ವೀರಾಜಪೇಟೆ, ಸೆ. ೩೦: ಮನೆಯ ಮಗಳ ಮದುವೆಯನ್ನು ಅದ್ಧೂರಿಯಿಂದ ಮಾಡಬೇಕು ಎನ್ನುವ ಕನಸು ಎಲ್ಲಾ ಪೋಷಕರುಗಳಿಗೆ ಇರುತ್ತದೆ. ಅದರೆ ಕೋವಿಡ್ ಹಿನ್ನೆಲೆಯಲ್ಲಿ ರಾಜ್ಯದ ಗಡಿಭಾಗದಲ್ಲಿ ತನ್ನ ಮಗಳ ಕೈ ಹಿಡಿದು ವರನಿಗೆ ಒಪ್ಪಿಸಿದ ಘಟನೆ ರಾಜ್ಯದ ಗಡಿಭಾಗÀ ಮಾಕುಟ್ಟದಲ್ಲಿ ನಡೆದಿದೆ.

ವೀರಾಜಪೇಟೆ ತಾಲೂಕು ಪಾಲಿಬೆಟ್ಟ ನಿವಾಸಿ ರಾಸೀಕ್ ಮತ್ತು ನಸೀಮಾ ದಂಪತಿಗಳ ಪುತ್ರಿ ಮಿಶ್ರೀಯ ಹಾಗೂ ಕೇರಳ ರಾಜ್ಯದ ಮಟ್ಟನೂರು ನೇರೋಳಿ ಗ್ರಾಮದ ನಿವಾಸಿ ಮೊಹಮ್ಮದ್ ಮತ್ತು ಫಾಮೀನಾ ದಂಪತಿಗಳ ಪುತ್ರ ರಷಾದ್ ಎಂಬವರ ನಡುವೆ ಮದುವೆ ನಿಶ್ಚಯವಾಗಿತ್ತು. ಇಂದು ಪಾಲಿಬೆಟ್ಟ ಅನುಗ್ರಹ ಸಭಾಂಗಣದಲ್ಲಿ ವಿವಾಹ ನಡೆಯಬೇಕಾಗಿತ್ತು. ನಿನ್ನೆ ವಧು ಮತ್ತು ವರನ ಮನೆಗಳಲ್ಲಿ ಮದುವೆ ಸಮಾರಂಭಗಳು ನಡೆದಿದ್ದವು. ಇಂದು ವರನು ತಮ್ಮ ಸಂಬAಧಿಗಳೊAದಿಗೆ ವಧುವಿನ ಮನೆಗೆ ಆಗಮಿಸಿ ಕುಟುಂಬ ಸದಸ್ಯರ ಮತ್ತು ಗುರುಹಿರಿಯರ, ಗ್ರಾಮಸ್ಥರ ಸಮ್ಮುಖದಲ್ಲಿ ಮದುವೆ ಸಮಾರಂಭ ನಡೆಯಬೇಕಿತ್ತು. ಆದರೆ ವಿಧಿಯ ಆಟವನ್ನು ಬಲ್ಲವರಾರು.....?

ಕೇರಳ ರಾಜ್ಯದಲ್ಲಿ ಮಹಾಮಾರಿ ಕೊರೊನಾದ ಅಟ್ಟಹಾಸದಿಂದ ಸಾಂಕ್ರಾಮಿಕ ರೋಗಗಳ ನಿಯಂತ್ರಣ ಮಾಡುವಲ್ಲಿ ಕರ್ನಾಟಕ ರಾಜ್ಯ ಸರ್ಕಾರವು ಕಟ್ಟುನಿಟ್ಟಿನ ಕ್ರಮಗಳನ್ನು ಜರುಗಿಸಿರುವ ಆದೇಶದ ಬೆನ್ನಲ್ಲೇ ಕೇರಳ ರಾಜ್ಯದಿಂದ ರಾಜ್ಯಕ್ಕೆ ಗಡಿಯನ್ನು ದಾಟಿ ಬರುವ ಪ್ರತಿಯೊಬ್ಬರಿಗೆ ಆರ್.ಟಿ.ಪಿ.ಸಿ.ಆರ್. ವರದಿ ಕಡ್ಡಾಯಗೊಳಿಸಿದೆ. ಹಿನ್ನೆಲೆಯಲ್ಲಿ ವರನೊಂದಿಗೆ ಆಗಮಿಸಬೇಕಿದ್ದ ಸಂಬAಧಿಕರುಗಳಿಗೆ ಆರ್.ಟಿ.ಪಿ.ಸಿ.ಆರ್. ವರದಿ ದೊರಕಿರುವುದಿಲ್ಲ. ನಿಶ್ಚಯ ಮಾಡಿದ ದಿನಾಂಕದಲ್ಲೇ ಮದುವೆ ನಡೆಯಬೇಕು ಎಂಬುದು ಉಬಯ ಕಡೆಯವರದ್ದಾಗಿತ್ತು. ಕೇರಳ ರಾಜ್ಯದಿಂದ ಗಡಿ ಭಾಗಕ್ಕೆ ಆಗಮಿಸಿದ ವರ ಮತ್ತು ಸಂಬAಧಿಕರು ಮಾಕುಟ್ಟ ಗಡಿಭಾಗದ ಕೋವಿಡ್ ಕೇಂದ್ರಕ್ಕೆ ಭೇಟಿ ನೀಡಿ ವಿಷಯ ತಿಳಿಸಿದ್ದಾರೆ. ರಾಜ್ಯ ಸರ್ಕಾರದ ಆದೇಶವನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಿದ ಅಧಿüಕಾರಿಗಳು ವರದಿಯನ್ನು ಕೇಳಿದ್ದಾರೆ. ವರದಿ ಇಲ್ಲದಾಗಿದೆ. ವರನ ಪೋಷಕರು ವಧುವಿನ ಪೋಷಕರಿಗೆ ವಿಷಯ ತಿಳಿಸಿದ್ದಾರೆ. ತಕ್ಷಣವೇ ಪೋಷಕರು ವಧು ಮತ್ತು ಸಂಬAಧಿಕರೊAದಿಗೆ ಗಡಿಭಾಗವಾದ ಮಾಕುಟ್ಟಕ್ಕೆ ಆಗಮಿಸಿದ್ದಾರೆ. ಸರಳತೆಯೊಂದಿಗೆ ಗಡಿಭಾಗದ ಕೇಂದ್ರದ ಚೆಕ್‌ಪೋಸ್ಟ್ ದಾಟಿ ವಧುವಿನ ಕೈಯನ್ನು ಹಿಡಿದು ವರನಿಗೆ ಒಪ್ಪಿಸಿ ಸರಳ ಮದುವೆಗೆ ಮುನ್ನುಡಿ ಬರೆದಿದ್ದಾರೆ.

- ಕಿಶೋರ್ ಕುಮಾರ್ ಶೆಟ್ಟಿ