ಕಾವೇರಿಯು ಜಲರೂಪಿಣಿಯಾಗಿ ಪವಿತ್ರ ನದಿಯಾಗಿ ಹರಿದು ಧರೆಗಿಳಿದು ತೆರಳಿದ ಬಳಿಕ ಮತ್ತೊಂದು ರೂಪದಲ್ಲಿ ಅವತಾರಿಣಿಯಾಗಿ ಲೋಪಾಮುದ್ರೆಯಾಗಿ ಅಗಸ್ತö್ಯರೊಂದಿಗೆ ಗೃಹಿಣಿಯಾಗಿ ಉಳಿಯುತ್ತಾಳೆ. ಅವರೊಂದಿಗಿದ್ದಾಗ ಅಗಸ್ತö್ಯರು ಋಗ್ವೇದದಲ್ಲಿ ಅಳವಡಿಸಿದ ಮಂತ್ರ ಸೂಕ್ತಗಳ ಬರಹದಲ್ಲಿ ತಾನೂ ಸಹಭಾಗಿಣಿಯಾಗಿ ಸಹಕರಿಸುತ್ತಾಳೆ. ತಾನೇ ಒಂದು ಸೂಕ್ತವನ್ನು ಬರೆಯುತ್ತಾಳೆ. ಅವಳು ಗೃಹಸ್ಥಾಶ್ರಮ ಧರ್ಮದ ಕುರಿತಾಗಿ ಈ ಸೂಕ್ತದಲ್ಲಿ ಮುಖ್ಯವಾಗಿ ಯುವ ಪೀಳಿಗೆಗೆ ಮಾರ್ಗದರ್ಶನವಿತ್ತಿದ್ದಾಳೆ.

ಲೋಪಾಮುದ್ರೆಯು ಋಗ್ವೇದದಲ್ಲಿ ರಚಿಸಿ ಅಳವಡಿಸಿದ ಮಂತ್ರಗಳ ಸಂಕ್ಷಿಪ್ತ ಮಾಹಿತಿ ಈ ಕೆಳಗಿನಂತಿದೆ. (ಮಂಡಲ ೧ ಸೂಕ್ತ -೧೭೯) ಲೋಪಾಮುದ್ರಾಗಸ್ತೌö್ಯ ಋಷಿಃ | ದಂಪತಿ ದೇವತಾ | ಎಂದು ಮಂತ್ರಗಳು ಪ್ರಾರಂಭಗೊಳ್ಳುತ್ತವೆ.

ಭಾವಾರ್ಥ :- ಪ್ರಥಮ ಮಂತ್ರದಲ್ಲಿ ಬಾಲ್ಯದಾರಭ್ಯ ಸ್ತಿçà ಪುರುಷರು ಹೇಗೆ ತಮ್ಮ-ತಮ್ಮ ಕಾರ್ಯದಲ್ಲಿ ಆಯುಸ್ಸಿನ ಬಾಲ್ಯಾದಿ ಅವಸ್ಥೆಗಳನ್ನು ತೊಡಗಿಸಿ ಜೀರ್ಣಗೊಳಿಸುವರೋ, ಹಾಗೆ ಗೃಹಸ್ಥಾಶ್ರಮದಲ್ಲಿ ಸತಿ-ಪತಿಯರಿಬ್ಬರೂ ಸೇರಿ ತಮ್ಮ ಗೃಹಸ್ಥ ಜೀವನವನ್ನು ಜೀರ್ಣಗೊಳಿಸಿಕೊಳ್ಳ ಬೇಕು ಎಂದು ತಿಳಿಸಲಾಗಿದೆ.

