ಸೋಮವಾರಪೇಟೆ, ಅ. ೧: ಕೊರೊನಾ ಹಿನ್ನೆಲೆ ತಾಲೂಕಿನ ಚೆಕ್ ಪೋಸ್ಟ್ಗಳಲ್ಲಿ ಕರ್ತವ್ಯ ನಿರ್ವಹಿಸು ತ್ತಿರುವ ಎಲ್ಲಾ ಸಿಬ್ಬಂದಿಗಳಿಗೂ ಭದ್ರತೆ ಒದಗಿಸಬೇಕು ಎಂದು ಒತ್ತಾಯಿಸಿ ರುವ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಘಟಕದ ಪದಾಧಿಕಾರಿಗಳು, ಕೆಲ ಚೆಕ್‌ಪೋಸ್ಟ್ಗಳಲ್ಲಿ ನೌಕರರಿಗೆ ಮಾನಸಿಕ ಕಿರುಕುಳವಾಗುತ್ತಿದ್ದು, ಇದರ ವಿರುದ್ಧ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಪ್ರದೀಪ್, ತಾಲೂಕಿನ ಚೆಕ್‌ಪೋಸ್ಟ್ ಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಭದ್ರತೆಯೊಂದಿಗೆ ಗುಣಮಟ್ಟದ ಆಹಾರ ಸಿಗುತ್ತಿಲ್ಲ. ಹಲವಷ್ಟು ಸಿಬ್ಬಂದಿಗಳಿಗೆ ಅನಾರೋಗ್ಯ ವಿದ್ದು, ಆಹಾರದ ಏರುಪೇರಿನಿಂದಾಗಿ ಇನ್ನಷ್ಟು ಉಲ್ಬಣವಾಗುತ್ತಿದೆ. ಈ ನಡುವೆ ಶಿರಂಗಾಲ ಚೆಕ್‌ಪೋಸ್ಟ್ ಸಮೀಪವಿರುವ ಹೊಟೇಲ್ ಮಾಲೀಕರು ಸಿಬ್ಬಂದಿಗಳಿಗೆ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ದೂರಿದರು.
ಶಿರಂಗಾಲ ಚೆಕ್‌ಪೋಸ್ಟ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಸ್ಥಳೀಯ ಹೊಟೇಲ್ ನಿಂದ ಊಟ ಒದಗಿಸಲಾಗುತ್ತಿತ್ತು. ಇದರಲ್ಲಿ ಗುಣಮಟ್ಟದ ಅಹಾರ ಸಿಗದ ಹಿನ್ನೆಲೆ ಸಿಬ್ಬಂದಿಗಳು ಅಳಲು ತೋಡಿಕೊಂಡಿದ್ದು, ಸ್ಥಳೀಯ ಗ್ರಾಮ ಲೆಕ್ಕಾಧಿಕಾರಿಗಳು ಹೊಟೇಲ್‌ಗೆ ತೆರಳಿ ವಿಷಯ ತಿಳಿಸಿದ ಸಂದರ್ಭ ‘ಬೇಕಾದ್ರೆ ಊಟ ಮಾಡಲಿ; ಇಲ್ಲಾಂದ್ರೆ ಬೇಡ’ ಎಂದು ಉಡಾಫೆಯ ಮಾತುಗಳನ್ನಾಡಿದ್ದಾರೆ. ಇದನ್ನು ತಹಶೀಲ್ದಾರ್ ಗಮನಕ್ಕೆ ತಂದ ನಂತರ ಹೊಟೇಲ್‌ನ್ನು ಬದಲಾಯಿಸಿದ್ದಾರೆ. ಈ ಹಿನ್ನೆಲೆ ನಮ್ಮ ಹೊಟೇಲ್ ನಿಂದ ಊಟ ಕೈತಪ್ಪಲು ಗ್ರಾಮ ಲೆಕ್ಕಾಧಿಕಾರಿಯೇ ಕಾರಣ ಎಂದು ಭಾವಿಸಿರುವ ಹೊಟೇಲ್ ಮಾಲೀಕರು, ಲೆಕ್ಕಾಧಿಕಾರಿಯ ವಿರುದ್ಧ ಕಮಿಷನ್ ಕೇಳಿದ್ದಾರೆ ಎಂದು ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಇಷ್ಟಕ್ಕೆ ಸುಮ್ಮನಾಗದೇ ಸಂಘ ಸಂಸ್ಥೆಗಳ ಮೂಲಕ, ಸ್ಥಳೀಯ ಖಾಸಗಿ ಚಾನಲ್‌ನ ಮೂಲಕ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿದ್ದು, ಕಿರುಕುಳ ನೀಡಿದವರ ವಿರುದ್ಧ ಪೊಲೀಸ್ ದೂರು ನೀಡಲು ಸೂಚನೆ ನೀಡಿದ್ದಾರೆ ಎಂದು ಪ್ರದೀಪ್ ತಿಳಿಸಿದರು. ಇದರೊಂದಿಗೆ ಚೆಕ್ ಪೋಸ್ಟ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲಾ ಸಿಬ್ಬಂದಿ ಗಳಿಗೂ ಅಗತ್ಯ ಮೂಲಭೂತ ಸೌಕರ್ಯ, ಭದ್ರತೆ ಒದಗಿಸಬೇಕು. ಕಿರುಕುಳ ಮುಂದುವರೆದಲ್ಲಿ ಸಂಘದಿAದ ಪ್ರತಿಭಟನೆಯ ಹಾದಿ ಹಿಡಿಯಬೇಕಾಗುತ್ತದೆ ಎಂದು ಎಚ್ಚರಿಸಿದರು.
ಗೋಷ್ಠಿಯಲ್ಲಿ ಸಂಘದ ರಾಜ್ಯ ಸಮಿತಿ ಸದಸ್ಯ ಸುಗುಣಾನಂದ, ತಾಲೂಕು ಕಾರ್ಯದರ್ಶಿ ಎನ್.ಎಂ. ನಾಗೇಶ್, ಖಜಾಂಚಿ ಬಿ.ಜಿ. ದಿನೇಶ್ ಅವರುಗಳು ಉಪಸ್ಥಿತರಿದ್ದರು.