ಕೂಡಿಗೆ, ಅ.೧ : ಕೂಡಿಗೆ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಕೇಂದ್ರ (ಡಯಟ್), ಪೊನ್ನಂಪೇಟೆ ಅರಣ್ಯ ಕಾಲೇಜು ಹಾಗೂ ಕೂಡು ಮಂಗಳೂರು ಸರ್ಕಾರಿ ಪ್ರೌಢಶಾಲೆಯ ಎಸ್.ಡಿ.ಎಂ.ಸಿ., ಇಕೋ ಕ್ಲಬ್ ಹಾಗೂ ಎನ್.ಎಸ್.ಎಸ್. ಘಟಕದ ವತಿಯಿಂದ ವನ್ಯಜೀವಿಗಳ ಸಂರಕ್ಷಣೆಗಾಗಿ ಕೂಡಿಗೆಯಲ್ಲಿ ೬೭ ನೇ ವನ್ಯಜೀವಿ ಸಪ್ತಾಹ: ೨೦೨೧ ರ ಅಂಗವಾಗಿ ಓಟ (ವಾಕಥಾನ್) ಏರ್ಪಡಿಸಲಾಗಿತ್ತು.

ಕೋವಿಡ್ ಮಾರ್ಗಸೂಚಿ ಯನ್ವಯ ಕೊಡಗು ಅರಣ್ಯ ವೃತ್ತದ ಮಡಿಕೇರಿ ವನ್ಯಜೀವಿ ವಿಭಾಗ, ಸಾರ್ವಜನಿಕ ಶಿಕ್ಷಣ ಇಲಾಖೆಯ ರಾಷ್ಟಿçÃಯ ಹಸಿರು ಪಡೆಯ ಇಕೋ ಕ್ಲಬ್, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಕೊಡಗು ಜಿಲ್ಲಾ ಸಮಿತಿ ಹಾಗೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಕೊಡಗು ಪ್ರಾದೇಶಿಕ ಕಚೇರಿಯ ಸಹಯೋಗ ದೊಂದಿಗೆ ಏರ್ಪಡಿಸಿದ್ದ ಜಾಗೃತಿ ಅಭಿಯಾನದಲ್ಲಿ ವನ್ಯಜೀವಿಗಳ ಸಂರಕ್ಷಣೆ ಕುರಿತು ಜನಜಾಗೃತಿ ಮೂಡಿಸಲಾಯಿತು.

ವನ್ಯಜೀವಿ ಸಪ್ತಾಹದ ಅಗತ್ಯದ ಬಗ್ಗೆ ವಿವರಿಸಿದ ಜಿಲ್ಲಾ ಪರಿಸರ ಜಾಗೃತಿ ಆಂದೋಲನದ ಜಿಲ್ಲಾ ಸಂಯೋಜಕರೂ ಆದ ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಟಿ.ಜಿ.ಪ್ರೇಮಕುಮಾರ್, ಪರಿಸರ ಸಮತೋಲನ, ಜೀವ ಸಂಕುಲದ ಭವಿಷ್ಯಕ್ಕಾಗಿ ವನ್ಯಜೀವಿಗಳನ್ನು ರಕ್ಷಣೆ ಮಾಡುವ ಅಗತ್ಯವನ್ನು ಪ್ರತಿಪಾದಿಸಿದರು.

ವನ್ಯಜೀವಿಗಳ ರಕ್ಷಣೆ, ಕಾಳಜಿ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ವನ್ಯಜೀವಿ ಸಪ್ತಾಹವನ್ನು ಆಯೋಜಿಸ ಲಾಗುತ್ತಿದೆ.

ಪ್ರತಿಯೊಬ್ಬರೂ ನೈಸರ್ಗಿಕ ಪರಿಸರಕ್ಕೆ ಯಾವುದೇ ಧಕ್ಕೆ ಮಾಡದೆ ಅರಣ್ಯ ಮತ್ತು ವನ್ಯಜೀವಿಗಳ ಸಂರಕ್ಷಣೆಯಲ್ಲಿ ತೊಡಗಬೇಕು ಎಂದು ಕೋರಿದರು.

