ಮಮತಾ ಬ್ಯಾನರ್ಜಿಗೆ ಗೆಲುವು-ಸಿ.ಎಂ. ಪಟ್ಟ ಭದ್ರ
ಭವಾನಿಪುಡಿ, ಅ. ೩: ಸಿಎಂ ಮಮತಾ ಬ್ಯಾನರ್ಜಿಗೆ ಸಿಎಂ ಪಟ್ಟ ಭದ್ರವಾಗಿದೆ. ಭವಾನಿಪುರ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪ್ರಿಯಾಂಕ ಟಿಬ್ರೆವಾಲ್ ವಿರುದ್ಧ ೫೮ ಸಾವಿರದ ೩೮೯ ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ಕಳೆದ ಬಾರಿ ಪಶ್ಚಿಮ ಬಂಗಾಳಕ್ಕೆ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ಪರಾಭವಗೊಂಡಿದ್ದರು. ಆದರೂ ಟಿಎಂಸಿಗೆ ಬಹುಮತ ಬಂದ ಹಿನ್ನೆಲೆ ಮುಖ್ಯಮಂತ್ರಿ ಯಾದರು. ಅದಾಗಿ ಆರು ತಿಂಗಳ ಬಳಿಕ ಭವಾನಿಪುರ ಕ್ಷೇತ್ರದ ಉಪ ಚುನಾವಣೆಯಲ್ಲಿ ಸ್ಪರ್ಧಿಸಿದರು. ಈ ಗೆಲುವು ಮಮತಾ ಬ್ಯಾನರ್ಜಿಗೆ ಸಿಎಂ ಖುರ್ಚಿ ಉಳಿಸಿಕೊಳ್ಳಲು ಅನಿವಾರ್ಯವಾಗಿತ್ತು. ಪಶ್ಚಿಮ ಬಂಗಾಳದಲ್ಲಿ ವಿಧಾನ ಪರಿಷತ್ ಇಲ್ಲದ ಹಿನ್ನೆಲೆ ಭವಾನಿಪುರ ಕ್ಷೇತ್ರದಿಂದ ಉಪ ಚುನಾವಣೆ ನಡೆದಿತ್ತು.
ಡ್ರಗ್ಸ್ ಪಾರ್ಟಿ : ಶಾರುಖ್ ಪುತ್ರ ಸೇರಿ ೮ ಮಂದಿ ಬಂಧನ
ಮುAಬೈ, ಅ. ೩: ಮುಂಬೈ ಕರಾವಳಿ ತೀರದ ಐಷಾರಾಮಿ ಹಡಗಿನಲ್ಲಿ ನಡೆದಿದ್ದ ಡ್ರಗ್ಸ್ ಪಾರ್ಟಿ ಪ್ರಕರಣಕ್ಕೆ ಸಂಬAಧಿಸಿದAತೆ ನಾರ್ಕೊಟಿಕ್ಸ್ ಕ್ರೆöÊಮ್ ಬ್ರಾö್ಯಂಚ್(ಎನ್ಸಿಬಿ) ಅಧಿಕಾರಿಗಳ ತಂಡ ಬಾಲಿವುಡ್ ಸೂಪರ್ ಸ್ಟಾರ್ ಶಾರೂಕ್ ಖಾನ್ ಪುತ್ರ ಆರ್ಯನ್ ಖಾನ್ನನ್ನು ಬಂಧಿಸಿದೆ. ಪ್ರಕರಣ ಸಂಬAಧ ಮುಂಬೈನ ಕಚೇರಿಯಲ್ಲಿ ತೀವ್ರ ವಿಚಾರಣೆ ನಡೆಸಿದ್ದ ಎನ್ಸಿಬಿ ಕೊನೆಗೆ ಆರ್ಯನ್ ಖಾನ್ ನನ್ನು ಬಂಧಿಸಿದೆ. ಇದೇ ವೇಳೆ ಅಧಿಕಾರಿಗಳು ಮೆಡಿಕಲ್ ಟೆಸ್ಟ್ಗೆ ಒಳಪಡಿಸಲಾಗುತ್ತದೆ. ರೇವ್ ಪಾರ್ಟಿ ನಡೆಯುತ್ತಿದ್ದ ಬಗ್ಗೆ ನಿಖರ ಮಾಹಿತಿ ಪಡೆದು ಏಕಾಏಕಿ ದಾಳಿ ನಡೆಸಿದ ತಂಡ ೮ ಮಂದಿಯನ್ನು ವಶಕ್ಕೆ ಪಡೆದಿದ್ದು ಅವರ ಹೆಸರುಗಳನ್ನು ಬಿಡುಗಡೆ ಮಾಡಿದೆ. ಅವರಲ್ಲಿ ಇಬ್ಬರು ಯುವತಿಯರೂ ಸೇರಿದ್ದಾರೆ. ವಶಕ್ಕೆ ಪಡೆದವರ ಹೆಸರುಗಳು ಆರ್ಯನ್ ಖಾನ್, ಅರ್ಬಾಜ್ ಮರ್ಚೆಂಟ್, ಮುನ್ಮುನ್ ಧಮೇಚ, ನೂಪುರ್ ಸಾರಿಕಾ, ಇಸ್ಮೀತ್ ಸಿಂಗ್, ಮೊಹಕ್ ಜಸ್ವಾಲ್, ವಿಕ್ರಾಂತ್ ಚೋಕರ್, ಗೋಮಿತ್ ಚೋಪ್ರಾ ಆಗಿದ್ದಾರೆ ಎಂದು ಎನ್ ಸಿಬಿ ನಿರ್ದೇಶಕ ಸಮೀರ್ ವಾಂಖೆಡೆ ತಿಳಿಸಿದ್ದಾರೆ. ವಶಕ್ಕೆ ಪಡೆದವರಿಂದ ಎಂಡಿಎAಎ, ಎಸ್ಕೆಸಿ, ಕೊಕೈನ್, ಎಂಡಿ ಮತ್ತು ಚರಸ್ ಮಾದಕ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಈ ದಾಳಿ ಕಳೆದ ರಾತ್ರಿ ನಡೆದಿದೆ. ಡ್ರಗ್ಸ್ ಪಾರ್ಟಿಗೆ ಸಂಬAಧಿಸಿದAತೆ ಸಂಸ್ಥೆ ಆಯೋಜಕರ ವಿರುದ್ಧ ಎಫ್ಐಆರ್ ದಾಖಲಿಸಿದೆ.
ಶೌಚಾಲಯ ಬಳಕೆ ವಿಚಾರಕ್ಕೆ ಕಲ್ಲು ತೂರಾಟ
ನವದೆಹಲಿ, ಅ. ೩: ಶೌಚಾಲಯ ಬಳಕೆಯ ವಿಷಯವಾಗಿ ಎರಡು ಗುಂಪುಗಳ ನಡುವೆ ಪರಸ್ಪರ ಕಲ್ಲು ತೂರಾಟ ನಡೆದಿದ್ದು, ಮೂವರಿಗೆ ತೀವ್ರ ಗಾಯಗಳಾಗಿದ್ದು ಪ್ರಕರಣಕ್ಕೆ ಸಂಬAಧಿಸಿದAತೆ ೯ ಮಂದಿಯನ್ನು ಬಂಧಿಸಲಾಗಿದೆ. ಬುದ್ಧ್ ಬಜಾರ್ ಸ್ಲಮ್, ಗೀತ ಕಾಲೋನಿಯಲ್ಲಿ ಈ ಘಟನೆ ನಡೆದಿದೆ. ಘಟನೆ ಬೆಳಕಿಗೆ ಬರುತ್ತಿದ್ದಂತೆಯೇ ಪಿಸಿಆg ಗೆ ಘಟನೆ ಕುರಿತು ಮಾಹಿತಿ ನೀಡಲಾಗಿತ್ತು. ತಕ್ಷಣವೇ ಸ್ಥಳಕ್ಕೆ ಧಾವಿಸಿದ ಅವರು ಆರೋಪಿಗಳನ್ನು ಬಂಧಿಸಿದ್ದಾರೆ. ಶೌಚಾಲಯದ ಬಳಿ ಇದ್ದ ಗುಂಪು ಹಾಗೂ ಸ್ವಲ್ಪ ದೂರದಲ್ಲಿದ್ದ ಮತ್ತೊಂದು ಶೌಚಾಲಯ ಬಳಿ ಇದ್ದ ಗುಂಪು ಪರಸ್ಪರ ಕಲ್ಲು ತೂರಾಟ ಮಾಡಿಕೊಂಡಿವೆ. ಶೌಚಾಲಯ ಬಳಕೆ ವಿಷಯವಾಗಿ ಜಗಳವಾಗಿದ್ದು, ಎರಡೂ ಗುಂಪುಗಳು ಕಠಿಣ ಶಬ್ದಗಳನ್ನು ಪ್ರಯೋಗಿಸಿರುವ ಆರೋಪವನ್ನು ಪರಸ್ಪರ ಮಾಡಿವೆ ಎಂದು ಪೊಲೀಸರು ಹೇಳಿದ್ದಾರೆ.