ಯೇ ಚಿದ್ಧಿ ಪೂರ್ವ ಋತಸಾಪ ಆಸನ್ ತ್ಸಾಕಂ ದೇವೇಭಿರವದನ್ನೆöÊತಾನಿ|

ತೇ ಚಿದವಾಸುರ್ನಹ್ಯಂತಮಾಪುಃ ಸಮೂ ನು ಪತ್ನಿರ್ವೃಷಭಿರ್ಜಗಮ್ಯುಃ

ಭಾವಾರ್ಥ : ಈ ಮಂತ್ರದಲ್ಲಿ ಬ್ರಹ್ಮಚರ್ಯಾಶ್ರಮದಲ್ಲಿರುವ ವಿದ್ಯಾರ್ಥಿಗಳು ಯಾರು ಮೊದಲು ವಿದ್ಯಾವಂತರಾಗಿ ಸತ್ಯಾಚರಣೆ ಮಾಡುವವರೂ, ಜಿತೇಂದ್ರಿಯರೂ ಆಗಿರುವರೋ, ಅವರಿಂದಲೇ ವಿದ್ಯೆಯನ್ನು ಪಡೆದುಕೊಳ್ಳಬೇಕು. ನಂತರ ತನಗೆ ಸಮಾನಳಾದ ವಿದ್ಯಾವತೀ ಯುವತಿಯೊಂದಿಗೇ ವಿವಾಹವಾಗಿ ಗೃಹಸ್ಥಧರ್ಮವನ್ನು ಅವಳೊಂದಿಗೆ ಆಚರಿಸಬೇಕು ಎಂದಿದೆ.

ನ ಮೃಷಾ ಶ್ರಾಂತA ಯದವಂತಿ ದೇವಾ ವಿಶ್ವಾ ಇತ್ ಸ್ಪೃಧೋ ಅಭ್ಯಸ್ನವಾವÀ |

ಜಯಾವೇದತ್ರ ಶತನೀಥಮಾಜಿಂ ಯತ್ ಸಮ್ಯಂಚಾ ಮಿಥುನಾವಭ್ಯಜಾವ

ಭಾವಾರ್ಥ : ವಿದ್ಯಾವಂತರು ಮಿಥ್ಯಾಚರೀ ಮೂಢಜನರನ್ನು ಬೋಧಿಸುವುದಿಲ್ಲವೋ, ತ್ಯಜಿಸುವರೋ, ಅದೇ ರೀತಿ ಸ್ತಿçà ಪುರುಷರು ಮಿಥ್ಯಾಚರಣೆ ಅಭಿಚಾರಾದಿ ದೋಷಗಳನ್ನು ತ್ಯಜಿಸಬೇಕು. ಗೃಹಸ್ಥಾಶ್ರಮ ಏಳಿಗೆಯಾಗುವ ರೀತಿಯಲ್ಲಿ ಸ್ತಿçÃ-ಪುರುಷರಿಬ್ಬರೂ ಸೇರಿಯೇ ಧರ್ಮಾಚರಣೆ ಮಾಡಬೇಕು.

ಮತ್ತೊಂದು ಶ್ಲೋಕದ ಭಾವಾರ್ಥ : ಯಾರು ವಿದ್ಯಾ ಧೈರ್ಯಾದಿ ಗುಣ ರಹಿತ ಸ್ತಿçÃಯನ್ನು ವಿವಾಹವಾಗುವರೋ ಅವರು ಸುಖವನ್ನು ಪಡೆಯಲಾರರು. ಪರಸ್ಪರರಲ್ಲಿ ಪ್ರೀತಿಯಿರುವ ಸ್ತಿçà ಪುರುಷರ ವಿವಾಹ ನಡೆದರೆ ಅಲ್ಲಿ ಪರಿಪೂರ್ಣ ಸುಖ ಲಭಿಸುತ್ತದೆ.

ಇಮಂ ನು ಸೋಮಮಂತಿತೋ ಹೃತ್ಸು ಪೀತಮುಪ ಬ್ರುವೇ |

ಯತ್ ಸೀಮಾಗಶ್ಚಕೃಮಾ ತತ್ ಸು ಮೃಳತು ಪುಲುಕಾಮೋ ಹಿ ಮರ್ತ್ಯಃ

ಭಾವಾರ್ಥ : ಯಾರು ಓಷಧಿ ರಸವನ್ನು ಸೇವಿಸುವರೋ ಅವರು ರೋಗರಹಿತರೂ, ಬಲಿಷ್ಠರೂ ಆಗುವರು. ಯಾರು ಕುಪಥ್ಯವನ್ನು ಮಾಡುವರೋ ಅವರು ರೋಗ ಪೀಡಿತರಾಗುವರು.

