ಮಡಿಕೇರಿ, ಅ. ೧: ಕೊಡಗು ಜಿಲ್ಲಾ ಮರಾಠ/ಮರಾಟಿ ಸಮಾಜ ಸೇವಾ ಸಂಘದ ಜಿಲ್ಲಾಧ್ಯಕ್ಷರಾಗಿ ಎಂ.ಎA. ಪರಮೇಶ್ವರ್ ಅವರನ್ನು ಮರು ನೇಮಕ ಮಾಡಲಾಯಿತು. ಮಡಿಕೇರಿ ತಾಲೂಕಿನ ತಾಳತ್ತ್ಮನೆಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಸಭೆಯಲ್ಲಿ ಪರಮೇಶ್ವರ್ ಪ್ರಸಕ್ತ ಸಾಲಿನಲ್ಲಿನ ಸಂಘದ ಜಿಲ್ಲಾಧ್ಯಕ್ಷರಾಗಿ ಮುಂದುವರೆಯುವAತೆ ನಿರ್ಧರಿಸಲಾಯಿತು. ಉಪಾಧ್ಯಕ್ಷರಾಗಿ ದೇವಕ್ಕಿ ಜಿ.ಆರ್. ನಾಯ್ಕ್, ಕಾರ್ಯದರ್ಶಿಯಾಗಿ ಎಂ.ಈ. ಪವನ್ ಕುಮಾರ್, ಉಪಕಾರ್ಯದರ್ಶಿಯಾಗಿ ಎ.ಎಂ. ನರಸಿಂಹ, ಕೋಶಾಧಿಕಾರಿಯಾಗಿ ಎಂ.ಎಸ್. ಕಾಂತಿ, ಸಂಘಟನಾ ಕಾರ್ಯದರ್ಶಿಯಾಗಿ ಎಂ.ಟಿ. ದೇವಪ್ಪ ನೇಮಕಗೊಂಡರು. ಸಂಘಟನಾ ಕಾರ್ಯದರ್ಶಿಯಾಗಿ ಪೊನ್ನಂಪೇಟೆ ತಾಲೂಕಿಗೆ ಎಂ.ಎಸ್. ದಿವ್ಯಕುಮಾರ್, ವೀರಾಜಪೇಟೆ ತಾಲೂಕಿಗೆ ಎಂ.ಟಿ. ರಾಘವ್ ನಾಯ್ಕ್, ಕುಶಾಲನಗರ ತಾಲೂಕಿಗೆ ಎಂ.ಸಿ. ಗಣೇಶ್ ದೊಡ್ಡತ್ತೂರ್, ಸೋಮವಾರಪೇಟೆ ತಾಲೂಕಿಗೆ ಸಂತೋಷ್ ಕುಮಾರ್ ಆಯ್ಕೆಯಾದರು. ಸದಸ್ಯರಾಗಿ ರತ್ನಮಂಜರಿ, ಎಂ.ಎ. ಕುಮಾರ್, ಸಂತೋಷ್, ಹೂವಮ್ಮ, ಎಂ.ಎಸ್. ಗಣೇಶ್, ಎಂ.ಎಸ್. ವೆಂಕಪ್ಪ, ಸಂಪತ್, ಡಿ.ಸಿ. ತಿಮ್ಮಯ್ಯ, ಎಂ.ಎ. ಐತಪ್ಪ, ಎಂ.ಪಿ. ಸುರೇಶ್, ಶಶಿಕಾಂತ್, ಸಲಹಾ ಸಮಿತಿ ಸದಸ್ಯರಾಗಿ ಜಿ.ಆರ್. ನಾಯ್ಕ್, ಎಂ.ಕೆ. ಬಾಬು ಪಾಲಂಗಾಲ, ಎಂ.ಎಸ್. ಮಂಜುನಾಥ್, ಚೆನಿಯಪ್ಪ, ವಿಶ್ವನಾಥ್, ಮಹಿಳಾ ಘಟಕದ ಅಧ್ಯಕ್ಷರಾಗಿ ರತ್ನಮಂಜರಿ, ಕಾರ್ಯದರ್ಶಿಯಾಗಿ ಹೂವಮ್ಮ, ಗೌರವಾಧ್ಯಕ್ಷರಾಗಿ ಕಲಾವತಿ ಬಾಬುನಾಯ್ಕ್ರನ್ನು , ಕಟ್ಟಡ ಸಮಿತಿಯ ಅಧ್ಯಕ್ಷರಾಗಿ ಎಂ.ಟಿ. ಗುರುವಪ್ಪ, ಗೌರವ ಅಧ್ಯಕ್ಷರಾಗಿ ಎಂ.ಎA. ಪರಮೇಶ್ವರ್, ಕಾರ್ಯದರ್ಶಿಯಾಗಿ ಎಂ.ಎಸ್. ಯೋಗೇಂದ್ರ, ಸದಸ್ಯರಾಗಿ ಎಂ.ಬಿ. ಪೂವಪ್ಪ, ಎಂ.ಸಿ. ವಾಮನ ನಾಯ್ಕ್, ಭೀಮಯ್ಯ, ಕುಮಾರ್ ಅವರುಗಳನ್ನು ನೇಮಕ ಮಾಡಲಾಯಿತು.