ತೈಲೋತ್ಪನ್ನಗಳ ದರ ಏರಿಕೆ
ನವದೆಹಲಿ, ಸೆ. ೩: ದೇಶದಾದ್ಯಂತ ಇಂಧನ ದರ ಭಾನುವಾರವೂ ಹೆಚ್ಚಳವಾಗಿದ್ದು, ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪೆನಿಗಳು ಭಾನುವಾರ ಪೆಟ್ರೋಲ್ ದರವನ್ನು ಲೀಟರಿಗೆ ೨೫ ಪೈಸೆ ಮತ್ತು ಡೀಸೆಲ್ ದರವನ್ನು ಲೀಟರಿಗೆ ೩೦ ಪೈಸೆ ಹೆಚ್ಚಿಸಿವೆ ಎಂದು ತಿಳಿದುಬಂದಿದೆ. ಸತತ ನಾಲ್ಕನೇ ದಿನವೂ ದೇಶಾದ್ಯಂತ ಮತ್ತೆ ತೈಲೋತ್ಪನ್ನಗಳ ದರ ಏರಿಕೆಯಾಗಿದ್ದು, ಭಾನುವಾರ ಪೆಟ್ರೋಲಿಯಂ ಉತ್ಪನ್ನಗಳು ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ತಲುಪಿವೆ. ಸರ್ಕಾರಿ ತೈಲ ಕಂಪನಿಗಳ ಇಂದು (ಅಕ್ಟೋಬರ್ ೩, ಭಾನುವಾರ) ಪೆಟ್ರೋಲ್, ಡೀಸೆಲ್ ಬೆಲೆಯನ್ನು ಏರಿಕೆ ಮಾಡಿದ್ದು, ಇಂದು ಲೀಟರ್ ಪೆಟ್ರೋಲ್ ದರ ೨೫ ರಿಂದ ೩೦ ಪೈಸೆ ಹೆಚ್ಚಳವಾಗಿದ್ದರೆ, ಪ್ರತೀ ಲೀಟರ್ ಡೀಸೆಲ್ ದರ ೨೮ ರಿಂದ ೩೦ ಪೈಸೆ ಹೆಚ್ಚಳವಾಗಿದೆ. ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್ ದರ ೧೦೫.೯೧ ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ ೯೬.೩ ರೂಪಾಯಿಗೆ ಏರಿಕೆ ಆಗಿದೆ.
ಕಲ್ಯಾಣ ಕರ್ನಾಟಕಕ್ಕೆ ರೂ. ೩ ಸಾವಿರ ಕೋಟಿ
ಬಳ್ಳಾರಿ, ಅ. ೩: ಕಲ್ಯಾಣ ಕರ್ನಾಟಕ ಅಭಿವೃದ್ದಿಗೆ ೩ ಸಾವಿರ ಕೋಟಿ ರೂಪಾಯಿ ಅನುದಾನ ನೀಡುವುದಾಗಿ ಮುಖ್ಯಮಂತ್ರಿ ಬೊಮ್ಮಾಯಿ ಹೇಳಿದ್ದಾರೆ. ಬಳ್ಳಾರಿ ನಗರದ ಆರ್.ವೈ.ಎಂ.ಇ.ಸಿ ಕಾಲೇಜು ಆವರಣದಲ್ಲಿ ಇರುವ ಎಸ್.ಕೆ. ಮೋದಿ ನ್ಯಾಷನಲ್ ಸ್ಕೂಲ್, ವಿ.ವಿ. ಸಂಘದ ಕಿಂಡರ್ ಗಾರ್ಡನ್ ನೂತನ ಕಟ್ಟಡಗಳನ್ನು ಉದ್ಘಾಟಿಸಿ ಮತ್ತು ಎಸ್.ಕೆ. ಮೋದಿ ಅವರ ಪ್ರತಿಮೆಯನ್ನು ಭಾನುವಾರ ಅನಾವರಣಗೊಳಿಸಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಹೆಚ್ಚು ಒತ್ತು ಕೊಡುತ್ತೇವೆ. ಪ್ರಸ್ತುತ ನೀಡುತ್ತಿರುವ ರೂ. ೧೫೦೦ ಕೋಟಿ ಅನುದಾನದ ಬದಲಿಗೆ, ರೂ. ೩೦೦೦ ಕೋಟಿ ಅನುದಾನ ನೀಡಲು ಬದ್ಧರಿದ್ದೇವೆ ಎಂದು ಹೇಳಿದರು.
