*ಗೋಣಿಕೊಪ್ಪ, ಅ. ೧: ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟು ಹಬ್ಬದ ಆಚರಣೆಯ ಅಂಗವಾಗಿ ವೀರಾಜಪೇಟೆ ತಾಲೂಕು ಕೃಷಿ ಮೋರ್ಚಾ ವತಿಯಿಂದ ಗಿಡಗಳನ್ನು ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಪೊನ್ನಂಪೇಟೆ ಪ್ರಾಥಮಿಕ ಶಾಲಾ ಆವರಣದಲ್ಲಿ ವಿವಿಧ ಜಾತಿಯ ಕಾಡು ಮತ್ತು ಹಣ್ಣಿನ ಗಿಡಗಳನ್ನು ನೆಟ್ಟು ಪರಿಸರ ಜಾಗೃತಿ ಮೂಡಿಸುವ ಕಾರ್ಯಕ್ಕೆ ಕೃಷಿ ಮೋರ್ಚಾ ಮುಂದಾಯಿತು.

ತಾಲೂಕು ಕೃಷಿ ಮೋರ್ಚಾ ಅಧ್ಯಕ್ಷ ಕಟ್ಟೆರ ಈಶ್ವರ ತಿಮ್ಮಯ್ಯ ಮುಂದಾಳತ್ವದಲ್ಲಿ ಹಾಗೂ ರಾಜ್ಯ ಕೃಷಿ ಮೋರ್ಚಾ ಸದಸ್ಯೆ ಮಾಪಂಗಡ ಯಮುನಾ ಚಂಗಪ್ಪ ಉಸ್ತುವಾರಿಯಲ್ಲಿ ಬಿಜೆಪಿ ಕಾರ್ಯಕರ್ತರು ಗಿಡಗಳನ್ನು ನೆಟ್ಟರು.

ಜಿಲ್ಲಾ ಉಪಾಧ್ಯಕ್ಷ ಸಂದೀಪ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಬೀರ್ ದಾಸ್, ಕಾರ್ಯದರ್ಶಿ ಕಿರಣ್, ತಾಲೂಕು ಕೃಷಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ವಿನು, ಕವನ್, ಕಾರ್ಯದರ್ಶಿ, ಕೊಟ್ಟಂಗಡ ಅಯ್ಯಪ್ಪ, ಖಜಾಂಚಿ ನವೀನ್, ತಾಲೂಕು ಉಪಾಧ್ಯಕ್ಷ ಶರಿನ್, ಅಪ್ಪಿ, ರಾಜೇಶ್, ಅನಿಲ್, ತಾಲೂಕು ಕಾರ್ಯದರ್ಶಿ ಮಂದಣ್ಣ, ಕಾವೇರಪ್ಪ, ಪೊನ್ನಂಪೇಟೆ ಗ್ರಾಮ ಪಂಚಾಯಿತಿ ಸದಸ್ಯ ಮದುಕುಮಾರ್, ಸುಧೀರ್, ದಿನೇಶ್ ಪಾಲ್ಗೊಂಡಿದ್ದರು.