ಕೊಡಗಿನಲ್ಲಿ ಈ ಬಾರಿ ವನ್ಯಜೀವಿ ಸಪ್ತಾಹದ ಬಗ್ಗೆ ಜನಜಾಗೃತಿ ಮೂಡಿಸುವ ದಿಸೆಯಲ್ಲಿ ಶಾಲಾ ಮಕ್ಕಳಿಂದ ಅಂಚೆ ಕಾರ್ಡ್ನಲ್ಲಿ ವನ್ಯಜೀವಿಗಳ ಸಂದೇಶದೊAದಿಗೆ ವನ್ಯಜೀವಿಗಳ ಚಿತ್ರ ಬರೆಯುವ ಆಂದೋಲನ ಏರ್ಪಡಿಸಲಾಗಿದೆ ಎಂದು ತಿಳಿಸಿದರು.

ಓಟಕ್ಕೆ ಹಸಿರು ನಿಶಾನೆ ನೀಡಿದ ಕೂಡುಮಂಗಳೂರು ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಇಂದಿರಾ ರಮೇಶ್, ಪ್ರತಿಯೊಬ್ಬರೂ ಅರಣ್ಯ ಮತ್ತು ವನ್ಯಜೀವಿಗಳ ಸಂರಕ್ಷಣೆಗೆ ಕಂಕಣಬದ್ಧರಾಗಬೇಕು;

ಇAತಹ ಜನಜಾಗೃತಿ ಅಭಿಯಾನವು ಜನರಲ್ಲಿ ಪರಿಸರ ಜಾಗೃತಿ ಮೂಡಿಸಲು ಸಹಕಾರಿ ಯಾಗಿದೆ ಎಂದರು.

ಕೂಡಿಗೆ ಡಯಟ್ ಸಂಸ್ಥೆಯ ಉಪನ್ಯಾಸಕ ನೀಲಕಂಠಪ್ಪ, ಅರಣ್ಯ ಮತ್ತು ವನ್ಯಜೀವಿಗಳು ಪರಿಸರ ಸಮತೋಲನ ಕಾಪಾಡಲು ಪೂರಕವಾಗಿವೆ ಎಂದರು

ಅಭಿಯಾನದಲ್ಲಿ ರಾಜ್ಯ ವಿಜ್ಞಾನ ಪರಿಷತ್ತಿನ ಜಿಲ್ಲಾ ಸಮಿತಿ ಉಪಾಧ್ಯಕ್ಷ ಎಂ.ಎನ್.ವೆAಕಟನಾಯಕ್, ಸದಸ್ಯರಾದ ಎಂ.ರAಗಸ್ವಾಮಿ, ಚಂದ್ರು ಮೂಡ್ಲಿಗೌಡ, ಎನ್ನೆಸ್ಸೆಸ್ ಕಾರ್ಯಕ್ರಮ ಅಧಿಕಾರಿ ಡಿ.ರಮೇಶ್, ಶಿಕ್ಷಕರಾದ ಡಿ.ವಿ.ಗಣೇಶ್, ನಾಗೇಂದ್ರ, ಅರಣ್ಯ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿ ನಾಯಕ ಶೋಭಿತ್ ಮೂರ್ತಿ, ಕಾಲೇಜಿನ ಪ್ರಾಯೋಗಿಕ ತರಬೇತಿಯ ವಿದ್ಯಾರ್ಥಿಗಳು, ಶಾಲೆಯ ಮಕ್ಕಳು ಹಾಗೂ ಸ್ಥಳೀಯರು ಪಾಲ್ಗೊಂಡಿದ್ದರು.

ಕೂಡಿಗೆ ವೃತ್ತದಿಂದ ಆರಂಭವಾದ ನಡಿಗೆಯು ಹಾರಂಗಿ ನದಿಯ ಸೇತುವೆ ಮೂಲಕ ತೆರಳಿ ಡಯಟ್ ಮೈದಾನದಲ್ಲಿ ಸಮಾಪನಗೊಂಡಿತು.

ಜಾಥಾದಲ್ಲಿ ವನ್ಯಜೀವಿಗಳ ಸಂರಕ್ಷಣೆ ಕುರಿತಂತೆ ಅರಣ್ಯ ರಕ್ಷಿಸಿ: ವನ್ಯಜೀವಿಗಳ ಸಂರಕ್ಷಿಸಿ, ವನ್ಯಜೀವಿಗಳ ಸುಸ್ಥಿತಿ ದೇಶದ ಪ್ರಗತಿ ಎಂಬಿತ್ಯಾದಿ ಘೋಷಣೆಗಳ ಫಲಕಗಳನ್ನು ಹಿಡಿದು ಜನಜಾಗೃತಿ ಮೂಡಿಸಿದರು.