ಮಡಿಕೇರಿ, ಸೆ. ೩೦: ಕೊಡಗು ಬೆಳೆಗಾರರ ಸಂಘದ ೧೪೨ನೇ ವಾರ್ಷಿಕ ಮಹಾಸಭೆ ತಾ. ೨ ರಂದು (ನಾಳೆ) ಮಡಿಕೇರಿ ಹೊರವಲಯದ ಕ್ಯಾಪಿಟಲ್ ವಿಲೇಜ್ ರೆಸಾರ್ಟ್ನಲ್ಲಿ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ರಾಜ್ಯ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ಜವೈದ್ ಅಕ್ತರ್ ಪಾಲ್ಗೊಳ್ಳಲಿದ್ದಾರೆ. ಯುಪಿಎಎಸ್‌ಐನ ಅಧ್ಯಕ್ಷ ಚೆರಿಯನ್ ಎಂ.ಪಿ. ಹಾಗೂ ಕೆಪಿಎ ಅಧ್ಯಕ್ಷ ಎಸ್. ಅಪ್ಪದುರೈ ಅವರುಗಳು ಕೂಡ ಭಾಗವಹಿಸಲಿದ್ದಾರೆ. ಬೆಳಿಗ್ಗೆ ೧೦ ಗಂಟೆಗೆ ಸಭೆ ಪ್ರಾರಂಭವಾಗಲಿದೆ.