ಮಡಿಕೇರಿ, ಸೆ. ೨೯: ನವದೆಹಲಿಯ ನೆಹರು ಕ್ರೀಡಾಂಗಣದಲ್ಲಿ ನಡೆದ ೨೩ ವರ್ಷದೊಳಗಿನ ಪ್ರಥಮ ರಾಷ್ಟಿçÃಯ ಅಥ್ಲೆಟಿಕ್ ಚಾಂಪಿಯನ್ ಶಿಪ್-೨೦೨೧ರಲ್ಲಿ ಕೊಡಗಿನ ಯುವತಿ ತೀತರಮಾಡ ಸಿಂಚಲ್ ಕಾವೇರಮ್ಮ ಬೆಳ್ಳಿ ಪದಕ ಗಳಿಸಿದ್ದಾರೆ. ೪೦೦ ಮೀಟರ್ಸ್ ಹರ್ಡಲ್ಸ್ನಲ್ಲಿ ಸಿಂಚಲ್ ದ್ವಿತೀಯ ಸ್ಥಾನದೊಂದಿಗೆ ಬೆಳ್ಳಿ ಪದಕ ಪಡೆದಿದ್ದಾರೆ.
ಇತ್ತೀಚೆಗೆ ಉಡುಪಿಯಲ್ಲಿ ನಡೆದ ರಾಜ್ಯಮಟ್ಟದ ಅಥ್ಲೆಟಿಕ್ ಕೂಟದಲ್ಲಿ ಸಿಂಚಲ್ ೪೦೦ ಮೀಟರ್ಸ್ ಹರ್ಡಲ್ಸ್ನಲ್ಲಿ ಚಿನ್ನದ ಪದಕದೊಂದಿಗೆ ರಾಷ್ಟಿçÃಯ ಮಟ್ಟಕ್ಕೆ ಆಯ್ಕೆಯಾಗಿದ್ದರಲ್ಲದೆ, ಬೆಸ್ಟ್ ಅಥ್ಲೆಟ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಇವರು ರಾಷ್ಟಿçÃಯ ಅಥ್ಲೆಟಿಕ್ಗೆ ಆಯ್ಕೆಯಾಗಿದ್ದರು. ಇವರು ರಾಷ್ಟಿçÃಯ ಅಥ್ಲೆಟಿಕ್ಸ್ ತರಬೇತುದಾರ ಬೆಂಗಳೂರಿನಲ್ಲಿರುವ ಕೊಡಗಿನವರಾದ ಬೊಳ್ಳಂಡ ಅಯ್ಯಪ್ಪ ಅವರಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಈಕೆ ತೀತರಮಾಡ ಎಂ. ರವಿ ಮುದ್ದಪ್ಪ ಹಾಗೂ ರಶ್ಮಿ ದಂಪತಿಯ ಪುತ್ರಿ.