ಸಿದ್ದಾಪುರ, ಅ. ೧: ಸಹಕಾರ ಸಂಘಗಳು ಪ್ರಾಮಾಣಿಕತೆಯಿಂದ ಸೇವೆಗಳನ್ನು ಮಾಡಬೇಕು. ಆ ಮೂಲಕ ಸಹಕಾರ ಸಂಘಗಳನ್ನು ಉಳಿಸಿ ಮುನ್ನಡೆಸಬೇಕೆಂದು ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಕರೆ ನೀಡಿದರು. ಅಭ್ಯತ್‌ಮಂಗಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ವಾಣಿಜ್ಯ ಸಂಕೀರ್ಣವನ್ನು ನೆಲ್ಲಿಹುದಿಕೇರಿಯಲ್ಲಿ ಉದ್ಘಾಟಿಸಿ ಮಾತನಾಡಿದ ಅವರು, ಸಹಕಾರ ಸಂಘವನ್ನು ನಡೆಸುವ ಆಡಳಿತ ಮಂಡಳಿಯು ಪ್ರಾಮಾಣಿಕತೆಯಿಂದ ಸಂಘವನ್ನು ಮುನ್ನಡೆಸಿದಲ್ಲಿ ಅಭಿವೃದ್ಧಿ ಹೊಂದಲು ಸಾಧ್ಯ ಎಂದರು. ಆಡಳಿತ ಮಂಡಳಿ ಹಾಗೂ ಅಧಿಕಾರಿ ವರ್ಗದ ಸಿಬ್ಬಂದಿಗಳು ಒಂದೇ ನಾಣ್ಯದ ಎರಡು ಮುಖಗಳು ಎಂದರು.

ಕೃಷಿಕರಿಗೂ ಕೂಡಾ ಸಹಕಾರ ಸಂಘಗಳ ಮುಖಾಂತರ ಹಲವಾರು ಸೌಲಭ್ಯಗಳು ದೊರೆಯುತ್ತಿವೆ. ಕುಶಾಲನಗರ ಭಾಗದ ಬಸವನಹಳ್ಳಿಯ ಪರಿಶಿಷÀ್ಟ ವರ್ಗದ ಲ್ಯಾಂಪ್ಸ್ ಸೊಸೈಟಿಯಲ್ಲಿ ನಡೆದ ಹಣ ದುರುಪಯೋಗದ ವಿಚಾರವನ್ನು ತಾನು ವಿಧಾನಮಂಡಲ ಅಧಿವೇಶನದಲ್ಲಿ ಪ್ರಸ್ತಾಪಿಸಿದ್ದು, ದುರುಪಯೋಗಪಡಿಸಿದ ವ್ಯಕ್ತಿಯಿಂದ ಹಣ ವಸೂಲಾತಿ ಮಾಡುವಂತೆ ಒತ್ತಾಯಿಸಿರುವುದಾಗಿ ತಿಳಿಸಿದರು. ಇದಲ್ಲದೇ ಸರ್ಕಾರದ ವತಿಯಿಂದ ಸಹಕಾರ ಸಂಘಗಳÀಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳನ್ನು ಬೇರೆ ಸಹಕಾರ ಸಂಘಗಳಿಗೆ ವರ್ಗಾವಣೆ ಮಾಡುವ ವಿಚಾರದಲ್ಲಿ ತಾನು ಆಕ್ಷೇಪಣೆ ವ್ಯಕ್ತಪಡಿಸಿರುವುದಾಗಿ ಮಾಹಿತಿ ನೀಡಿದರು. ಕೊಡಗು ಜಿಲ್ಲಾ ಸಹಕಾರ ಸಂಘದ ಅಧ್ಯಕ್ಷ ಬಾನಂಡ ಬಾಂಡ್ ಗಣಪತಿ ಮಾತನಾಡಿ, ಸಹಕಾರ ಸಂಘಗಳಿಗೆ ೧೧೫ ವರ್ಷಗಳ ಇತಿಹಾಸವಿದ್ದು, ಜಿಲ್ಲೆಯಲ್ಲಿ ಮೊದಲ ಬಾರಿಗೆ ಸೋಮವಾರಪೇಟೆ ತಾಲೂಕಿನ ಶಾಂತಳ್ಳಿ ತಲ್ತಾರ ಶೆಟ್ಟಿ ಗ್ರಾಮದಲ್ಲಿ ಪ್ರಾರಂಭವಾಯಿತು. ಜಿಲ್ಲೆಯಲ್ಲಿ ೨೮೮ ಸಹಕಾರ ಸಂಘಗಳು ಇದ್ದು, ಈ ಪೈಕಿ ೨೪೪ ಸಹಕಾರ ಸಂಘಗಳು ಜಿಲ್ಲಾ ಸಹಕಾರ ಸಂಘದ ಸದಸ್ಯತ್ವವನ್ನು ಪಡೆದುಕೊಂಡು ಕ್ರಿಯಾಶೀಲವಾಗಿ ಕಾರ್ಯನಿರ್ವಹಿ ಸುತ್ತಿವೆ ಎಂದು ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ ೭೩ ಕೃಷಿ ಪತ್ತಿನ ಸಹಕಾರ ಸಂಘಗಳು ಇದ್ದು, ಈ ಪೈಕಿ ೩ ಸಹಕಾರ ಸಂಘಗಳು ನಷ್ಟದಲ್ಲಿದ್ದು, ಉಳಿದ ಸಹಕಾರ ಸಂಘಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ತಿಳಿಸಿದರು.

