ಕರಿಕೆ, ಅ.೧: ಕರ್ನಾಟಕ ರಾಜ್ಯ ಪಶ್ಚಿಮಘಟ್ಟ ಕಾರ್ಯಪಡೆ ಅಧ್ಯಕ್ಷ ಶಾಂತೆಯAಡ ರವಿಕುಶಾಲಪ್ಪ ಅವರು ತಮ್ಮ ಕಚೇರಿಯಲ್ಲಿ ಶಾಸಕ ಕೆ.ಜಿ. ಬೋಪಯ್ಯ ಅವರ ಸಲಹೆಯ ಮೇರೆಗೆ ಸಾರ್ವಜನಿಕರ ಅಹವಾಲು ಸ್ವೀಕರಿಸಿ ಸಮಸ್ಯೆಗಳನ್ನು ಆಲಿಸಿದರು.

ಚೇಲಾವರ, ಮಾಲ್ದಾರೆ, ಸಂಪಾಜೆ, ಚೆಂಬು, ದಬ್ಬಡ್ಕ, ಕಟ್ಟಪ್ಪಳ್ಳಿ, ತಾವೂರು, ತಣ್ಣಿಮಾನಿ, ಕಾಲೂರು, ಕುಟ್ಟ ಸೇರಿದಂತೆ ವಿವಿಧ ಗ್ರಾಮಗಳಿಂದ ಹಲವಾರು ಸ್ವೀಕರಿಸಿ ಸಮಸ್ಯೆಗಳನ್ನು ಆಲಿಸಿದರು.

ಚೇಲಾವರ, ಮಾಲ್ದಾರೆ, ಸಂಪಾಜೆ, ಚೆಂಬು, ದಬ್ಬಡ್ಕ, ಕಟ್ಟಪ್ಪಳ್ಳಿ, ತಾವೂರು, ತಣ್ಣಿಮಾನಿ, ಕಾಲೂರು, ಕುಟ್ಟ ಸೇರಿದಂತೆ ವಿವಿಧ ಗ್ರಾಮಗಳಿಂದ ಹಲವಾರು ಇತ್ಯರ್ಥಪಡಿಸುವ ಬಗ್ಗೆ ಸಮಾಲೋಚನೆ ನಡೆಸಿ ಶೀಘ್ರವಾಗಿ ಪರಿಹಾರ ಒದಗಿಸಲು ಸೂಚಿಸಿದರು.

ಸಭೆಯಲ್ಲಿ ಜಿಲ್ಲಾ ಗಿರಿಜನ ಸಮನ್ವಯ ಅಧಿಕಾರಿ ಶ್ರೀನಿವಾಸ, ಹಿಂದುಳಿದ ವರ್ಗಗಳ ಅಭಿವೃದ್ಧಿ ಅಧಿಕಾರಿ ಕವಿತಾ, ಸಹಾಯಕ ಅರಣ್ಯ ಸಂರಕ್ಷಣಾ ಅಧಿಕಾರಿ ದಯಾನಂದ್, ಕಿರಿಯ ಅಭಿಯಂತರ ಪ್ರಮೋದ್, ಭೂಮಾಪನಾ ಅಧಿಕಾರಿ ವಿರೂಪಾಕ್ಷ, ಕಂದಾಯ ಪರಿವೀಕ್ಷಕ ರುದ್ರ, ಸಂಪಾಜೆ ವಿಎಸ್‌ಎಸ್‌ಎನ್ ಅಧ್ಯಕ್ಷ ಅನಂತ್ ಕುಮಾರ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಸಾರ್ವಜನಿಕರು ಹಾಜರಿದ್ದರು.