ದೇಶಾದ್ಯಂತ ಮತ್ತೆ ತೈಲೋತ್ಪನ್ನಗಳ ದರ ಏರಿಕೆ
ಮುಂಬೈ, ಅ. ೧: ದೇಶಾದ್ಯಂತ ಮತ್ತೆ ತೈಲೋತ್ಪನ್ನಗಳ ದರ ಏರಿಕೆಯಾಗಿದ್ದು, ಶುಕ್ರವಾರ ಪೆಟ್ರೋಲಿಯಂ ಉತ್ಪನ್ನಗಳು ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ತಲುಪಿವೆ. ದೇಶದಲ್ಲಿ ಶುಕ್ರವಾರ ಪೆಟ್ರೋಲ್, ಡೀಸೆಲ್ ಬೆಲೆ ಪ್ರತಿ ಲೀಟರ್ ಮೇಲೆ ಸರಾಸರಿ ೨೫ ರಿಂದ ೩೦ ಪೈಸೆ ಹೆಚ್ಚಳವಾಗಿ ಜನರ ಜೇಬು ಸುಡುತ್ತಿದೆ. ಕಳೆದ ಸೆ. ೫ ರಂದು ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಸರಾಸರಿ ೧೫ ರಿಂದ ೧೯ ಪೈಸೆಯಷ್ಟು ಇಳಿಕೆಯಾಗಿತ್ತು. ಸರ್ಕಾರಿ ತೈಲ ಕಂಪೆನಿಗಳು ಇಂದು (ಅಕ್ಟೋಬರ್ ೧, ಶುಕ್ರವಾರ) ಪೆಟ್ರೋಲ್, ಡೀಸೆಲ್ ಬೆಲೆಯನ್ನು ಏರಿಕೆ ಮಾಡಿದ್ದು, ಇಂದು ಲೀಟರ್ ಪೆಟ್ರೋಲ್ ದರ ೨೨ ರಿಂದ ೩೦ ಪೈಸೆ ಹೆಚ್ಚಳವಾಗಿದ್ದರೆ, ಪ್ರತೀ ಲೀಟರ್ ಡೀಸೆಲ್ ದರ ೨೯ ರಿಂದ ೩೨ ಪೈಸೆ ಹೆಚ್ಚಳವಾಗಿದೆ. ರಾಷ್ಟç ರಾಜಧಾನಿ ದೆಹಲಿಯಲ್ಲಿ ಲೀಟರ್ ಪೆಟ್ರೋಲ್ ದರ ೧೦೧.೮೯ ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ ೯೦.೧೭ ರೂಪಾಯಿ ಇದೆ. ಮುಂಬೈನಲ್ಲಿ ಲೀಟರ್ ಪೆಟ್ರೋಲ್ ದರ ೧೦೭.೯೫ ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ ೯೭.೮೪ ರೂಪಾಯಿ ಆಗಿದೆ. ಅದೇ ರೀತಿ ಕೋಲ್ಕತ್ತಾದಲ್ಲಿ ಲೀಟರ್ ಪೆಟ್ರೋಲ್ ದರ ೧೦೨.೪೭ ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ ೯೩.೨೭ ರೂಪಾಯಿಗೆ ಏರಿಕೆಯಾಗಿದೆ. ಚೆನ್ನೆöÊನಲ್ಲಿ ಲೀಟರ್ ಪೆಟ್ರೋಲ್ ದರ ೯೯.೫೮ ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ ೯೪.೭೪ ರೂಪಾಯಿಗೆ ಏರಿಕೆ ಆಗಿದೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್ ದರ ೧೦೫.೪೪ ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ ೯೫.೭೦ ರೂಪಾಯಿಗೆ ಏರಿಕೆ ಆಗಿದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗೆ ಅಬಕಾರಿ ಸುಂಕಗಳನ್ನು ಸೇರಿಸಿದ ನಂತರ, ಅದರ ಬೆಲೆ ದ್ವಿಗುಣಗೊಳ್ಳುತ್ತದೆ. ಈ ಮಾನದಂಡಗಳ ಆಧಾರದ ಮೇಲೆ, ತೈಲ ಕಂಪನಿಗಳು ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುತ್ತವೆ. ಪ್ರತಿನಿತ್ಯ ಹೊಸ ದರಗಳು ಬೆಳಿಗ್ಗೆ ೬ ಗಂಟೆಗೆ ನಿಗದಿಯಾಗುತ್ತವೆ. ಭಾರತ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ (ಬಿಪಿಸಿಎಲ್), ಇಂಡಿಯನ್ ಆಯಿಲ್ ಕಾರ್ಪೊರೇಶನ್ ಲಿಮಿಟೆಡ್ (ಐಒಸಿಎಲ್) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ (ಹೆಚ್‌ಪಿಸಿಎಲ್) ಇಂಧನ ಬೆಲೆಗಳನ್ನು ಪ್ರತಿದಿನ ಅಂರ‍್ರಾಷ್ಟಿçÃಯ ಮಾನದಂಡಗಳು ಮತ್ತು ವಿದೇಶಿ ವಿನಿಮಯ ದರಗಳೊಂದಿಗೆ ಪರಿಷ್ಕರಿಸುತ್ತವೆ.
ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆ ರೂ. ೪೩ ಹೆಚ್ಚಳ
ನವದೆಹಲಿ, ಅ. ೧: ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಪೆಟ್ರೋಲಿಯಂ ಕಂಪೆನಿಗಳು ೪೩ ರೂಪಾಯಿ ೫೦ ಪೈಸೆ ಹೆಚ್ಚಿಸಿವೆ. ಹೊಸ ದರ ಇಂದು ಅಕ್ಟೋಬರ್ ೧ ರಂದು ಜಾರಿಗೆ ಬರಲಿದೆ. ದೇಶಿ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ವ್ಯತ್ಯಾಸವಾಗಿಲ್ಲ. ಇಂದು ೧೯ ಕೆ.ಜಿ. ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ ರಾಷ್ಟç ರಾಜಧಾನಿ ದೆಹಲಿಯಲ್ಲಿ ಸಾವಿರದ ೭೩೬ ರೂಪಾಯಿ ೫೦ ಪೈಸೆಯಿದೆ. ಈ ಹಿಂದೆ ದೆಹಲಿಯಲ್ಲಿ ೧೯ ಕೆ.ಜಿ. ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ ಸಾವಿರದ ೬೯೩ ರೂಪಾಯಿಗಳಿದ್ದವು. ಕಳೆದ ತಿಂಗಳು ಸೆಪ್ಟೆಂಬರ್ ೧ ರಂದು ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ ೭೫ ರೂಪಾಯಿ ಹೆಚ್ಚಳವಾಗಿತ್ತು.
ಭಾರತಕ್ಕೆ ಆಗಮಿಸುವ ಬ್ರಿಟನ್ ಪ್ರಜೆಗಳಿಗೆ ೧೦ ದಿನಗಳ ಕ್ವಾರಂಟೈನ್
ನವದೆಹಲಿ, ಅ. ೧: ಬ್ರಿಟನ್ ಸರ್ಕಾರದ ನಿರ್ಧಾರಕ್ಕೆ ಪ್ರತಿಯಾಗಿ ಭಾರತವೂ ಇಲ್ಲಿಗೆ ಆಗಮಿಸುವ ಬ್ರಿಟನ್ ಪ್ರಜೆಗಳ ವಿಷಯವಾಗಿ ಕಠಿಣ ನಿರ್ಧಾರ ಕೈಗೊಂಡಿದೆ. ತಾ. ೪ ರಿಂದ ಭಾರತಕ್ಕೆ ಆಗಮಿಸುವ ಎಲ್ಲಾ ಬ್ರಿಟನ್ ಪ್ರಜೆಗಳಿಗೆ ಆರ್‌ಟಿಪಿಸಿಆರ್ ಪರೀಕ್ಷೆ ಹಾಗೂ ೧೦ ದಿನಗಳ ಕಡ್ಡಾಯ ಕ್ವಾರಂಟೈನ್‌ನ್ನು ಭಾರತ ಸರ್ಕಾರ ವಿಧಿಸಿದೆ. ಹೊಸ ನಿಯಮಗಳ ಅಡಿಯಲ್ಲಿ ಎಲ್ಲಾ ಪ್ರಜೆಗಳು ಬ್ರಿಟನ್ ಭಾರತಕ್ಕೆ ಆಗಮಿಸುತ್ತಿದ್ದಂತೆಯೇ ಅವರ ಲಸಿಕೆಯ ಸ್ಥಿತಿ ಏನೇ ಇರಲಿ, ಕೋವಿಡ್-೧೯ ಆರ್‌ಟಿಪಿಸಿಆರ್ ಪರೀಕ್ಷೆಯನ್ನು ಹೊರಡುವುದಕ್ಕೂ ಮುನ್ನವೇ ಮಾಡಿಸಿಕೊಂಡಿರಬೇಕಾಗುತ್ತದೆ. ಪ್ರಯಾಣಿಕರ ಲಸಿಕೆಯ ಸ್ಥಿತಿ ಏನೇ ಇರಲಿ ಪರೀಕ್ಷೆಯನ್ನು ನಡೆಸಲಾಗುತ್ತದೆ. ಬಂದ ನಂತರ ೮ ದಿನಗಳಾದ ಮೇಲೂ ಪರೀಕ್ಷೆಯನ್ನು ಕೈಗೊಳ್ಳಬೇಕಾಗುತ್ತದೆ. ಮನೆಯಲ್ಲಿ ಅಥವಾ ಆಗಮಿಸಿದ ವಿಳಾಸದಲ್ಲಿ ೧೦ ದಿನಗಳ ಕ್ವಾರಂಟೈನ್‌ನ್ನೂ ತಾ. ೪ ರಿಂದ ಕಡ್ಡಾಯಗೊಳಿಸಲಾಗಿದೆ. ಕೋವಿಡ್-೧೯ ಲಸಿಕೆ ಪ್ರಮಾಣಪತ್ರಕ್ಕೆ ಸಂಬAಧಿಸಿದAತೆ ಭಾರತದ ಆತಂಕಗಳನ್ನು ಬ್ರಿಟನ್ ನಿವಾರಿಸದೇ ಇದ್ದಲ್ಲಿ ಬ್ರಿಟನ್ ಸರ್ಕಾರದ ನಿರ್ಧಾರಗಳಿಗೆ ಪ್ರತಿಯಾಗಿ ಭಾರತವೂ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂದು ಭಾರತ ಸರ್ಕಾರ ಎಚ್ಚರಿಸಿತ್ತು. ಬ್ರಿಟನ್‌ನ ನಡೆಯನ್ನು ಭಾರತದ ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶ್ರಿಂಗ್ಲಾ ತಾರತಮ್ಯಕಾರಿ ಎಂದು ಹೇಳಿದ್ದರು. ಬ್ರಿಟನ್ ಸರ್ಕಾರ ಹೊರಡಿಸಿದ್ದ ಆದೇಶದಲ್ಲಿ ಭಾರತೀಯ ಪ್ರಯಾಣಿಕರು ಕೋವಿಶೀಲ್ಡ್ ಲಸಿಕೆಯನ್ನು ಪಡೆದಿದ್ದರೆ ಅದನ್ನು ಲಸಿಕೆ ಪಡೆದಿಲ್ಲ ಎಂದು ಪರಿಗಣಿಸಬೇಕಾಗುತ್ತದೆ ಹಾಗೂ ೧೦ ದಿನಗಳವರೆಗೆ ಸೆಲ್ಫ್ ಐಸೊಲೇಷನ್‌ಗೆ ಒಳಪಡಬೇಕಾಗುತ್ತದೆ ಎಂಬ ನಿಯಮ ಜಾರಿಗೊಳಿಸಿತ್ತು.