ಅಗಸ್ತö್ಯಃ ಖನಮಾನಃ ಖನಿತ್ತೆöÊಃ ಪ್ರಜಾಪತ್ಯಂ ಬಲವಿಚ್ಛಮಾನಃ |

ಉಭೌ ವರ್ಣಾವೃಷಿರುಗ್ರಃ ಪುಪೋಷ ಸತ್ಯಾ ದೇವೇಷ್ವಾಶಿಷೋ ಜಗಾಮ

ಭಾವಾರ್ಥ : ಈ ಮಂತ್ರದಲ್ಲಿ ಕೃಷಿಕನು ಹೇಗೆ ಉತ್ತಮ ರೀತಿಯಲ್ಲಿ ಹೊಲವನ್ನು ಉತ್ತು ಉತ್ತಮ ಬೀಜವನ್ನು ಬಿತ್ತಿ ಫಲವಂತನಾಗುತ್ತಾನೋ, ಹಾಗೆ ಧಾರ್ಮಿಕರು ಸತ್ಯ ಕಾಮವನ್ನು ಪಡೆದು ಯುವಾವಸ್ಥೆಯಲ್ಲಿ ಸಮಾನ ಮನಸ್ಕರಾದ ಯುವಕ-ಯುವತಿಯರು ಪರಸ್ಪರರು ಪ್ರೀತಿಸಿ ವಿವಾಹವಾಗುವರೋ ಅವರು ಗೃಹಸ್ಥಾಶ್ರಮದಲ್ಲಿ ಸಫಲರಾಗುತ್ತಾರೆ ಎಂದು ಸೂಚಿಸಲಾಗಿದೆ.

ಇದು ಲೋಪಾಮುದ್ರೆ ಋಗ್ವೇದದ ನೂರ ಎಪ್ಪತ್ತೊಂಬತ್ತನೆಯ ಸೂಕ್ತದಲ್ಲಿ ಗೃಹಸ್ಥಾಶ್ರಮದ ಕುರಿತು ಬರೆದು ಅಳವಡಿಸಿದ ಒಂದು ಭಾಗವಾಗಿದೆ.

ಅಗಸ್ತö್ಯ ರಚಿತ ಸೂಕ್ತಗಳು

ಅಗಸ್ತö್ಯ ಮಹರ್ಷಿಗಳು ಋಗ್ವೇದದ ಸೂಕ್ತ ೧೬೫ ರಿಂದ ೧೯೧ರವರೆಗಿನ ಮಂತ್ರಗಳ ರಚನೆಯಲ್ಲಿ ಲೋಕಕ್ಕೆ ಅಗತ್ಯವಾದ ಮಾರ್ಗದರ್ಶನ ನೀಡುತ್ತಾರೆ. ಆ ಪೈಕಿ ಕೆಲವು ಪ್ರಮುಖವಾದ ಮಾನವನ ಜೀವನಕ್ಕೆ ಮಾರ್ಗದರ್ಶನವೆನಿಸಿರುವ, ಅತ್ಯಗತ್ಯವೆನಿಸಿರುವ ರಚನೆಯನ್ನು ಮಾತ್ರ ಈ ಕೆಳಗೆ ನೀಡಲಾಗಿದೆ.

ಬ್ರಹ್ಮಾಣಿ ಮೇ ಮತಯಃಶಂ ಸುತಾಸಃ ಶುಷ್ಮ ಇಯರ್ತಿ ಪ್ರಭೃತೋ ಮೇ ಅದ್ರಿಃ |

ಆ ಶಾಸತೇ ಪ್ರತಿ ಹರ್ಯಂತ್ಯುಕ್ಥೇ-ಮಾ ಹರೀ ವಹತಸ್ತಾ ನೋ ಅಚ್ಛ

ಭಾವಾರ್ಥ : ಈ ಮಂತ್ರದಲ್ಲಿ ಉದಾರಿಗಳು ಮೇಘದಂತೆ ಎಲ್ಲರಿಗೂ ಸಮಾನವಾಗಿ ಸುಖವರ್ಷಣ ಮಾಡುತ್ತಾರೆ. ಎಲ್ಲರಿಗೂ ವಿದ್ಯಾದಾನ ಮಾಡಲು ಇಚ್ಛಿಸುತ್ತಾ ಹೇಗೆ ತನಗೆ ಸುಖದ ಇಚ್ಛೆ ಮಾಡುವರೋ ಹಾಗೆ ಅನ್ಯರಿಗೂ ಸುಖೇಚ್ಛೆಯನ್ನು ಮಾಡುತ್ತಾರೆ ಎಂದು ಅಭಿಪ್ರಾಯಪಡಲಾಗಿದೆ.

ಅತೋ ವಯಮಂತಮೇಭಿರ್ಯುಜಾರ್ನಾಃ ಸ್ವಕ್ಷತ್ರೇಭಿಸ್ತನ್ವಃ ಶುಂಭಮಾನಾಃ|

ಮಹೋಭಿರೇತಾ ಉಪ ಯುಜ್ಮಹೇನ್ವಿ-ಂದ್ರ ಸ್ವಧಾಮನು ಹಿ ನೋ ಬಭೂಥ

ಭಾವಾರ್ಥ : ಶರೀರ ಬಲ-ಆರೋಗ್ಯಗಳನ್ನು ಪಡೆದ ವಿದ್ವಾಂಸರು ಎಲ್ಲಾ ಕಾರ್ಯಗಳನ್ನು ಸಮಾಧಾನದಿಂದ ಮಾಡುವವರಾಗಿ ಎಲ್ಲರ ಸುಖಕ್ಕಾಗಿಯೇ ಇರುವ ರಾಜ್ಯದ ನ್ಯಾಯಕ್ಕಾಗಿ ತಮ್ಮ ಬಲದ ಉಪಯೋಗ ಮಾಡುತ್ತಾರೆ. ಬೇಗನೇ ಧರ್ಮ, ಆರ್ಥ, ಕಾಮ, ಮೋಕ್ಷಗಳೆಂಬ ಪುರುಷಾರ್ಥವನ್ನು ಸಿದ್ಧಿಗೊಳಿಸುತ್ತಾರೆ.

ಭೂರೀ ಚಕರ್ಥ ಯುಜ್ಯೇಭಿರಸ್ಮೇ ಸಮಾನೇಭೀರ್ವೃಷಭ ಪೌಂಸ್ಯೇಭಿಃ

ಭೂರೀಣಿ ಹಿ ಕೃಣವಾಮಾ ಶವಿಷ್ಟೇಂದ್ರ ಕ್ರತ್ವಾ ಮರುತೋ ಯದ್ ವ ಶಾಮ

ಭಾವಾರ್ಥ : ಲೋಕದಲ್ಲಿ ವಿದ್ವಾಂಸರು ಪುರುಷಾರ್ಥಗಳ ಮೂಲಕ ಎಲ್ಲರನ್ನು ಸುಶಿಕ್ಷಿತರನ್ನಾಗಿ ಮಾಡುತ್ತಾರೋ, ಅವರಿಗೆ ಎಲ್ಲರೂ ಸತ್ಕಾರ ಮಾಡಬೇಕು. ಯಾರು ಎಲ್ಲರಿಗೂ ಉತ್ತಮ ವಿದ್ಯೆಯನ್ನು ಬಯಸುವರೋ ಅವರೇ ಉಪದೇಶಕರಲ್ಲಿ ಪ್ರಧಾನರಾಗುವರು.

