ಕುಶಾಲನಗರ, ಅ ೧: ಕುಶಾಲನಗರ ಪಟ್ಟಣ ವ್ಯಾಪ್ತಿಯಲ್ಲಿ ಬಿಜೆಪಿ ಬೂತ್ ಅಧ್ಯಕ್ಷರ ಮನೆಗಳಿಗೆ ಕ್ಷೇತ್ರದ ಶಾಸಕ ಅಪ್ಪಚ್ಚುರಂಜನ್ ಭೇಟಿ ನೀಡಿ ಮನೆಗಳಿಗೆ ನಾಮಫಲಕ ಅಳವಡಿಸಲು ಬಂದ ಸಂದರ್ಭ ಸ್ಥಳೀಯ ಬಿಜೆಪಿ ಮುಖಂಡರು ಚಂಡೆ ವಾದ್ಯಗೋಷ್ಠಿ ಮೂಲಕ ಬರಮಾಡಿಕೊಂಡು ಮೆರವಣಿಗೆಯಲ್ಲಿ ಕರೆದೊಯ್ದರು. ಬೂತ್ ಅಧ್ಯಕ್ಷರುಗಳ ಕುಟುಂಬದವರು ಶಾಸಕರಿಗೆ ಆರತಿ ಬೆಳಗಿ ಬರಮಾಡಿಕೊಂಡು ಸಿಹಿ ವಿತರಣೆ ಮಾಡಿದರು.

ಈ ಸಂದರ್ಭ ಕುಶಾಲನಗರ ಪ.ಪಂ. ಅಧ್ಯಕ್ಷ ಜೈವರ್ಧನ್, ಕುಡಾ ಅಧ್ಯಕ್ಷ ಎಂ.ಎA. ಚರಣ್, ನಗರ ಪ್ರಮುಖ ಉಮಾಶಂಕರ್, ಸಹ ಪ್ರಮುಖ ಶಿವಾಜಿರಾವ್, ಮಂಡಲ ಅಧ್ಯಕ್ಷ ಮನುಕುಮಾರ್ ರೈ, ಪ್ರಧಾನ ಕಾರ್ಯದರ್ಶಿ ಎಂ.ಡಿ.ಕೃಷ್ಣಪ್ಪ, ತಾಲೂಕು ವಕ್ತಾರ ಕೆ.ಜಿ.ಮನು, ಜಿಪಂ ಮಾಜಿ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಮಾಜಿ ಸದಸ್ಯೆ ಮಂಜುಳಾ, ವಿವಿಧ ಪಂಚಾಯ್ತಿಗಳ ಅಧ್ಯಕ್ಷರಾದ ಚೆಲುವರಾಜು, ಇಂದಿರಾ ರಮೇಶ್, ಜನಪ್ರತಿನಿಧಿಗಳಾದ ಜಯಮ್ಮ, ಪ್ರಮುಖರಾದ ವೈಶಾಖ್, ಪುಂಡರೀಕಾಕ್ಷ, ವೇದಾವತಿ ಮತ್ತಿತರರು ಇದ್ದರು.