ನಾಪೋಕ್ಲು, ಸೆ. ೨೯: ಕುಂಜಿಲ ಜಮಾಅತ್ ವತಿಯಿಂದ ಮಹ್ಮೂದ್ ಉಸ್ತಾದ್ ಅವರ ಅನುಸ್ಮರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮವನ್ನು ಕುಂಜಿಲ ಮುದರಿಸ್ ಬಹುಃ ಮುಬಷಿರ್ ಅಹ್ಸನಿ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಇತ್ತೀಚೆಗೆ ನಮ್ಮನ್ನು ಅಗಲಿದ ಶೈಖುನಾ ಮಹಮ್ಮದ್ ಉಸ್ತಾದ್ ಅವರು ಸಮುದಾಯದ ಉದ್ದಾರಕ್ಕಾಗಿ ಸೇವೆಯನ್ನು ಸಲ್ಲಿಸಿದ್ದರು ಎಂದು ಹೇಳಿದರು.

ಈ ಸಂದರ್ಭ ಕುಂಜಿಲ ಪೈನರಿ ಜಮಾಅತ್ ಅಧ್ಯಕ್ಷ ಶೌಕತಲಿ, ಅಬ್ದುಲ್ಲಾ ಸಖಾಫಿ, ಹುಸೈನ್ ಉಸ್ತಾದ್, ಮಾಜಿ ಅಧ್ಯಕ್ಷ ಮಹಮ್ಮದಾಜಿ ಅದವೇಲ್, ಜಮಾಅತ್ ಸದಸ್ಯರು ಮತ್ತಿತರರು ಇದ್ದರು.