ಏಕಸ್ಯ ಚಿನ್ಮೇ ವಿಭ್ವ ಸ್ತೊ÷್ವÃಜೋ ಯಾ ನು ದಧೃಷ್ವಾನ್ ಕೃಣವೈ ಮನೀಷಾ| ಅಹಂ

ಹ್ಯು ಗ್ರೋ ಮರುತ್ತೋ ವಿದಾನೋ ಯಾನಿ ಚ್ಯವಮಿಂದ್ರ ಇದೀಶ ಏಷಾಮ್

ಭಾವಾರ್ಥ : ಈ ಮಂತ್ರದಲ್ಲಿ ಜಗದೀಶ್ವರನು ಹೇಗೆ ಅನಂತನೂ, ಪರಾಕ್ರಮಿಯೂ ಮತ್ತು ವ್ಯಾಪಕನೂ ಆಗಿರು ವನೋ, ಹಾಗೆ ಪಂಡಿತನು ಸಮಗ್ರ ಶಾಸ್ತç ಹಾಗೂ ಧರ್ಮಕೃತ್ಯ ಗಳಲ್ಲಿ ವ್ಯಾಪ್ಯನಾಗಿರುವನು. ಅವನು ನ್ಯಾಯಪಾಲಕನಾಗಿ ಎಲ್ಲಾ ಜೀವಿಗಳ ಸುಖಸಾಧಕನಾಗಲಿ ಎಂದು ತಿಳಿಸಲಾಗಿದೆ.

ಅಮಂದನ್ಮಾ ಮರುತ್ತಃ ಸ್ತೋಮೋ ಅತ್ರ ಯನ್ಮೇ ನರಃ ಶ್ರುತ್ಯಂ ಬ್ರಹ್ಮ ಚಕ್ರ |

ಇಂದ್ರಾಯ ವೃಷಣೇ ಸುಮಖಾಯ ಮಹ್ಯಂ ಸಖ್ಯೇ ಸಖಾಯಸ್ತನ್ವೇ ತನೂಭಿಃ

ಭಾವಾರ್ಥ: ಈ ಮಂತ್ರದಲ್ಲಿ ವಿದ್ಯಾವಂತರು ಹೇಗೆ ಅಧ್ಯಯನ ಮಾಡಿರುವರೋ ಶಬ್ದಾರ್ಥ ಸಂಬAಧಗಳನ್ನು ತಿಳಿದಿರುವರೋ, ಹಾಗೇ ವೇದಗಳು ಸ್ವಾತ್ಮರೂಪದಿಂದ ಅವರನ್ನು ಸುಖಗಳಾಗಿಸುತ್ತವೆ. ಹಾಗೆಯೇ ಇನ್ನೊಬ್ಬರನ್ನೂ ಸುಖಿಗಳ ನ್ನಾಗಿಸುತ್ತವೆ ಎಂದು ತಿಳಿದು ಅವರ ಶಿಷ್ಯರನ್ನು ಅಧ್ಯಾಪನ ಮಾಡಿಸಬೇಕು. ಹೇಗೆ ತಾವು ಅಧ್ಯಯನ ನಿಯಮಗಳಿಂದ ತಮ್ಮ ಆರೋಗ್ಯ ವೀರ್ಯಗಳನ್ನು ವೃದ್ಧಿಸಿಕೊಳ್ಳುವರೋ ಹಾಗೆ ಅನ್ಯರಿಗೂ ಮಾಡಬೇಕು ಎಂದು ಸೂಚಿಸಲಾಗಿದೆ.

ಏವೇದೇತೇ ಪ್ರತಿ ಮಾ ರೋಚಮಾನಾ ಆನೇದ್ಯಃ ಶ್ರವ ಏಷೋ ದಧಾನಾಃ|

ಸಂಚಕ್ಷಾö್ಯ ಮರುತ್ತಶ್ಚಂದ್ರವರ್ಣಾ ಅಚ್ಛಾಂತ ಮೇ ಛದಯಾಥಾ ಚ ನೂನಮ್

ಭಾವಾರ್ಥ : ಈ ಮಂತ್ರದಲ್ಲಿ ಯಾರು ಸ್ತಿçà ಪುರುಷರನ್ನು ಉತ್ತಮವಾಗಿ ಅಧ್ಯಯನ ಮಾಡಿಸಿ ಅವರನ್ನು ಪ್ರಶಂಸಿತ ಗುಣ-ಕರ್ಮ ಸ್ವಭಾವವಂತ ರನ್ನಾಗಿ ಮಾಡಿ ಧರ್ಮಯುಕ್ತ ವ್ಯವಹಾರಗಳಲ್ಲಿ ತೊಡಗಿಸುವರೋ, ಅವರೇ ಎಲ್ಲರನ್ನೂ ಸುಶೋಭಿತರನ್ನಾಗಿ ಮಾಡಿಸುತ್ತಾರೆ ಎಂದು ಮನುಷ್ಯನು ಎಲ್ಲರ ಮಿತ್ರನಾಗಬೇಕು ಎಂಬದನ್ನು ತಿಳಿಸಲಾಗಿದೆ.

