ಪೊಲೀಸ್ ಇಲಾಖೆ ಕೊರೊನಾ ಮಾರ್ಗಸೂಚಿ ಹೆಸರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ದೌರ್ಜನ್ಯ ನಡೆಸುತ್ತಿದ್ದು, ಇದರ ವಿರುದ್ಧ ಪ್ರತಿಭಟನೆ ನಡೆಸಲಾಗುವುದು. ಪಟ್ಟಣ ಪಂಚಾಯಿತಿಯಲ್ಲಿ ಎಸ್ಸಿ ಎಸ್ಟಿ ಮೀಸಲು ಅನುದಾನ ಸಮರ್ಪಕ ಬಳಕೆಯಾಗುತ್ತಿಲ್ಲ.
ಹೈಟೆಕ್ ಮಾರುಕಟ್ಟೆ ಅವ್ಯವಸ್ಥೆಯಿಂದ ಕೂಡಿದೆ. ಮೂಲಭೂತ ಸೌಕರ್ಯಗಳೂ ಸಮರ್ಪಕವಾಗಿಲ್ಲ. ಇವೆಲ್ಲವುಗಳ ಬಗ್ಗೆ ತಾ.೧೨.೧೦.೨೦೨೧ರಂದು ಕಾಂಗ್ರೆಸ್ನಿAದ ಪಂಚಾಯಿತಿಗೆ ಮುತ್ತಿಗೆ ಹಾಕಲಾಗುವುದು ಎಂದರು.
ಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಹೆಚ್. ಮಂಜುನಾಥ್, ಕಾಂಗ್ರೆಸ್ ಸೇವಾದಳ ಅಧ್ಯಕ್ಷ ಬಿ. ಬಸವರಾಜು, ಎಸ್ಸಿ ಎಸ್ಟಿ ಘಟಕದ ಕಾರ್ಯದರ್ಶಿ ರಾಜಪ್ಪ, ಕಚೇರಿ ಕಾರ್ಯದರ್ಶಿ ಹೆಚ್.ಜಿ. ರಘು, ನಗರ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಬೇಟು ಉಪಸ್ಥಿತರಿದ್ದರು.