ಮಡಿಕೇರಿ, ಸೆ. ೨೯: ನಗರದ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಸಿಇಟಿ ಮತ್ತು ನೀಟ್ ಪರಿಶೀಲನಾ ಕೇಂದ್ರ ಸ್ಥಾಪಿಸಲಾಗಿದೆ. ೨೦೨೦-೨೧ನೇ ಸಾಲಿನ ಸಿಇಟಿ ಮತ್ತು ನೀಟ್(ಎನ್‌ಇಇಟಿ)ನಲ್ಲಿ ಉತ್ತೀರ್ಣರಾದ ರ‍್ಯಾಂಕ್ ಪಡೆದ) ಅಭ್ಯರ್ಥಿಗಳ ದಾಖಲಾತಿ ಪರಿಶೀಲನೆಯು ನಗರದ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಡೆಯಲಿದೆ.

ದಾಖಲಾತಿ ಪರಿಶೀಲನೆ ತಾ. ೩೦ ರಂದು (ಇಂದು) ಪ್ರಾರಂಭವಾಗಲಿದೆ. ಹೆಚ್ಚಿನ ಮಾಹಿತಿಗೆ ಮೊ. ೮೮೬೧೮೯೭೪೧೨, ೯೭೩೯೪೪೧೭೦೮, ೬೩೬೦೪೭೨೬೩೬ನ್ನು ಸಂಪರ್ಕಿಸಬಹುದು ಎಂದು ನೋಡಲ್ ಅಧಿಕಾರಿ ಮತ್ತು ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ವಿಜಯ ಕೋರಿದ್ದಾರೆ.