ಕೋ ನ್ವತ್ರ ಮರುತೋ ಮಾಮಹೇ ವಃ ಪ್ರ ಯಾತನ ಸಖೀರಚ್ಛಾ ಸಖಾಯಃ |

ಮನ್ಮಾನಿ ಚಿತ್ರಾ ಅಪಿವಾತಯಂತ ಏಷಾಂ ಭೂತ ನವೇದಾ ಮ ಋತಾನಾಮ್

ಭಾವಾರ್ಥ : ಮನುಷ್ಯರು ಎಲ್ಲರಲ್ಲಿಯೂ ಮಿತ್ರತ್ವವನ್ನು ಹೊಂದಿಸಿ ಅವರಿಗೆ ವಿದ್ಯೆಯನ್ನು ತಲುಪಿಸಿ ಅವರನ್ನು ಧರ್ಮಯುಕ್ತ ಪುರುಷಾರ್ಥ ದಲ್ಲಿ ತೊಡಗಿಸಬೇಕು. ಇದರಿಂದ ಅವರು ಸರ್ವತ್ರ ಸತ್ಕಾರಯುಕ್ತರಾಗುತ್ತಾರೆ ಮತ್ತು ಸತ್ಯಾಸತ್ಯಗಳನ್ನು ತಿಳಿದು ಇತರರಿಗೆ ಉಪದೇಶವನ್ನು ನೀಡುತ್ತಾರೆ. ವೇದಾರ್ಥ ವಿಜ್ಞಾನಗಳು ಎಲ್ಲರಿಗೂ ಸೇವನಾ ಯೋಗ್ಯವಾಗಿವೆ ಎಂಬದನ್ನು ತಿಳಿಸಲಾಗಿದೆ.

ಆ ಯದ್ ದುವಸ್ಯಾದ್ ದುವಸೇ ನ ಕಾರು ರಸ್ಮಾಞ್‌ಚಕ್ರೇ ಮಾನ್ಯಸ್ಯ ಮೇಧಾ |

ಓ ಷು ವರ್ತ್ತ ಮರುತೋ ವಿಪ್ರಮಚ್ಛೇ-ಮಾ ಬ್ರಹ್ಮಾಣಿ ಜರಿತಾ ವೋ ಅರ್ಚತ್

ಭಾವಾರ್ಥ : ಈ ಮಂತ್ರದಲ್ಲಿ ಶಿಲ್ಪಿಗಳು ಹೇಗೆ ತಾವು ಶಿಲ್ಪವಿದ್ಯೆಯಿಂದ ಸಿದ್ಧಪಡಿಸಿದ ಪದಾರ್ಥಗಳನ್ನು ಸೇವಿಸುವರೋ, ಹಾಗೇ ವೇದಾರ್ಥ ಮತ್ತು ವೇದವಿಜ್ಞಾನಗಳು ಎಲ್ಲರಿಗೂ ಸೇವನಾ ಯೋಗ್ಯವಾಗಿವೆ. ವೇದವಿದ್ಯೆಯ ಹೊರತಾಗಿ ಸತ್ಕಾರಯೋಗ್ಯ ವಿದ್ಯಾವಂತನಾಗುವುದಿಲ್ಲ. ಯಾವ ವಿದ್ವಾಂಸನ ಜನ್ಮವು ಸಫಲವಾಗುತ್ತದೆ ಎಂಬದನ್ನು ತಿಳಿಸಲಾಗಿದೆ.

