*ಗೋಣಿಕೊಪ್ಪ: ನಾಲ್ಕನೇ ರಾಷ್ಟಿçÃಯ ಪೋಷಣಾ ಮಾಸದ ಅಂಗವಾಗಿ ಗೋಣಿಕೊಪ್ಪಲು ಅನುದಾನಿತ ಪ್ರೌಢಶಾಲೆಯಲ್ಲಿ ಪೋಷಣ್ ಭರಿತ ಆಹಾರ ಪದಾರ್ಥಗಳ ಪ್ರದರ್ಶನ ಮತ್ತು ಮಾಹಿತಿ ಕಾರ್ಯಕ್ರಮ ನಡೆಯಿತು.

ಶಾಲೆಯ ೪೪ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿವಿಧ ಬಗೆಯ ತರಕಾರಿ, ಮೊಳಕೆ ಕಾಳು, ಸೊಪುö್ಪ, ಹಣ್ಣುಗಳು ಸೇರಿದಂತೆ ವಿಟಮಿನ್, ಪ್ರೊಟಿನ್, ಕ್ಯಾಲ್ಸಿಯಂ ಪದಾರ್ಥಗಳ ಸೇವನೆಯಿಂದ ಮಾನವನ ಆರೋಗ್ಯ ಹೇಗೆ ಕಾಪಾಡಿಕೊಳ್ಳಬಹುದು ಎಂಬ ಮಾಹಿತಿಯನ್ನು ವಿವರಿಸಿದರು.

ಕಾರ್ಯಕ್ರಮವನ್ನು ಶಾಲೆಯ ಮುಖ ಶಿಕ್ಷಕ ರತೀಶ್‌ರೈ ಉದ್ಘಾಟಿಸಿದರು. ವಿಜ್ಞಾನ ಸಂಘದ ಸಂಚಾಲಕ ಡಿ. ಕೃಷ್ಣ ಚೈತನ್ಯ ಸೇರಿದಂತೆ ಶಿಕ್ಷಕ ವೃಂದವರು ಹಾಜರಿದ್ದರು.ನಾಪೋಕ್ಲು: ಚೆರಿಯಪರಂಬು ಸರಕಾರಿ ಶಾಲೆಯಲ್ಲಿ ಶಾಲಾ ಆರಂಭ ದಿನ ಮತ್ತು ಪೋಷಣ್ ಅಭಿಯಾನ ಕಾರ್ಯಕ್ರಮ ನಡೆಯಿತು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಾಯಕ ಯೋಜನಾಧಿಕಾರಿ ಸೀತಾಲಕ್ಷಿö್ಮ ಪೋಷಣ್ ಕಾರ್ಯಕ್ರಮದ ಉದ್ದೇಶ ಮತ್ತು ಪೌಷ್ಠಿಕಾಂಶಯುಕ್ತ ಆಹಾರ ಬಳಸುವದರ ಬಗ್ಗೆ ಮಾಹಿತಿ ನೀಡಿದರು.

ಅಂಗನವಾಡಿ ಕಾರ್ಯಕರ್ತೆ ಆಶಾಲತಾ ಮಾತನಾಡಿ, ಪ್ರತೀ ವರ್ಷ ಸೆಪ್ಟಂಬರ್ ತಿಂಗಳಲ್ಲಿ ಪೋಷಣ್ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ. ‘ಆರೋಗ್ಯ ಜೀವನದತ್ತ ನಮ್ಮ ನಡಿಗೆ’ ಘೋಷವಾಕ್ಯದಂತೆ ನಾವು ದಿನನಿತ್ಯ ಹಸಿರು ತರಕಾರಿಗಳಂತಹ ಪೌಷ್ಠಿಕಾಂಶಯುಕ್ತ ಆಹಾರವನ್ನು ಬಳಸುವಂತೆ ಸಲಹೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಅಬ್ದುಲ್ ಕರೀಂ ಮಾತನಾಡಿ, ಈಗಾಗಲೇ ಶಾಲೆಗಳನ್ನು ಆರಂಭಿಸಲಾಗಿದ್ದು, ಕೋವಿಡ್ ತಡೆಗಟ್ಟುವ ಸಲುವಾಗಿ ಎಲ್ಲಾ ವಿದ್ಯಾರ್ಥಿಗಳು ಮಾಸ್ಕ್ ಅನ್ನು ಖಡ್ಡಾಯವಾಗಿ ಧರಿಸುವದು ಮತ್ತು ಸಾಮಾಜಿಕ ಅಂತರ ಕಾಪಾಡಬೇಕು ಎಂದು ಸೂಚಿಸಿದರು.

