ಗುಡ್ಡೆಹೊಸೂರು, ಸೆ. ೩೦: ಇಲ್ಲಿನ ಸ್ಮಶಾನಕ್ಕೆ ತೆರಳುವ ದಾರಿಯ ಬಗ್ಗೆ ಅಲ್ಲಿನ ನಿವಾಸಿಯೊಬ್ಬರು ಮತ್ತು ಸಾರ್ವಜನಿಕರ ನಡುವೆ ವಿವಾದ ನಡೆಯುತ್ತಿತ್ತು. ಹಲವು ಬಾರಿ ಈ ವಿಚಾರವಾಗಿ ಸ್ಥಳೀಯರು ಮತ್ತು ಗ್ರಾಮ ಪಂಚಾಯಿತಿಯವರ ನಡುವೆ ಜಾಗದ ಮಾಲೀಕರ ನಡುವೆ ತಕರಾರು ನಡೆಯುತ್ತಿತ್ತು. ಅನೇಕ ವರ್ಷಗಳಿಂದ ಸ್ಥಳೀಯರು ಈ ದಾರಿಯ ಮೂಲಕ ಸಾಗಿ ನದಿಯ ಒಂದು ಭಾಗದಲ್ಲಿ ಮೃತದೇಹವನ್ನು ಅಂತ್ಯಸAಸ್ಕಾರ ನಡೆಸುತ್ತಿದ್ದರು. ೩ ವರ್ಷದಿಂದ ಸ್ಥಳೀಯರಿಗೆ ಇಲ್ಲಿನ ದಾರಿಯ ಸಮಸ್ಯೆ ಮಾರಕವಾಗಿತ್ತು. ೧೯೯೮ರಲ್ಲಿ ಸ್ಮಶಾನಕ್ಕೆ ತೆರಳುವ ಜಾಗಕ್ಕೆ ಗ್ರಾ.ಪಂ. ವತಿಯಿಂದ ಮೆಟ್‌ಲಿಂಗ್ ಮಾಡಿ ರಸ್ತೆ ನಿರ್ಮಿಸಲಾಗಿತ್ತು.

ಆದರೆ ದಾರಿಯ ಬಗ್ಗೆ ತಕರಾರು ಇದ್ದ ಕಾರಣ ಕಂದಾಯ ಇಲಾಖೆ, ಪೊಲೀಸ್ ಇಲಾಖೆ, ಗುಡ್ಡೆ ಹೊಸೂರು ಗ್ರಾ.ಪಂ. ಅವರ ಸಮುಖದಲ್ಲಿ ಸರ್ವೆ ಕಾರ್ಯ ನಡೆಸಿ ಬೇಲಿಯನ್ನು ತೆರವುಗೊಳಿಸಿ ದಾರಿ ನಿರ್ಮಿಸಲಾಯಿತು. ಅಲ್ಲದೆ ಎರಡು ಬದಿಯಲ್ಲಿ ಬೇಲಿ ನಿರ್ಮಿಸಲಾಯಿತು.

ಈ ಕಾರ್ಯಕ್ಕೆ ಗ್ರಾಮದ ೨೦ಕ್ಕೂ ಹೆಚ್ಚು ಯುವಕರು ಭಾಗವಹಿಸಿದ್ದರು. ಸಿಮೆಂಟ್ ಕಂಬ ನೆಟ್ಟು ತಂತಿ ಬೇಲಿ ನಿರ್ಮಿಸಲಾಯಿತು. ಈ ಸಂದರ್ಭ ನಿರ್ಮಿಸಲಾಯಿತು. ಅಲ್ಲದೆ ಎರಡು ಬದಿಯಲ್ಲಿ ಬೇಲಿ ನಿರ್ಮಿಸಲಾಯಿತು.

ಈ ಕಾರ್ಯಕ್ಕೆ ಗ್ರಾಮದ ೨೦ಕ್ಕೂ ಹೆಚ್ಚು ಯುವಕರು ಭಾಗವಹಿಸಿದ್ದರು. ಸಿಮೆಂಟ್ ಕಂಬ ನೆಟ್ಟು ತಂತಿ ಬೇಲಿ ನಿರ್ಮಿಸಲಾಯಿತು. ಈ ಸಂದರ್ಭ ಲೆಕ್ಕಾಧಿಕಾರಿ ಗೌತಮ್, ಉಪ ತಹಶೀಲ್ದಾರ್ ಮಧುಸೂದನ್, ಕಂದಾಯ ನೀರಿಕ್ಷಕ ಸಂತೋಷ್ ಮತ್ತು ಸರ್ವೆ ಅಧಿಕಾರಿ ರವಿ ಮುಂತಾದವರು ಹಾಜರಿದ್ದರು. ಸುಮಾರು ೧೩ ಅಡಿಯ ದಾರಿಗೆ ಈ ಸಂದರ್ಭ ಸರ್ವೆ ಮಾಡಿ ತಕ್ಷಣವೇ ಬೇಲಿ ನಿರ್ಮಿಸಲಾಯಿತು. ಗ್ರಾ.ಪಂ. ಸರ್ವ ಸದಸ್ಯರು ಮತ್ತು ಗ್ರಾಮದ ಹಿರಿಯರು ಮತ್ತು ಯುವಕರು ಶ್ರಮದಾನದ ಮೂಲಕ ಕೆಲಸ ನಿರ್ವಹಿಸಿದರು.

- ಗಣೇಶ್ ಕುಡೆಕ್ಕಲ್