ಮಡಿಕೇರಿ, ಅ.೧ : ಕಾಫಿಯ ಸ್ವಾದದ ಹಿಂದೆ ಇರುವ ಕಾಫಿ ಬೆಳೆಗಾರರ ಶ್ರಮವನ್ನು ಅರಿತುಕೊಳ್ಳಲು ಕಾಫಿ ದಿನಾಚರಣೆ ನೆರವಾಗುತ್ತದೆ. ಈ ಮೂಲಕ ವರ್ಷದಲ್ಲೊಂದು ದಿನ ಕಾಫಿ ಕೃಷಿಕರ ಪರಿಶ್ರಮಕ್ಕೆ ಕೃತಜ್ಞತೆ ಸಲ್ಲಿಸಲು ಕಾಫಿ ದಿನಾಚರಣೆ ಕಾರಣವಾಗುತ್ತದೆ ಎಂದು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಹೇಳಿದ್ದಾರೆ.

ಮಡಿಕೇರಿಯ ಉದ್ಯಾನವನ ರಾಜಾಸೀಟ್‌ನಲ್ಲಿ ತಂಗಾಳಿ ನಡುವೇ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಅಂತರರಾಷ್ಟಿçÃಯ ಕಾಫಿ ದಿನಾಚರಣೆ ಆಯೋಜಿಸಲಾಗಿತ್ತು. ಕಲಾವಿದ ಬಿ.ಆರ್. ಸತೀಶ್ ರೂಪಿಸಿದ ಕಾಫಿ ಸಂಬAಧಿತ ಆಕರ್ಷಕ ಚಿತ್ರ ಜನಾಕರ್ಷಣೆಗೆ ಕಾರಣವಾಯಿತು.

ಅಂತರರಾಷ್ಟಿçÃಯ ಕಾಫಿ ದಿನದ ಅಂಗವಾಗಿ ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ರಾಜಾಸೀಟ್‌ನಲ್ಲಿ ಕಾಫಿ ಜಾಗೃತಿ ಮತ್ತು ಮಾಹಿತಿ ಕಾರ್ಯಕ್ರಮ ಆಯೋಜಿಸಿತ್ತು. ಕಾಫಿ ಸೇವನೆ ಬಗ್ಗೆ ಅರಿವು ಮೂಡಿಸುವ ಸ್ಟಿಕ್ಕರ್‌ಗಳನ್ನು ಜಿಲ್ಲಾಧಿಕಾರಿ ಚಾರುಲತಾ ಸೋಮಲ್, ಉಪ ವಿಭಾಗಾಧಿಕಾರಿ ಈಶ್ವರ ಕುಮಾರ್ ಖಂಡು ಅನಾವರಣಗೊಳಿಸಿದರು.

ಈ ಸಂದರ್ಭ ಮಾತನಾಡಿದ ಜಿಲ್ಲಾಧಿಕಾರಿ ಚಾರುಲತಾ ಸೋಮಲ್, ತಾನು ಕೊಡಗಿಗೆ ಬಂದ ಬಳಿಕವೇ ಕಾಫಿ ಕೃಷಿಯ ಬಗ್ಗೆ ಸಮಗ್ರವಾಗಿ ತಿಳಿಯಲು ಸಾಧ್ಯವಾಯಿತು. ಸ್ವಾದಿಷ್ಟ ಕಾಫಿಯ ಹಿಂದಿರುವ ಬೆಳೆಗಾರರ ಶ್ರಮ ನಿಜಕ್ಕೂ ಶ್ಲಾಘನೀಯ ಎಂದರಲ್ಲದೇ, ಕಾಫಿ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಯೋಜಿಸುವ ಮೂಲಕ ರೋಟರಿ ಮಿಸ್ಟಿ ಹಿಲ್ಸ್ ಅಭಿನಂದನಾರ್ಹ ಕಾರ್ಯ ಮಾಡಿದೆ ಎಂದು ಪ್ರಶಂಶಿಸಿದರು.

ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷೆ ಅನಿತಾ ಪೂವಯ್ಯ ಮಾತನಾಡಿ, ಮಿಸ್ಟಿ ಹಿಲ್ಸ್ ವತಿಯಿಂದ ರಾಜಾಸೀಟ್ ಗೆ ಭೇಟಿ ನೀಡಿದ

(ಮೊದಲ ಪುಟದಿಂದ) ೧೫೦೦ ಕ್ಕೂ ಅಧಿಕ ಸಂದರ್ಶಕರಿಗೆ ಕಾಫಿ ದಿನಾಚರಣೆ ಸಂದರ್ಭ ಉಚಿತವಾಗಿ ಕಾಫಿ ವಿತರಿಸಲಾಗಿದೆ. ಈ ಮೂಲಕ ಕಾಫಿ ಪೇಯವನ್ನು ಪ್ರೋತ್ಸಾಹಿಸಲು ರೋಟರಿ ಕಾರಣವಾಗಿದೆ ಎಂದರು.