ಅಭ್ಯತ್‌ಮಂಗಲ ಸೇವಾ ಸಹಕಾರ ಸಂಘದ ಉಪಾಧ್ಯಕ್ಷ ಹೊಸಮನೆ ವಸಂತ ಕುಮಾರ್ ಮಾತನಾಡಿ ೧೯೫೫ ರಲ್ಲಿ ಅಂದಿನ ಕಾಲದ ದಾನಿಗಳಾದ ಕೋಡೀರ ಉತ್ತಪ್ಪನವರು ಸಹಕಾರ ಸಂಘ ನಡೆಸಲು ೨೪ ಸೆಂಟ್ ಜಾಗವನ್ನು ಖರೀದಿಸಿ ಸಂಘವನ್ನು ಪ್ರಾರಂಭಿಸಿದ್ದಾರೆ. ಈ ಜಾಗದಲ್ಲಿ ಕೆಲವರು ಒತ್ತುವರಿ ಮಾಡಿಕೊಂಡು ಕಟ್ಟಡವನ್ನು ನಿರ್ಮಾಣ ಮಾಡಿದ್ದರು. ಇದೀಗ ಸಹಕಾರ ಸಂಘದ ಆಡಳಿತ ಮಂಡಳಿಯು ಈ ಬಗ್ಗೆ ತನಿಖೆ ನಡೆಸಿ ಒತ್ತುವರಿದಾರರಿಂದ ನಿರ್ಮಾಣ ಮಾಡಿಕೊಂಡಿದ್ದ ಕಟ್ಟಡವನ್ನು ಸಂಘವು ಖರೀದಿಸಿಕೊಂಡಿರುತ್ತದೆ ಎಂದು ಮಾಹಿತಿ ನೀಡಿದರು.

ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಅಭ್ಯತ್ಮಂಗಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪಾಲಚಂಡ ಟುಟ್ಟೂ ಅಚ್ಚಯ್ಯ ಮಾತನಾಡಿ, ನೂತನ ಆಡಳಿತ ಮಂಡಳಿ ಅಧಿಕಾರಕ್ಕೆ ಬಂದ ನಂತರ ಸಹಕಾರ ಸಂಘವು ಪ್ರಗತಿಯ ಪಥದತ್ತ ಸಾಗುತ್ತಿದೆ. ಕೃಷಿಕರಿಗೆ ಹಾಗೂ ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡುತ್ತಿದ್ದು, ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನಿAದ ಪಡೆದುಕೊಂಡ ರೂ ೧ ಕೋಟಿ ಸಾಲವನ್ನು ಸಂಘವು ಮರು ಪಾವತಿ ಮಾಡಿದೆ ಎಂದರು.

ಕಾರ್ಯಕ್ರಮದಲ್ಲಿ ಮಾಜಿ ತಾ.ಪಂ ಅಧ್ಯಕ್ಷ ವಿ.ಕೆ. ಲೋಕೇಶ್, ನೆಲ್ಲಿಹುದಿಕೇರಿ ಗ್ರಾ.ಪಂ. ಅಧ್ಯಕ್ಷರುಗಳಾದ ಸಾಬೂ ವರ್ಗೀಸ್, ಅನಿತಾ, ಉಪಾಧ್ಯಕ್ಷೆ ಧಮಯಂತಿ, ಗ್ರಾ.ಪಂ. ಸದಸ್ಯೆ ಸುಹದಾ, ಸಹಕಾರ ಸಂಘದ ಮಾಜಿ ಅಧ್ಯಕ್ಷರುಗಳಾದ ಪಾಲಚಂಡ ಚೀಯಣ್ಣ, ಕೊಳಂಬೆ ಶಿವಪ್ಪ, ನಾಟೋಳನ ಮೇದಪ್ಪ, ಕೆ.ಎಂ. ಜಯಕುಮಾರ್, ಟಿ.ಬಿ. ತಿಮ್ಮಯ್ಯ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವಿ ಮುತ್ತಪ್ಪ, ಆಂಗ್ಲೋ ವರ್ನಾಕುಲರ್ ಶಾಲೆಯ ಮುಖ್ಯಸ್ಥ ಮಣಿ ಮೊಹಮ್ಮದ್ ಇನ್ನಿತರರು ಹಾಜರಿದ್ದರು. ಸಹಕಾರ ಸಂಘದ ನಿರ್ದೇಶಕ ಟಿ.ಸಿ. ಅಶೋಕ್ ಸ್ವಾಗತಿಸಿದರು. ಕೆ.ಜಿ. ವಿನೋದ್ ನಿರೂಪಿಸಿದರು. ಮುಖ್ಯ ಶಿಕ್ಷಕಿ ಭಾರತಿ ಪ್ರಾರ್ಥಿಸಿದರು. ಇದೇ ಸಂದರ್ಭದಲ್ಲಿ ಅಭ್ಯತ್‌ಮಂಗಳ ಸೇವಾ ಸಹಕಾರ ಸಂಘದ ಅಧ್ಯಕ್ಷ ಪಾಲಚಂಡ ಅಚ್ಚಯ್ಯ ಹಾಗೂ ಉಪಾಧ್ಯಕ್ಷ ಹೊಸಮನೆ ವಸಂತ ಕುಮಾರ್ ಅವರನ್ನು ಶಾಸಕ ಅಪ್ಪಚ್ಚು ರಂಜನ್ ಸನ್ಮಾನಿಸಿ, ಗೌರವಿಸಿದರು.