ಅತ್ಯಾಚಾರ ಆರೋಪಿಗೆ ಗಲ್ಲು ಶಿಕ್ಷೆ ರದ್ದು
ಬೆಂಗಳೂರು, ಅ. ೩: ಮೂರುವರ್ಷಗಳ ಹಿಂದೆ ಅಪ್ರಾಪ್ತೆಯ ಮೇಲೆ ಅತ್ಯಾಚಾರ ಮಾಡಿದ್ದ ೬೨ ವರ್ಷದ ವ್ಯಕ್ತಿಗೆ ವಿಚಾರಣಾ ನ್ಯಾಯಾಲಯ ಪೋಕ್ಸೋ ಕಾಯ್ದೆಯಡಿ ವಿಧಿಸಿದ್ದ ಮರಣದಂಡನೆ ಶಿಕ್ಷೆಯನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿದೆ. ಟ್ರಯಲ್ ಕೋರ್ಟ್ ನೀಡಿದ್ದ ತೀರ್ಪನ್ನು ಮರುಪರಿಶೀಲನೆ ಮಾಡುವಂತೆ ಆರೋಪಿ ವೆಂಕಟೇಶಪ್ಪ (೬೨) ಕ್ರಿ ಅಪೀಲ್ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ಜಿ. ನರೇಂದರ್ ನೇತೃತ್ವದ ಪೀಠ, ಮರಣದಂಡನೆ ರದ್ದುಗೊಳಿಸಿ, ಪ್ರಕರಣವನ್ನು ಹೊಸದಾಗಿ ತನಿಖೆ ಮಾಡಬೇಕು. ಆರು ತಿಂಗಳ ಒಳಗೆ ತನಿಖೆ ಮುಗಿಯಬೇಕು ಎಂದು ಆದೇಶ ನೀಡಿದೆ. ಪ್ರಕರಣದ ತನಿಖೆ ನಡೆಸಿದ್ದ ತನಿಖಾಧಿಕಾರಿಗಳು ಆರೋಪಿ ವಿರುದ್ಧ ಚಾರ್ಜ್ಶೀಟ್ ಸಲ್ಲಿಸಿದ್ದರು. ಈ ಚಾರ್ಜ್ಶೀಟ್ ಜತೆಗೆ ಡಿಎನ್ಎ ಪರೀಕ್ಷೆ ವರದಿಯನ್ನೂ ಟ್ರಯಲ್ ಕೋರ್ಟ್ಗೆ ಸಲ್ಲಿಸಿದ್ದರು. ಅದನ್ನೇ ಈಗ ಹೈಕೋರ್ಟ್ ಮರುಪರಿಶೀಲನೆ ಮಾಡಿದೆ. ಈ ಡಿಎನ್ಎ ಪರೀಕ್ಷೆ ವರದಿಯು ಅಷ್ಟೊಂದು ನಂಬಿಕಾರ್ಹವಲ್ಲ ಎಂದು ಹೈಕೋರ್ಟ್ ಹೇಳಿದೆ. ಅಲ್ಲದೆ, ರಕ್ತ ಮತ್ತು ವೀರ್ಯದ ಪರೀಕ್ಷೆಯನ್ನು ಹೊಸದಾಗಿ ಮಾಡಬೇಕು ಎಂದು ಆರೋಪಿ ಟ್ರಯಲ್ ಕೋರ್ಟ್ಗೆ ಸಲ್ಲಿಸಿದ್ದ ಮನವಿಯನ್ನೂ ಆ ನ್ಯಾಯಾಲಯ ವಜಾಗೊಳಿಸಿದ್ದರ ಬಗ್ಗೆ ಹೈಕೋರ್ಟ್ ಆಕ್ಷೇಪ ವ್ಯಕ್ತಪಡಿಸಿದೆ.