ರೋಟರಿಯ ಉಪ ರಾಜ್ಯಪಾಲ ಅನಿಲ್ ಎಚ್.ಟಿ. ಮಾತನಾಡಿ, ವಿದೇಶಗಳಲ್ಲಿ ವಾರ್ಷಿಕ ವ್ಯಕ್ತಿಯೋರ್ವ ೧೫ ಕೆ.ಜಿ. ಕಾಫಿ ಪುಡಿ ಬಳಕೆ ಮಾಡಿದರೆ ಭಾರತದಲ್ಲಿ ಈ ಪ್ರಮಾಣ ಕೇವಲ ೪-೫ ಕೆ.ಜಿ.ಗೆ ಸೀಮಿತವಾಗಿದೆ. ಹೀಗಾಗಿ ಭಾರತೀಯ ಕಾಫಿ ಪುಡಿಗೆ ದೇಶದಲ್ಲಿಯೇ ಆಂತರಿಕವಾಗಿ ಮಾರುಕಟ್ಟೆ ಒದಗಿಸುವ ನಿಟ್ಟಿನಲ್ಲಿ ಕಾಫಿಯನ್ನು ಭಾರತದಲ್ಲಿಯೇ ಉತ್ತೇಜಿಸುವುದು ಅತ್ಯಂತ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಕಾಫಿ ಪೇಯದ ಪ್ರೋತ್ಸಾಹಕ್ಕಾಗಿ ಕಾಫಿ ದಿನಾಚರಣೆ ಅತ್ಯಂತ ಸೂಕ್ತವಾಗಿದೆ ಎಂದು ಹೇಳಿದರು.

ಮಿಸ್ಟಿ ಹಿಲ್ಸ್ ನ ಯೋಜನಾ ನಿರ್ದೇಶಕ ದೇವಣಿರ ತಿಲಕ್ ಮಾತನಾಡಿ, ಕಾಫಿ ದಿನಾಚರಣೆಯ ಸಂದರ್ಭ ಹಾಲು ರಹಿತವಾದ ಕಪ್ಪು ಕಾಫಿ ಮತ್ತು ಕೊಡಗಿನ ಸವಿ ಕಾಫಿಯನ್ನು ನೀಡಲಾಯಿತು. ಗಮನಾರ್ಹ ರೀತಿಯಲ್ಲಿ ಕಪ್ಪು ಕಾಫಿಯ ಸವಿಗೆ ಬಹುತೇಕರು ಮನಸೋತರು. ಹೊರರಾಜ್ಯಗಳಿಂದ ಬಂದಿರುವ ನೂರಾರು ಜನ ಸ್ವಾದಿಷ್ಟವಾದ ಕೊಡಗಿನ ಕಾಫಿಯ ಬಗ್ಗೆ ಮಾಹಿತಿ ಪಡೆದುಕೊಂಡಿದ್ದು ಕಾರ್ಯಕ್ರಮದ ಯಶಸ್ವಿಗೆ ಸಾಕ್ಷಿಯಾಗಿದೆ ಎಂದರು.

ಮಡಿಕೇರಿ ನಗರಸಭೆ ಆಯುಕ್ತ ರಾಮದಾಸ್, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಶಶಿಧರ್, ಹಿರಿಯ ಸಹಾಯಕ ನಿರ್ದೇಶಕ ಪ್ರಮೋದ್, ಕಾಫಿ ಮಂಡಳಿ ಉಪನಿರ್ದೇಶಕ ಶಿವಕುಮಾರ್ ಸ್ವಾಮಿ, ರೋಟರಿ ಮಿಸ್ಟಿ ಹಿಲ್ಸ್ ಕಾರ್ಯದರ್ಶಿ ಪಿ.ಆರ್.ರಾಜೇಶ್, ವಲಯ ಸೇನಾನಿ ಜಗದೀಶ್ ಪ್ರಶಾಂತ್, ಖಚಾಂಜಿ ವಿನೋದ್ ಎ.ಕೆ., ವಲಯ ೬ ರ ಸಾಮಾಜಿಕ ಜಾಲ ತಾಣ ವಿಭಾಗದ ಅಧ್ಯಕ್ಷ ಮೋಹನ್ ಪ್ರಭು, ಮುಂದಿನ ಸಾಲಿನ ಅಧ್ಯಕ್ಷ ಪ್ರಸಾದ್ ಗೌಡ, ಸ್ಥಾಪಕಾಧ್ಯಕ್ಷ ಬಿ.ಜಿ.ಅನಂತಶಯನ, ಜಿಲ್ಲಾ ನಿರ್ದೇಶಕ ಬಿ.ಕೆ.ರವೀಂದ್ರ ರೈ, ಮಧುಸೂದನ್, ರತ್ನಾಕರ್ ರೈ, ಸತೀಶ್ ಸೋಮಣ್ಣ , ಕ್ಯಾರಿಕಾರ್ಯಪ್ಪ ಸೇರಿದಂತೆ ರೋಟರಿ ಮಿಸ್ಟಿ ಹಿಲ್ಸ್ ನ ನಿರ್ದೇಶಕರು, ಸದಸ್ಯರು ಪಾಲ್ಗೊಂಡಿದ್ದರು.

ರಾಜಾಸೀಟ್‌ಗೆ ಬಂದ ಪ್ರವಾಸಿಗರು, ಸಾರ್ವಜನಿಕರು ಮಿಸ್ಟಿ ಹಿಲ್ಸ್ನಿಂದ ವಿತರಿಸಲಾದ ಸ್ವಾದಿಷ್ಟ ಬಿಸಿ ಕಾಫಿಯನ್ನು ಸವಿದರು.