ಟಾಟಾ ಗ್ರೂಪ್ ಪಾಲಾದ ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾ
ನವದೆಹಲಿ, ಅ. ೧: ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾ ವಿಮಾನಯಾನ ಸಂಸ್ಥೆಯನ್ನು ಖಾಸಗೀಕರಣಗೊಳಿಸುವ ಕೇಂದ್ರ ಸರ್ಕಾರದ ಹರಸಾಹಸಕ್ಕೆ ಕೊನೆಗೂ ಮುಕ್ತಿ ದೊರೆತಿದ್ದು, ಟಾಟಾ ಸಮೂಹ ಹರಾಜಿನಲ್ಲಿ ಏರ್ ಇಂಡಿಯಾವನ್ನು ಖರೀದಿ ಮಾಡಿದೆ. ಇಂದು ಭಾರತೀಯ ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾ ಸಂಸ್ಥೆಯ ಖರೀದಿ ಸಂಬAಧ ಬಿಡ್ ನಡೆಸಲಾಯಿತು. ಈ ಬಿಡ್‌ನಲ್ಲಿ ವಿವಿಧ ಸಂಸ್ಥೆಗಳು ಪಾಲ್ಗೊಂಡಿದ್ದವು. ಅಂತಿಮವಾಗಿ ಏರ್ ಇಂಡಿಯಾ ಸಂಸ್ಥೆಯನ್ನು ಟಾಟಾ ಸನ್ಸ್ ಸಂಸ್ಥೆ ಖರೀದಿಸುವಲ್ಲಿ ಸಫಲವಾಗಿದೆ ಎಂದು ಬ್ಲೂಮರ್ಗ್ ವರದಿ ಮಾಡಿದೆ. ಏರ್ ಇಂಡಿಯಾ ಈ ಹಿಂದೆ ಟಾಟಾ ಗ್ರೂಪ್‌ನದ್ದೇ ಕಂಪೆನಿಯಾಗಿತ್ತು. ಈ ಕಂಪೆನಿಯನ್ನು ಜೆಆರ್‌ಡಿ ಟಾಟಾ ೧೯೩೨ ರಲ್ಲಿ ಸ್ಥಾಪಿಸಿದ್ದರು. ಸ್ವಾತಂತ್ರ‍್ಯ ನಂತರ, ವಾಯುಯಾನ ವಲಯವನ್ನು ರಾಷ್ಟಿçÃಕರಣಗೊಳಿಸಲಾಯಿತು ಮತ್ತು ಸರ್ಕಾರವು ಟಾಟಾ ಏರ್‌ಲೈನ್ಸ್ ಷೇರುಗಳಲ್ಲಿ ಶೇ. ೪೯ ರಷ್ಟನ್ನು ಖರೀದಿಸಿತು. ನಂತರ ಕಂಪೆನಿಯು ಸಾರ್ವಜನಿಕ ಸೀಮಿತ ಕಂಪೆನಿಯಾಯಿತು ಮತ್ತು ಜುಲೈ ೨೯, ೧೯೪೬ ರಂದು ಏರ್ ಇಂಡಿಯಾ ಎಂದು ಮರುನಾಮಕರಣ ಮಾಡಲಾಯಿತು. ೧೯೫೩ ರಲ್ಲಿ, ಸರ್ಕಾರವು ಏರ್ ಕಾರ್ಪೊರೇಷನ್ ಕಾಯ್ದೆಯನ್ನು ಅಂಗೀಕರಿಸಿತು ಮತ್ತು ಕಂಪೆನಿಯ ಸ್ಥಾಪಕ ಜೆಆರ್‌ಡಿ ಟಾಟಾ ಅವರಿಂದ ಮಾಲೀಕತ್ವದ ಹಕ್ಕುಗಳನ್ನು ಖರೀದಿಸಿತು. ಹೀಗಾಗಿ ಟಾಟಾ ಗ್ರೂಪ್ ೬೮ ವರ್ಷಗಳ ನಂತರ ಮತ್ತೊಮ್ಮೆ ತನ್ನ ಸ್ವಂತ ಕಂಪೆನಿಯನ್ನು ಹಿಂತೆಗೆದುಕೊAಡAತಾಗಿದೆ.