ಮಡಿಕೇರಿ, ಅ. ೨: ಗಾಂಧೀಜಿ ತತ್ವ ಸಿದ್ಧಾಂತಗಳನ್ನು ಪ್ರತಿಯೊಬ್ಬರು ಮೈಗೂಡಿಸಿಕೊಂಡರೆ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಹೇಳಿದರು.

ನಗರದ ಗಾಂಧಿ ಸ್ಮಾರಕದಲ್ಲಿ ಸರ್ವೋದಯ ಸಮಿತಿ ವತಿಯಿಂದ ನಡೆದ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಬಳಿಕ ಮಾತನಾಡಿದ ಅವರು, ಗಾಂಧೀಜಿ ಅವರ ತತ್ವ, ಆದರ್ಶ, ಸಿದ್ಧಾಂತವನ್ನು ಪ್ರತಿಯೊಬ್ಬರು ಪ್ರತಿದಿನ ಸ್ಮರಿಸಬೇಕು. ಅವರ ಸರಳ ಜೀವನ, ಸಮಾಜಮುಖಿ ಚಿಂತನೆ ಅಳವಡಿಸಿಕೊಂಡರೆ ಶಾಂತಿಯುತ ಸಮಾಜ ನಿರ್ಮಾಣ ಸಾಧ್ಯ. ಗಾಂಧೀಜಿ ಅವರು ಕೈಗೊಂಡ ಸ್ವಾತಂತ್ರ‍್ಯ ಚಳುವಳಿ ಇಡೀ ಪ್ರಪಂಚಕ್ಕೆ ಮಾದರಿಯಾಗಿದೆ ಎಂದರು.

ನಗರಸಭೆ ಪೌರಾಯುಕ್ತ ಎಸ್.ವಿ. ರಾಮದಾಸ್ ಮಾತನಾಡಿ, ಕೊಡಗಿಗೆ ಗಾಂಧೀಜಿ ಆಗಮಿಸಿ ಇಲ್ಲಿಯೂ ಸ್ವಾತಂತ್ರ‍್ಯ ಚಳುವಳಿಯ ಕಿಚ್ಚು ಹಚ್ಚಿದ್ದರು.

ಪ್ರತಿಯೊಬ್ಬರು ಪ್ರತಿದಿನ ಸ್ಮರಿಸಬೇಕು. ಅವರ ಸರಳ ಜೀವನ, ಸಮಾಜಮುಖಿ ಚಿಂತನೆ ಅಳವಡಿಸಿಕೊಂಡರೆ ಶಾಂತಿಯುತ ಸಮಾಜ ನಿರ್ಮಾಣ ಸಾಧ್ಯ. ಗಾಂಧೀಜಿ ಅವರು ಕೈಗೊಂಡ ಸ್ವಾತಂತ್ರ‍್ಯ ಚಳುವಳಿ ಇಡೀ ಪ್ರಪಂಚಕ್ಕೆ ಮಾದರಿಯಾಗಿದೆ ಎಂದರು.

ನಗರಸಭೆ ಪೌರಾಯುಕ್ತ ಎಸ್.ವಿ. ರಾಮದಾಸ್ ಮಾತನಾಡಿ, ಕೊಡಗಿಗೆ ಗಾಂಧೀಜಿ ಆಗಮಿಸಿ ಇಲ್ಲಿಯೂ ಸ್ವಾತಂತ್ರ‍್ಯ ಚಳುವಳಿಯ ಕಿಚ್ಚು ಹಚ್ಚಿದ್ದರು.

