕಿರಿಯ ಆಟಗಾರರಿಗೆ ಅವಕಾಶಗಳನ್ನು ನೀಡಿ ಜಯಶೀಲ ಭಾರತ ತಂಡವನ್ನು ಕಟ್ಟುವ ಸಲುವಾಗಿ ನಿವೃತ್ತಿ ಹೊಂದುವುದಾಗಿ ಹೇಳಿಕೊಂಡಿದ್ದಾರೆ.
ಭಾರತ ತಂಡವನ್ನು ಒಲಂಪಿಕ್ಸ್ನಲ್ಲಿ ಪ್ರತಿನಿಧಿಸಿ ಕಂಚು ಗೆಲ್ಲಲು ಕಾರಣಕರ್ತರಾದ ‘ಡ್ರಾö್ಯಗ್ ಫ್ಲಿಕ್ಕರ್’ ರುಪಿಂದರ್ ಪಾಲ್ ಹಾಗೂ ‘ಡಿಫಿಂಡರ್’ ಬಿರೇಂದ್ರ ಲಕ್ರ ಅವರುಗಳು ಕೂಡ ಕಿರಿಯ ಆಟಗಾರರಿಗೆ ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ಇತ್ತೀಚೆಗೆ ನಿವೃತ್ತಿ ಘೋಷಿಸಿದ್ದರು.