ಮಡಿಕೇರಿ, ಸೆ. ೨೯: ಕೊಡಗು ಜಿಲ್ಲಾ ಪತ್ರಕರ್ತರ ವೇದಿಕೆಗೆ ಸದಸ್ಯರಾಗಲು ಜಿಲ್ಲಾ ಪತ್ರಕರ್ತರ ವೇದಿಕೆ ಅರ್ಜಿ ಆಹ್ವಾನಿಸಿದ್ದು, ಜಿಲ್ಲೆಯ ಪತ್ರಕರ್ತರು, ಪತ್ರಿಕಾ ವಿತರಕರು, ಅಂಕಣಕಾರರು, ಪತ್ರಿಕಾ ಛಾಯಾಗ್ರಾಹಕರು, ಪತ್ರಿಕಾ ಕಚೇರಿಯ ಸಿಬ್ಬಂದಿಗಳು ಸದಸ್ಯತ್ವವನ್ನು ಪಡೆದುಕೊಳ್ಳಲು ಅರ್ಹರಾಗಿರುತ್ತಾರೆ. ಸದಸ್ಯತ್ವ ಶುಲ್ಕ ರೂ. ೫೦೦ ಆಗಿದ್ದು. ಅಕ್ಟೋಬರ್ ೧೫ ರಂದು ಅರ್ಜಿ ಸಲ್ಪಿಸಲು ಕೊನೆಯ ದಿನಾಂಕವಾಗಿದೆ. (ಮೂರು ವರ್ಷದ ಅವಧಿಗೆ) ಅರ್ಜಿಯನ್ನು ಮಡಿಕೇರಿ ಕಾಲೇಜು ರಸ್ತೆಯ ಕಾವೇರಿ ಟವರ್ಸ್ ಕಟ್ಟಡದಲ್ಲಿರುವ ಕೊಡಗು ಜಿಲ್ಲಾ ಪತ್ರಕರ್ತರ ವೇದಿಕೆ ಕಚೇರಿಯಿಂದ ಪಡೆದುಕೊಳ್ಳತಕ್ಕದ್ದು ಎಂದು ಕೊಡಗು ಜಿಲ್ಲಾ ಪತ್ರಕರ್ತರ ವೇದಿಕೆಯ ಪ್ರಧಾನ ಕಾರ್ಯದರ್ಶಿ ಶ್ರೀಧರ್ ಹೂವಳ್ಳಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ೯೪೪೮೦೪೯೦೯೫, ೯೧೧೩೦೬೯೮೨೭, ೮೭೬೨೬೩೨೩೧೪ ಸಂಪರ್ಕಿಸಬಹುದಾಗಿದೆ.