ಪೊನ್ನಂಪೇಟೆ, ಅ. ೩: ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಸಹಾಯಕ ಆರಕ್ಷಕ ಉಪ ನಿರೀಕ್ಷಕರಾಗಿ ಕರ್ತವ್ಯ ನಿವಹಿಸುತ್ತಿದ್ದ ಕೆ. ಗಣಪತಿ ನಿವೃತ್ತಿ ಹೊಂದಿದ್ದು ಇವರಿಗೆ ಪೊಲೀಸ್ ಠಾಣೆ ವತಿಯಿಂದ ಬೀಳ್ಕೊಡುಗೆ ನೀಡಲಾಯಿತು.

ಗಣಪತಿ ಅವರು ೧೯೮೩ ಅಕ್ಟೋಬರ್ ೧೫ರಲ್ಲಿ ಕರ್ತವ್ಯಕ್ಕೆ ಸೇರಿದ್ದು, ಸುದೀರ್ಘ ೩೮ ವರ್ಷಗಳ ಕಾಲ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ಪೊನ್ನಂಪೇಟೆ ಕೊಡವ ಸಮಾಜ ಸಭಾಂಗಣದಲ್ಲಿ ನಡೆದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ವೀರಾಜಪೇಟೆ ತಾಲೂಕು ಡಿವೈಎಸ್‌ಪಿ ಜಯ ಕುಮಾರ್, ಗೋಣಿಕೊಪ್ಪ ವೃತ್ತ ನಿರೀಕ್ಷಕ ಜಯರಾಮ್, ಪೊನ್ನಂಪೇಟೆ ಠಾಣಾಧಿಕಾರಿ ಡಿ. ಕುಮಾರ್, ಶ್ರೀಮಂಗಲ ಠಾಣಾಧಿಕಾರಿ ರವಿಶಂಕರ್, ಕುಟ್ಟ ಠಾಣಾಧಿಕಾರಿ ಚಂದ್ರಪ್ಪ, ಉಪ ಠಾಣಾಧಿಕಾರಿಗಳು, ಗಣಪತಿ ಅವರ ಕುಟುಂಬ ವರ್ಗ ಹಾಗೂ ಪೊಲೀಸ್ ಸಿಬ್ಬಂದಿ ಹಾಜರಿ ದ್ದರು. ಪೊನ್ನಂಪೇಟೆ ಠಾಣಾಧಿಕಾರಿ ಡಿ. ಕುಮಾರ್ ಸ್ವಾಗತಿಸಿ, ವಂದಿಸಿದರು. ಮಹದೇಶ್ವರ ಸ್ವಾಮಿ ನಿರೂಪಿಸಿದರು.