ಮಡಿಕೇರಿ, ಸೆ. ೨೯: ಪೊಲೀಸ್ ಸಬ್-ಇನ್ಸ್ಪೆಕ್ಟರ್ (ಸಿವಿಲ್) (ಮಹಿಳಾ ಮತ್ತು ಪುರುಷ) ಮತ್ತು ಸೇವಾ ನಿರತರನ್ನು ಒಳಗೊಂಡ ಹುದ್ದೆಗಳಿಗೆ ಲಿಖಿತ ಪರೀಕ್ಷೆಯು ಅಕ್ಟೋಬರ್ ೩ ರಂದು ಬೆಂಗಳೂರು, ಮೈಸೂರು, ಮಂಗಳೂರು, ಹುಬ್ಬಳ್ಳಿ, ಧಾರವಾಡ, ಕಲಬುರ್ಗಿ, ದಾವಣಗೆರೆ ಮತ್ತು ತುಮಕೂರು ಜಿಲ್ಲಾ ಕೇಂದ್ರಗಳಲ್ಲಿ ನಡೆಯಲಿದೆ.
ಈ ಲಿಖಿತ ಪರೀಕ್ಷೆಯ ಪತ್ರಿಕೆ-೧ ಅಕ್ಟೋಬರ್ ೩ ರಂದು ಬೆಳಿಗ್ಗೆ ೧೧ ರಿಂದ ೧೨.೩೦ ವರೆಗೆ ಮತ್ತು ಪತ್ರಿಕೆ-೨ ಮಧ್ಯಾಹ್ನ ೩ ರಿಂದ ೪.೩೦ ವರೆಗೆ ನಡೆಸಲಾಗುವುದು. ಲಿಖಿತ ಪರೀಕ್ಷೆಯ ಕರ ಪತ್ರವನ್ನು ಇಲಾಖೆಯ ಅಧಿಕೃತ ವೆಬ್ಸೈಟ್ ತಿತಿತಿ.ಡಿeಛಿಡಿuiಣmeಟಿಣ.ಞsಠಿ.gov.iಟಿ ನಲ್ಲಿ ಡೌನ್ಲೋಡ್ ಮಾಡಿಕೊಂಡು ಪರೀಕ್ಷೆಗೆ ಹಾಜರಾಗುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾಮಿಶ್ರ ತಿಳಿಸಿದ್ದಾರೆ.