*ಗೋಣಿಕೊಪ್ಪ, ಅ. ೧: ದೀನ್ ದಯಾಳ್ ಉಪಾಧ್ಯಾಯರ ೧೦೫ನೇ ಜಯಂತಿಯನ್ನು ಪೊನ್ನಂಪೇಟೆ ತಾಲೂಕಿನ ಅರುವತ್ತೊಕ್ಲು ಗ್ರಾಮದಲ್ಲಿ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾದ ವತಿಯಿಂದ ಆಚರಿಸಲಾಯಿತು.

ಉಪಾಧ್ಯಾಯರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಜ್ಯೋತಿ ಬೆಳಗಿಸಿ ಜನುಮ ದಿನದಂದು ಅವರ ಆದರ್ಶ ಗುಣಗಳನ್ನು ಪಾಲನೆ ಮಾಡುವಂತೆ ಯುವ ಸಮುದಾಯಕ್ಕೆ ಕರೆ ನೀಡಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಮಹಿಳಾ ಮೋರ್ಚಾದ ಅಧ್ಯಕ್ಷೆ ಶರೀನ್ ಸುಬ್ಬಯ್ಯ, ಉಪಾಧ್ಯಕ್ಷೆ ಸುಮಿ ಸುಬ್ಬಯ್ಯ, ರಾಜ್ಯ ಕೃಷಿ ಮೋರ್ಚಾದ ಸದಸ್ಯರಾದ ಯಮುನಾ ಚಂಗಪ್ಪ, ವೀರಾಜಪೇಟೆ ತಾಲೂಕಿನ ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷೆ ಕವಿತಾ ಬೋಜಪ್ಪ, ವೀರಾಜಪೇಟೆ ತಾಲೂಕಿನ ಬಿಜೆಪಿ ಪಕ್ಷದ ಅಧ್ಯಕ್ಷ ನೆಲ್ಲೀರ ಚಲನ್, ಆರ್.ಎಂ.ಸಿ ಉಪಾಧ್ಯಕ್ಷೆ ಸುಶೀಲ, ಅರುವತ್ತೊಕ್ಲು ಪಂಚಾಯಿತಿ ಅಧ್ಯಕ್ಷ ಮನೆಯಪಂಡ ಸೋಮಣ್ಣ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಸಿ.ಕೆ ಬೋಪಣ್ಣ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು. ಸುಮಿ ಸುಬ್ಬಯ್ಯ ಪ್ರಾರ್ಥಿಸಿ, ಮಮತಾ ದಿನೇಶ್ ಸ್ವಾಗತಿಸಿ, ಶೀಲಾ ಬೋಪಣ್ಣ ನಿರೂಪಿಸಿದರು.