ಅತಿದೊಡ್ಡ ಡ್ರಗ್ಸ್ ಜಾಲ ಪತ್ತೆ
ಬೆಂಗಳೂರು, ಅ. ೩: ನಗರದಲ್ಲಿ ಅತಿದೊಡ್ಡ ಡ್ರಗ್ಸ್ ಜಾಲವನ್ನು ಪತ್ತೆ ಹಚ್ಚಿರುವ ರೈಲ್ವೇ ಪ್ರೊಟೆಕ್ಷನ್ ಫೋರ್ಸ್(ಆರ್ಪಿಎಫ್)ನ ಮಹಿಳಾ ತಂಡ ಸುಮಾರು ರೂ. ೩.೨ ಕೋಟಿ ಮೌಲ್ಯದ ೬೪೦ ಗ್ರಾಂ ಕ್ರಿಸ್ಟಲ್ ಮೆಥಾಂಫೆಟಮೈನ್ ಪಾರ್ಟಿ ಡ್ರಗ್ಅನ್ನು ವಶಪಡಿಸಿಕೊಂಡಿದೆ. ಪ್ರಶಾಂತಿ ಎಕ್ಸ್ಪ್ರೆಸ್ನ ಜನರಲ್ ಕೋಚ್ನಲ್ಲಿ ಪ್ರಯಾಣಿಸುತ್ತಿದ್ದ ಒಡಿಶಾ ಮೂಲದ ೪೪ ವರ್ಷದ ಪ್ರಯಾಣಿಕ ಕ್ರಿಸ್ಟಲ್ ಮೆಥ್ ಎಂದು ಕರೆಯಲ್ಪಡುವ ಡ್ರಗ್ಸ್ ಅನ್ನು ಹೊಂದಿದ್ದೆ ಎಂದು ಉನ್ನತ ರೈಲ್ವೆ ಮೂಲಗಳು ತಿಳಿಸಿವೆ. 'ಐಸ್' ಅಥವಾ 'ಗ್ಲಾಸ್' ಎಂದೂ ಕರೆಯಲ್ಪಡುವ ಜನಪ್ರಿಯ ಪಾರ್ಟಿ ಡ್ರಗ್ ಹೆಚ್ಚು ವ್ಯಸನಕಾರಿ ಮತ್ತು ಕೇಂದ್ರ ನರಮಂಡಲದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (ಬೆಂಗಳೂರು ನಗರ) ನಿಲ್ದಾಣದಿಂದ ಭುವನೇಶ್ವರಕ್ಕೆ ೧.೫೦ಕ್ಕೆ ಹೊರಟಿತು. ಮಹಿಳಾ ಪ್ರಯಾಣಿಕರ ಸುರಕ್ಷತೆಗಾಗಿ ವಿಶೇಷವಾಗಿ ರಚಿಸಲಾದ ಆರ್ಪಿಎಫ್ನ ಶಕ್ತಿ ಘಟಕದ ಆರು ಸದಸ್ಯರ ತಂಡವು ಗಸ್ತು ತಿರುಗುತ್ತಿತ್ತು ಎಂದು ಮೂಲಗಳು ತಿಳಿಸಿವೆ. ಪ್ರಯಾಣಿಕನ ದೇಹಸ್ಥಿತಿ ಪೊಲೀಸರಲ್ಲಿ ಸಂಶಯವನ್ನು ಹುಟ್ಟುಹಾಕಿತು. ಇದನ್ನು ಗಮನಿಸಿದ ಆತ ರೈಲು ಹಿಂದೂಪುರ ನಿಲ್ದಾಣವನ್ನು ತಲುಪಿದ ತಕ್ಷಣ ಕೆಳಗಿಳಿದು ಪೊಲೀಸರಿಗೆ ವಿರುದ್ಧ ದಿಕ್ಕಿನಲ್ಲಿ ಚಲಿಸಲು ಆರಂಭಿಸಿದರು ಎಂದು ಮೂಲಗಳು ವಿವರಿಸಿದೆ.