ಮಡಿಕೇರಿ, ಅ. ೨: ಕಾವೇರಿಯ ಉಗಮ ಸ್ಥಾನ ತಲಕಾವೇರಿಯಲ್ಲಿ ತುಲಾಸಂಕ್ರಮಣದAದು ತೀರ್ಥರೂಪಿಣಿಯಾಗಿ ಭಕ್ತರಿಗೆ ದರ್ಶನ ನೀಡುವ ಸಂದರ್ಭ ಭಾಗಮಂಡಲದಲ್ಲಿ ವಾಹನಗಳಿಗೆ ತಡೆ ಮಾಡಿ, ೮ ಕಿ.ಮೀ ಅಂತರ ಕಾಲ್ನಡಿಗೆ ಮೂಲಕ ತಲಕಾವೇರಿಗೆ ತೆರಳಲು ಅವಕಾಶ ನೀಡಲಾಗಿದೆ ಎಂದು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.
ನಗರದ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ಮಾತನಾಡಿದ ಅವರು, ತುಲಾ ಸಂಕ್ರಮಣವನ್ನು ಕೋವಿಡ್ ಮಾರ್ಗಸೂಚಿಯಂತೆ, ಭಕ್ತಾದಿಗಳ ನಂಬಿಕೆಗೆ ಘಾಸಿ ಆಗದ ರೀತಿ ಆಚರಣೆ ಮಾಡಲಾಗುವುದು. ತಾ. ೧೭ ರಂದು ಮಧ್ಯಾಹ್ನ ೧ ಗಂಟೆ ೧೧ ನಿಮಿಷಕ್ಕೆ ತೀರ್ಥೋದ್ಭವ ವಾಗಲಿದ್ದು, ಬೆಳಗ್ಗಿನಿಂದಲೇ ಭಾಗಮಂಡಲದಲ್ಲಿ ವಾಹನ ತಡೆಯಲಾಗುವುದು. ಭಾಗಮಂಡಲದಲ್ಲಿಯೇ ಎಲ್ಲ ವಾಹನಗಳ ನಿಲುಗಡೆಗೆ ಅವಕಾಶ ಕಲ್ಪಿಸಲಾಗುವುದು. ಅಲ್ಲಿಂದ ಕಾಲ್ನಡಿಗೆ ಮೂಲಕ ಮಾತ್ರ ಕ್ಷೇತ್ರಕ್ಕೆ ಭಕ್ತಾದಿಗಳಿಗೆ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತದೆ. ಅಧಿಕಾರಿಗಳ ವಾಹನಕ್ಕೆ ಮಾತ್ರ ಪ್ರವೇಶವಿರುತ್ತದೆ. ಸಂಜೆ ೬ ಗಂಟೆಯ ತನಕವೂ ನಿರ್ಬಂಧ ಮುಂದುವರೆ ಯುತ್ತದೆ ಎಂದು ಸ್ಪಷ್ಟವಾಗಿ ಹೇಳಿದರು.
ಭಾಗಮಂಡಲದಿAದ ತಲಕಾವೇರಿಗೆ ಪಾದಯಾತ್ರೆಯಲ್ಲಿ ತೆರಳುವ ಭಕ್ತಾದಿಗಳು ಗುರುತಿನ ಚೀಟಿ, ೭೨ ಗಂಟೆಯೊಳಗಿನ ಆರ್.ಟಿ.ಪಿ.ಸಿ.ಆರ್. ನೆಗೆಟಿವ್ ವರದಿ ತೋರಿಸಬೇಕು. ಅಲ್ಲದೆ ಕನಿಷ್ಟ ಒಂದು ಡೋಸ್ ಕೋವಿಡ್ ನಿರೋಧಕ ಲಸಿಕೆ ಪಡೆದಿರುವ ದೃಢೀಕರಣ ಪತ್ರ ಹೊಂದಿರಬೇಕು ಎಂದು ಮಾಹಿತಿ ನೀಡಿದರು.
ಭಾಗಮಂಡಲ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಹೊಸೂರು ಸತೀಶ್ಕುಮಾರ್ ಮಾತನಾಡಿ, ಭಾಗಮಂಡಲದಲ್ಲಿ ಈಗಾಗಲೇ ವಾಹನ ದಟ್ಟಣೆ ಹೆಚ್ಚಿದೆ. ತೀರ್ಥೋದ್ಭವ ಸಮಯದಲ್ಲಿ ಸಾಲು ಸಾಲು ರಜೆ ಇರುವುದರಿಂದ ಮತ್ತಷ್ಟು ವಾಹನ ದಟ್ಟಣೆ ಹೆಚ್ಚಾಗಬಹುದು. ವಾಹನ ನಿಲುಗಡೆಗೆ ಸಮಸ್ಯೆ ಉಂಟಾಗಬಹುದು. ಈ ಬಗ್ಗೆ ಕ್ರಮವಹಿಸುವಂತೆ ಸಭೆಯ ಗಮನ ಸೆಳೆದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ವೆಂಕಟೇಶ್ ಮಾತನಾಡಿ, ದೇವಾಲಯ ಸಿಬ್ಬಂದಿಗಳಿಗೆ, ಸ್ವಯಂ ಸೇವಕರಿಗೆ, ಪತ್ರಕರ್ತರಿಗೆ, ಅಧಿಕಾರಿಗಳಿಗೆ ತಾ. ೧೪ ರಂದು ಕೋವಿಡ್ ಪರೀಕ್ಷೆ ಮಾಡ ಲಾಗುವುದು.
(ಮೊದಲ ಪುಟದಿಂದ) ರ್ಯಾಪಿಡ್ ಆ್ಯಂಟಿಜನ್ ಪರೀಕ್ಷೆಗೂ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಸಭೆಗೆ ವಿವರಿಸಿದರು. ಅಲ್ಲದೆ ಜಿಲ್ಲೆಯಲ್ಲಿ ಶೇ. ೯೪ ಪ್ರಮಾಣದಲ್ಲಿ ಕೋವಿಡ್ ಲಸಿಕೆ ನೀಡಲಾಗಿದೆ ಎಂದರು. ಈ ಬಗ್ಗೆ ಮಾತನಾಡಿದ ಸಚಿವರು, ಲಸಿಕಾಕರಣದ ಪ್ರಮಾಣವನ್ನು ಹೆಚ್ಚಿಸುವಂತೆ ಸೂಚನೆ ನೀಡಿದರು.
ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಮಾತನಾಡಿ, ಜನದಟ್ಟಣೆ ಹೆಚ್ಚಾದಲ್ಲಿ ಪ್ರವಾಸಿಗರಿಗೆ ನಿರ್ಬಂಧ ಹೇರಬೇಕಾಗುತ್ತದೆ ಎಂದರು.
ಶಾಸಕ ಕೆ.ಜಿ. ಬೋಪಯ್ಯ, ವಿಧಾನ ಪರಿಷತ್ ಸದಸ್ಯರುಗಳಾದ ಶಾಂತೆಯAಡ ವೀಣಾ ಅಚ್ಚಯ್ಯ, ಜಿಲ್ಲಾಧಿಕಾರಿ ಚಾರುಲತಾ ಸೋಮಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭನ್ವರ್ ಸಿಂಗ್ ಮೀನಾ ಹಾಜರಿದ್ದರು.