ಕಡಂಗ, ಸೆ. ೨೯: ಮೊಯ್ಯದ್ದೀನ್ ಜುಮಾ ಮಸೀದಿಯ ನೂತನ ಆಡಳಿತ ಮಂಡಳಿಯನ್ನು ಮದರಸಾ ಸಭಾಂಗಣದಲ್ಲಿ ಆಯ್ಕೆ ಮಾಡಲಾಯಿತು. ನೂತನ ಅಧ್ಯಕ್ಷರಾಗಿ ಅಬ್ದುಲ್ಲಾ ಸಿ.ಟಿ. ಅವರನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರು ಗಳಾಗಿ ಸಲಾಂ ಸಿ.ಎ., ಪ್ರದಾನ ಕಾರ್ಯದರ್ಶಿ ಅಂದಾಯಿ, ಉಪಕಾರ್ಯ ದರ್ಶಿಗಳಾಗಿ ಸಮೀರ್ ಪಿ.ಹೆಚ್., ಆರಿಸ್ ಎಂ.ಎA., ಇಸಾಕ್, ಅಬ್ದುಲ್ ರಹ್ಮಾನ್ ಸಿ.ಯೂ.ಕೆ., ಕಮಿಟಿ ಸದಸ್ಯರುಗಳಾಗಿ ರಝಕ್ ಪಿ.ಇ., ಸಿದ್ದೀಕ್ ಕೆ.ಎ., ಟಿ.ಎಂ. ಅಂದಾಯಿ, ಕೆ.ಯು. ಶಿಹಾಬ್ ಅವರನ್ನು ಆಯ್ಕೆ ಮಾಡಲಾಯಿತು.