ಚೆಟ್ಟಳ್ಳಿ, ಸೆ. ೨೯: ಎಸ್.ಎಸ್.ಎಫ್. ಧ್ವಜ ದಿನ ಪ್ರಯುಕ್ತ ಎಸ್.ಎಸ್.ಎಫ್. ರಾಜ್ಯ ಸಮಿತಿಯ ನಿರ್ದೇಶನದಂತೆ ‘ಬೇರಿನ ದಾರಿ’ ಎಂಬ ಹೆಸರಿನಲ್ಲಿ ಸಂಘಟನೆಯನ್ನು ಕಟ್ಟಿ ಬೆಳೆಸಿದ ಪೂರ್ವಿಕ ಹಾಗೂ ನವ ನಾಯಕರ ಸಮಾಗಮ ನೆಲ್ಲಿಹುದಿಕೇರಿ ದಾರುನ್ನಜಾತ್ ಸುನ್ನಿ ಸೆಂಟರ್ನಲ್ಲಿ ನಡೆಯಿತು. ಡಿವಿಶನ್ ಅಧ್ಯಕ್ಷ ರಝಾಕ್ ಸಅದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಡಿವಿಶನ್ ಪ್ರಧಾನ ಕಾರ್ಯದರ್ಶಿ ನಿಝಾಮುದ್ದೀನ್ ಮಟ್ಟಂ ಸ್ವಾಗತಿಸಿದರು. ಉದ್ಘಾಟನೆಯನ್ನು ಎಸ್ವೈಎಸ್ ಕೊಡಗು ಜಿಲ್ಲಾ ಕಾರ್ಯದರ್ಶಿ ಮುಹಿಯದ್ದೀನ್ ಪೊನ್ನತ್ಮೊಟ್ಟೆ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಹಿರಿಯ ನಾಯಕರಾದ ಹಂಸ ಸಅದಿ ಅವರು ವಿಷಯ ಮಂಡಿಸಿದರು. ಸಂಘಟನೆ ನಡೆದು ಬಂದ ಹಿನ್ನೆಲೆ ಹಿರಿಯ ನಾಯಕರುಗಳಾದ ಉಮ್ಮರ್ಮಟ್ಟಂ, ಆಬಿದ್ ಕಂಡಕರೆ, ಹಂಸ ಮುಸ್ಲಿಯಾರ್ ಗುಹ್ಯ ವಿವರಿಸಿದರು. ಕಾರ್ಯಕ್ರಮದಲ್ಲಿ ಡಿವಿಶನ್ ಸಮಿತಿ ಸದಸ್ಯರು, ಡಿವಿಶನ್ ವ್ಯಾಪ್ತಿಯ ಹಲವು ನಾಯಕರು ಭಾಗವಹಿಸಿದ್ದರು. ಕೋಶಾಧಿಕಾರಿ ಹಂಸ ರಹ್ಮಾನಿ ವಂದಿಸಿದರು.