ಶನಿವಾರಸಂತೆ, ಅ. ೧: ರೋಟರಿ ಸಂಸ್ಥೆ ವತಿಯಿಂದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಆಟೋ, ಗೂಡ್ಸ್, ಮ್ಯಾಕ್ಸಿಕ್ಯಾಬ್ ಹಾಗೂ ಸಾರ್ವ ಜನಿಕರಿಗೆ ಉಚಿತ ರಕ್ತ, ಮಧುಮೇಹ ತಪಾಸಣಾ ಶಿಬಿರ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಶಿಬಿರ ಉದ್ಘಾಟಿಸಿದ ಸಂಸ್ಥೆ ಅಧ್ಯಕ್ಷ ಹೆಚ್.ಪಿ. ಮೋಹನ್ ಮಾತನಾಡಿ, ರೋಟರಿ ಸಂಸ್ಥೆ ಮಾಡುತ್ತಿರುವ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ಉಚಿತ ರಕ್ತ, ಮಧುಮೇಹ ತಪಾಸಣಾ ಶಿಬಿರವೂ ಒಂದಾಗಿದೆ. ಈ ಶಿಬಿರ ಇಂದು ದೇಶದಾದ್ಯಂತ ಆರ್ಟ್ ಆಫ್ ಲಿವಿಂಗ್‌ನ ರವಿಶಂಕರ್ ಗುರೂಜಿ ಸಹಭಾಗಿತ್ವದಲ್ಲಿ ನಡೆಯುತ್ತಿದೆ. ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಎಂದರು. ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಚಂದನ್ ಮಾತನಾಡಿ, ಮಧುಮೇಹ ಇಂದು ಬಹಳಷ್ಟು ಮಂದಿಯನ್ನು ಕಾಡುತ್ತಿದೆ. ವಯಸ್ಸಿನ ಬೇಧವಿಲ್ಲದೆ, ಸ್ತಿçÃ-ಪುರುಷ ಎಲ್ಲರನ್ನೂ ಕಾಡುವ ಈ ಕಾಯಿಲೆಗೆ ಸಕಾಲದಲ್ಲಿ ಸೂಕ್ತ ಚಿಕಿತ್ಸೆ ಪಡೆದು ನಿರಂತರ ತಪಾಸಣೆ ಮಾಡಿಸಿಕೊಂಡಲ್ಲಿ ಶೀಘ್ರ ಗುಣಮುಖರಾಗಬಹುದು ಎಂದರು. ಡಾ. ಮೋಹಿತ್, ಡಾ. ಶ್ರುತಿ, ರೋಟರಿ ಸಂಸ್ಥೆ ಕಾರ್ಯದರ್ಶಿ ಎಂ.ಎಸ್. ವಸಂತ್, ವಲಯ ಸೇನಾನಿ ಹೆಚ್.ಎಸ್. ವಸಂತ್ ಕುಮಾರ್, ಸದಸ್ಯ ಶಿವಾನಂದ್, ವಿಘ್ನೇಶ್ವರ ವಿದ್ಯಾಸಂಸ್ಥೆ ಶಿಕ್ಷಕ ಕೆ.ಪಿ. ಜಯಕುಮಾರ್, ಆರೋಗ್ಯ ಕೇಂದ್ರದ ಲ್ಯಾಬ್ ಟೆಕ್ನಿಷಿಯನ್‌ಗಳಾದ ರಶೀದ್ ಹಾಗೂ ರುದ್ರಯ್ಯ ಹಾಜರಿದ್ದರು. ಶಿಬಿರದಲ್ಲಿ ೯೫ ಮಂದಿ ಸಾರ್ವಜನಿಕರು ತಪಾಸಣೆಯನ್ನು ಮಾಡಿಸಿಕೊಂಡರು.