(ಮೊದಲ ಪುಟದಿಂದ) ಅವರನ್ನು ವಿಶೇಷವಾಗಿ ಕೊಡಗಿನಲ್ಲಿ ಪೂಜಿಸಲಾಗುತ್ತದೆ. ಅವರ ಚಿತಾಭಸ್ಮ ಮಡಿಕೇರಿಯಲ್ಲಿದ್ದು, ಪ್ರತಿ ವರ್ಷ ಪುಣ್ಯತಿಥಿಯಂದು ಅದನ್ನು ಹೊರತೆಗೆದು ಗೌರವ ನೀಡಲಾಗುತ್ತದೆ. ಈ ಮೂಲಕ ಶಾಂತಿ ಸಂದೇಶ ಸಾರಲಾಗುತ್ತದೆ ಎಂದರು.

ಮಡಿಕೇರಿ ತಾಲೂಕು ತಹಶೀಲ್ದಾರ್ ಮಹೇಶ್ ಮಾತನಾಡಿ, ಸತ್ಯ, ಅಹಿಂಸೆ ಗಾಂಧೀಜಿಯ ಮೂಲಮಂತ್ರವಾಗಿತ್ತು. ದೇಶಕ್ಕೆ ಸ್ವಾತಂತ್ರ‍್ಯ ಸಿಗಲು ಅವರು ಪ್ರಮುಖ ಪಾತ್ರ ವಹಿಸಿದ್ದರು. ಗ್ರಾಮ ಸ್ವರಾಜ್ಯ ಕನಸು ಕಂಡಿದ್ದು, ಒಕ್ಕೂಟ ವ್ಯವಸ್ಥೆಯ ದೂರದೃಷ್ಟಿ ಹೊಂದಿದ್ದರು ಎಂದು ಹೇಳಿದರು.

ಆಕರ್ಷಿಸಿದ ಜಾದು : ಕಾರ್ಯಕ್ರಮಕ್ಕೂ ಮುನ್ನ ವಿಕ್ರಂ ಜಾದುಗಾರ್ ಮಾಡಿದ ಜಾದು ಎಲ್ಲರನ್ನೂ ಆಕರ್ಷಿಸಿತು.

ಕನ್ನಡಿ ಕ್ಷಣಾರ್ಧದಲ್ಲಿ ಗಾಂಧೀಜಿ ಭಾವಚಿತ್ರ ಹೊಂದಿರುವ ' ಫೋಟೋ ಫ್ರೇಂ' ಆಗಿ ಪರಿವರ್ತನೆಗೊಂಡಿತು. ಒಂದು ಖಾಲಿ ಡಬ್ಬಕ್ಕೆ ಬೆಂಕಿ ಹಾಕಿ ನಂತರ ತೆಗೆದಾಗ ಅದರಲ್ಲಿ ಹೂಮಾಲೆ ಇತ್ತು. ಇದನ್ನು ಜಿಲ್ಲಾಧಿಕಾರಿ ಗಾಂಧಿ ಪ್ರತಿಮೆಗೆ ಹಾಕಿದರು. ಜಾದು ನೆರೆದಿದ್ದವರ ಅಚ್ಚರಿಗೆ ಕಾರಣವಾಯಿತು.

ಈ ಸಂದರ್ಭ ಸರ್ವೋದಯ ಸಮಿತಿ ಅಧ್ಯಕ್ಷ ಅಂಬೇಕಲ್ ಕುಶಾಲಪ್ಪ, ಪ್ರಮುಖರಾದ ನವೀನ್ ಕುಶಾಲಪ್ಪ, ಲಿಯಾಕತ್ ಅಲಿ, ವಾಸು, ಪ್ರಕಾಶ್ ಆಚಾರ್ಯ, ಮುದ್ದಯ್ಯ, ಸುರಯ್ಯ ಅಬ್ರಾರ್, ಮಿನಾಜ್ ಪ್ರವೀಣ್, ಕೋಡಿ ಚಂದ್ರಶೇಖರ್, ಮುನೀರ್ ಆಹಮದ್, ಕೇಶವ್ ಕಾಮತ್, ಮನು ಶೆಣೈ ಸೇರಿದಂತೆ ಇನ್ನಿತರರು ಹಾಜರಿದ್ದರು.