*ಗೋಣಿಕೊಪ್ಪ, ಸೆ. ೨೯: ಆಟೋ ಚಾಲನೆ ಸಂದರ್ಭ ಕಾನೂನು ಮತ್ತು ಶಿಸ್ತು ಪಾಲನೆಯನ್ನು ಚಾಲಕರು ಗಂಭೀರವಾಗಿ ಪರಿಗಣಿಸಬೇಕೆಂದು ಗೋಣಿಕೊಪ್ಪ÷ವೃತ್ತ ನಿರೀಕ್ಷಕ ಜಯರಾಮ್ ಅವರು ಕಿವಿಮಾತು ಹೇಳಿದರು.

ಮಹಿಳಾ ಸಮಾಜದ ಸಭಾಂಗಣದಲ್ಲಿ ನಡೆದ ಆಟೋ ರಿಕ್ಷಾಗಳ ನೂತನ ಜಿ.ಪಿ.ಎಸ್. ಸಂಖ್ಯೆಗಳ ಸ್ಟಿಕ್ಕರ್‌ಗಳನ್ನು ಬಿಡುಗಡೆಗೊಳಿಸಿ ಮಾತನಾಡಿದರು. ಆಟೋ ಚಾಲಕರು ಸಮಾಜ ಸೇವಕರಾಗಿದ್ದು, ಸಾಮಾಜಿಕ ವಲಯದಲ್ಲಿ ಜವಾಬ್ದಾರಿಯುತ ಸ್ಥಾನವನ್ನು ನಿಬಾಯಿಸುತ್ತಿದ್ದಾರೆ. ಚಾಲಕರು ಕಾನೂನು ಪಾಲನೆಯೊಂದಿಗೆ ಸೇವೆಯನ್ನು ನೀಡಲು ಮುಂದಾಗಬೇಕು. ಮದ್ಯಪಾನ ಸೇವಿಸಿ ಆಟೋ ಚಾಲನೆ ಮಾಡದೇ ಮತ್ತೊಬ್ಬರ ಜೀವದ ಬಗ್ಗೆ ಗೌರವ ಹೊಂದಿಕೊಳ್ಳಬೇಕೆAದು ತಿಳಿಸಿದರು. ಉಪಠಾಣಾಧಿಕಾರಿ ಸುಬ್ಬಯ್ಯ ಸಂಚಾರಿ ನಿಯಮ ಪಾಲಿಸುವಂತೆ ಕರೆ ನೀಡಿದರು.

ಆಟೋ ಚಾಲಕರ ಸಂಘದ ಗೌರವಾಧ್ಯಕ್ಷ ಕುಲ್ಲಚಂಡ ಬೋಪಣ್ಣ ಅಧ್ಯಕ್ಷತೆಯಲ್ಲಿ ಸಂಘದ ಅಧ್ಯಕ್ಷ ಜಿಮ್ಮ ಸುಬ್ಬಯ್ಯ. ಉಪಾಧ್ಯಕ್ಷ ನಿತ್ಯಾನಂದ ಟಿ.ಎಸ್., ಕಾರ್ಯದರ್ಶಿ ಸಿ.ಎ. ವಿನು, ಸಹಕಾರ್ಯದರ್ಶಿ ಕೆ.ವಿ. ಸುರೇಶ್, ಖಜಾಂಚಿ ಪಿ.ಪಿ. ರಂಜು ಸೇರಿದಂತೆ ನಿರ್ದೇಶಕರು ಸದಸ್ಯರುಗಳು ಹಾಜರಿದ್ದರು.