ಈ ಸಂದರ್ಭ ಶಾಲಾಭಿವೃದ್ಧಿ ಸಮಿತಿ ಸದಸ್ಯರು, ಪೋಷಕರು, ಶಾಲಾ ಶಿಕ್ಷಕ ವೃಂದ, ಅಂಗನವಾಡಿ ಕಾರ್ಯಕರ್ತೆಯರು, ವಿದ್ಯಾರ್ಥಿಗಳು ಹಾಜರಿದ್ದರು. ಕಾರ್ಯಕ್ರಮದಲ್ಲಿ ಶಿಕ್ಷಕಿ ಕುಸುಮಾ ಸ್ವಾಗತಿಸಿ, ನಿರೂಪಿಸಿದರೆ, ಶಿಕ್ಷಕಿ ಪುಷ್ಪಾ ವಂದಿಸಿದರು.ಚೆಯ್ಯAಡಾಣೆ: ಸ್ಥಳೀಯ ಸ.ಮಾ.ಪ್ರಾ ಶಾಲೆಯಲ್ಲಿ ರಾಷ್ಟಿçÃಯ ಪೋಷಣ್ ಅಭಿಯಾನದ ಅಂಗವಾಗಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಆಶಾ ಕುಮಾರಿ ಪೊಷಕಾಂಶವಿರುವ ಆಹಾರದ ಬಗ್ಗೆ ಶಾಲಾ ಮಕ್ಕಳಿಗೆ ತಿಳುವಳಿಕೆ ನೀಡಿ ಮಾತನಾಡಿದರು.

ಇದೇ ಸಂದರ್ಭ ಕೋವಿಡ್ ಪ್ರಯುಕ್ತ ವರ್ಷಗಳಿಂದ ಮೊಟಕುಗೊಂಡಿದ್ದ ಶೈಕ್ಷಣಿಕ ಕಾರ್ಯ ಚಟುವಟಿಕೆಗಳಿಗೆ ಅಧಿಕೃತವಾಗಿ ಮರುಚಾಲನೆ ನೀಡಲು ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ ಕೂಡ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷೆ ರತ್ನಾ ಅವರು ಅಧ್ಯಕ್ಷತೆಯನ್ನು ವಹಿಸಿದ್ದರು. ಶಾಲಾ ಮುಖ್ಯ ಶಿಕ್ಷಕಿ ಮೀನಾ ಸ್ವಾಗತಿಸಿದರು. ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಆಶಾ ಕುಮಾರಿ, ಸಿಬ್ಬಂದಿಗಳಾದ ದಿನೇಶ್ ಕುಮಾರ್, ಶಾಲಾ ಶಿಕ್ಷಕ ವೃಂದದವರು, ಪೋಷಕರು ಹಾಜರಿದ್ದರು.ಮುಳ್ಳೂರು: ಇಲ್ಲಿನ ಮುಳ್ಳೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಶಾಲೆಯ ಕ್ರೀಯಾಶೀಲ ಶಿಕ್ಷಕ ಸಿ.ಎಸ್. ಸತೀಶ್ ಅವರ ಮಾರ್ಗದರ್ಶನದಂತೆ ವಿನೂತನವಾಗಿ ಪ್ರಾಯೋಗಿಕ ವಾಗಿ ಶಾಲೆಯಲ್ಲಿ ಮಾರುಕಟ್ಟೆ ವಾತಾವರಣವನ್ನು ನಿರ್ಮಿಸಿ ಆಹಾರ ವಸ್ತುಗಳಲ್ಲಿ ಯಾವ ಯಾವ ಪೋಷಕಾಂಶಗಳಿರುತ್ತದೆ.

ಶಕ್ತಿ ನೀಡುವ ಆಹಾರ ವಸ್ತುಗಳು, ಬೆಳವಣಿಗೆÀಗೆ ಸಹಕಾರ ನೀಡುವ ಆಹಾರ ವಸ್ತುಗಳು, ದೇಹಕ್ಕೆ ರಕ್ಷಣೆ ಕೊಡುವ ಆಹಾರ ವಸ್ತುಗಳು ಮತ್ತು ಯಾವ ಯಾವ ಜೀವಸತ್ವಗಳ ಕೊರತೆಯಿಂದ ಯಾವ ರೀತಿಯ ರೋಗಗಳು ಬರುವುದು ಸಮತೋಲನ ಆಹಾರಗಳು ಮುಂತಾದ ಆಹಾರ ವಸ್ತುಗಳ ಮಹತ್ವಗಳನ್ನು ಪ್ರಾಯೋಗಿಕವಾಗಿ ಮಾರುಕಟ್ಟೆ ವಾತಾವರಣದಲ್ಲಿ ಅಭಿನಯಿಸಿ ತೋರಿಸಿರುವುದರ ಮೂಲಕ ಗ್ರಾಮಸ್ಥರ ಮನಮುಟ್ಟುವಂತೆ ಜಾಗೃತಿ ಮೂಡಿಸುವಲ್ಲಿ ವಿದ್ಯಾರ್ಥಿಗಳು ಸಫಲರಾದರು. ಮಕ್ಕಳ ಸಂದೇಶಾತ್ಮಕ ಮಾಹಿತಿ, ಅಭಿನಯ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರವಾಗಿದೆ.