ಶನಿವಾರಸಂತೆ, ಸೆ. ೨೯: ಸಮೀಪದ ಶಿವಾರಳ್ಳಿ ಗ್ರಾಮದ ಯುವಕ ಎಸ್.ಎಂ. ಸಚಿನ್ ಎಂಬಾತ ತಾ. ೧೪ ರಂದು ಕಳೆನಾಶಕ ಸೇವಿಸಿ ಚಿಕಿತ್ಸೆ ಫಲಕಾರಿಯಾಗದೆ ತಾ. ೨೭ ರಂದು ಮೃತಪಟ್ಟಿದ್ದು, ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಚಿನ್ ಬೆಂಗಳೂರಿನ ಖಾಸಗಿ ಕಂಪೆನಿಯಲ್ಲಿ ಉದ್ಯೋಗದಲ್ಲಿದ್ದು, ಕೆಲವು ಸಮಯದಿಂದ ಮನೆಗೆ ಬಂದು ವ್ಯವಸಾಯ ಮಾಡಿಕೊಂಡಿದ್ದ. ತಾ. ೧೧ ರಂದು ಆತನ ಕಾರು ಅವಘಡಕ್ಕೊಳಗಾಗಿದ್ದು, ಕಾರಿಗೆ ಹಾನಿಯಾಗಿತ್ತು. ಇದರಿಂದ ಮನನೊಂದು ತಾ. ೧೪ ರಂದು ವಿಷ ಸೇವಿಸಿದ್ದ. ಆತನ ತಂದೆ ಎಸ್.ಬಿ. ಮೋಹನ್ ಶನಿವಾರಸಂತೆ ಪೊಲೀಸ್ ಠಾಣೆಗೆ ನೀಡಿದ ದೂರಿನ ಮೇರೆ, ಹೆಡ್‌ಕಾನ್ಸ್ಟೇಬಲ್ ಶಶಿಕುಮಾರ್ ಪ್ರಕರಣ ದಾಖಲಿಸಿದ್ದಾರೆ.