ಏಷಃ ವಃ ಸ್ತೋಮೋ ಮರುತ ಇಯಂ ಗೀ-ರ್ಮಾಂದಾರ್ಯಸ್ಯ ಮಾನ್ಯಸ್ಯ ಕಾರೋಃ|

ಏಷಾ ಯಾಸೀಷ್ಟ ತನ್ವೇ ವಯಾಂ ವಿದ್ಯಾಮೇಷಂ ವೃಜನಂ ಜೀರದಾನುಮ್

ಭಾವಾರ್ಥ : ಯಾವನು ಶಾಸ್ತç ಜ್ಞಾನ, ಧರ್ಮಜ್ಞಾನಗಳನ್ನು ಪಡೆದ ಪುರುಷಾರ್ಥೀ ಪಂಡಿತನು ಪುರುಷನ ಉತ್ತೇಜನದಿಂದ ವಿದ್ಯಾಶಾಸ್ತç ಗಳನ್ನು ಅಧ್ಯಯನ ಮಾಡಿ, ಅನುಭವ ಪಡೆದು ಧರ್ಮಯುಕ್ತ ವ್ಯವಹಾರಗಳ ಆಚರಣೆ ಮಾಡುವನೋ ಅವನ ಜನ್ಮವು ಸಫಲ ಸಾರ್ಥಕವಾಗುತ್ತದೆ.

ತನ್ನು ವೋಪಾಯ ರಭಪಾಯ ಜನ್ಮನೇ ಪೂರ್ವಂ ವಹಿತ್ವಂ ವೃಷಭ್ಯಸ್ಯ ಕೇತುವೇ

ಐ ದೇವ ಯಮನ್ ಮರುತಸ್ತು ವಿಷ್ಣುಣೋ ಯುಧೇವ ಶಕ್ತಾಸ್ತವಿಷಾಣಿ ಕರ್ತನ

ಭಾವಾರ್ಥ: ಚತುರನಾದ ಅಧ್ಯಾಪಕನು ವಿದ್ಯಾರ್ಥಿಗಳ ವರ್ತನೆಗನು ಗುಣವಾಗಿ ಜನ್ಮ ಜನ್ಮಾಂತರಗಳಲ್ಲಿ ಮಾಡಿರುವ ಕರ್ಮಗಳಿಗನುಗುಣವಾಗಿ ಜ್ಞಾನ ಸಂಗತಿಯನ್ನು ಅವರ ಕಾರ್ಯಗಳನ್ನು ನೋಡಿ ಅರಿತು ಉಪದೇಶ ಮಾಡಬೇಕು. ಹಾಗೆಯೇ ಅಂಥ ಜಿಜ್ಞಾಸುಗಳನ್ನು ಬ್ರಹ್ಮಚರ್ಯಾದಿ ವೇದಗ್ರಹಣ ವ್ರತಗಳಿಂದ ಇಂದ್ರೀಯಗಳ ಮೇಲೆ ಹಿಡಿತವನ್ನು, ಉತ್ತಮ ಶರೀರವನ್ನು ಮತ್ತು ಆತ್ಮಬಲವನ್ನು ಹೆಚ್ಚಿಸಬೇಕು.

ಮತ್ತೊಂದು ಶ್ಲೋಕದ ಭಾವಾರ್ಥ ಹೀಗಿದೆ : ಯಾವನು ಎಲ್ಲಾ ಜೀವಿಗಳಿಗೂ ಪ್ರಾಣದಂತೆ ಉಪಕಾರ ಮಾಡುವವನು, ಜಲ ಅನ್ನಗಳಂತೆ, ಆನಂದಕ್ಕೆ ಕಾರಣನಾಗುವವನು, ವಿದ್ಯಾವತೀ ತಾಯಿ ಮಗನೊಂದಿಗೆ ಹೇಗೆ ವರ್ತಿಸುವಳೋ ಆ ರೀತಿ ವ್ಯವಹರಿಸುವನು, ಅಂತಹವನೇ ಶ್ರೇಷ್ಠ ವ್ಯಕ್ತಿಗಳನ್ನು ಮೇಲಕ್ಕೆತ್ತುವವನು, ದುಷ್ಟ ವ್ಯಕ್ತಿಗಳನ್ನು ತಗ್ಗಿಸುವವನು ಆಗುತ್ತಾನೆ. ಅಂತಹ ವಿದ್ಯಾವಂತನೇ ಉತ್ತಮ ಅಧ್ಯಾಪಕನೆನಿಸಿಕೊಳ್ಳುತ್ತಾನೆ. (ಮುಂದುವರಿಯುವುದು)

-ಜಿ. ರಾಜೇಂದ್ರ, ಮಡಿಕೇರಿ.