ವೀರಾಜಪೇಟೆ ನಿವಾಸಿ ಸಾಹಿರ ಅವರ ಪುತ್ರ ಪಿ.ಎಸ್ ಸಿನಾನ್, ೮ ವರ್ಷದ ಬಾಲಕನಿಗೆ ತಲಸ್ಸೇಮಿಯಾ ಎಂಬ ರಕ್ತ ಸಂಬAಧಿ ರೋಗದ ಚಿಕಿತ್ಸೆಗೆ ರೂ.೪೦ ಲಕ್ಷದಷ್ಟು ಖರ್ಚಾಗಲಿದ್ದು, ದಾನಿಗಳ ಸಹಾಯಹಸ್ತಕ್ಕೆ ಕುಟುಂಬ ಕೈಚಾಚಿದೆ.

ಬೋನ್ ಮ್ಯಾರೋ ಚಿಕಿತ್ಸೆಗೆ ಇಷ್ಟು ಖರ್ಚಾಗಲಿದ್ದು, ಇದಲ್ಲದೆ ಪ್ರತಿ ೧೦ ದಿನಕ್ಕೊಮ್ಮೆ ‘ಬ್ಲಡ್ ಟ್ರಾನ್ಸ್ಫ್ಯೂಷನ್’ ಮಾಡಲೇ ಬೇಕಾದ ಅಗತ್ಯವಿದ್ದು ಬೆಂಗಳೂರಿನ ಆಸ್ಪತ್ರೆಯಲ್ಲಿ ಈ ಕಾರ್ಯ ನಡೆಸಲಾಗುತ್ತಿದೆ. ಈ ಸಂಬAಧ ಔಷಧಿ ಇತ್ಯಾದಿಗಳಿಗೂ ಪ್ರತಿ ೧೦ ದಿನಕ್ಕೊಮ್ಮೆ ರೂ.೧೨ ರಿಂದ ರೂ.೧೫ ಸಾವಿರದಷ್ಟು ಖರ್ಚಾಗುತ್ತಿದೆ. ಈಗಾಗಲೇ ಬಾಲಕನಿಗೆ ೧೦೦ ಕ್ಕೂ ಅಧಿಕ ಬಾರಿ ‘ಬ್ಲಡ್ ಟ್ರಾನ್ಸ್ಫ್ಯೂಷನ್’ ಮಾಡಲಾಗಿದೆ. ಪುಟ್ಟ ಬಾಲಕನ ಎಳೆ ಕೈಗೆ ಸುಮಾರು ೧೬೨ ಬಾರಿ ಇಂಜೆಕ್ಷನ್ ಸೂಜಿಗಳು ಒಳಹೊಕ್ಕಿವೆೆ!

ಬೆಂಗಳೂರಿನ ಆಸ್ಪತ್ರೆಯಲ್ಲಿ ಪ್ರತಿ ೧೦ ದಿನಕ್ಕೊಮ್ಮೆ ‘ಬ್ಲಡ್ ಟ್ರಾನ್ಸ್ಫ್ಯೂಷನ್’ ಮಾಡಲಾಗುತ್ತಿದೆಯಾದರೂ ಶಾಶ್ವತ ಪರಿಹಾರಕ್ಕೆ ಬೋನ್ ಮ್ಯಾರೋ ಟ್ರಾನ್ಸ್ಪ್ಲಾಂಟ್ ಅಗತ್ಯವಿದೆ. ಸುಮಾರು ರೂ.೪೦ ಲಕ್ಷದಷ್ಟು ಖರ್ಚಾಗಲಿರುವುದಾಗಿ ಆಸ್ಪತ್ರೆಯವರು ತಿಳಿಸಿದ್ದಾರೆ.

ಸ್ಥಳೀಯ ದಾನಿಗಳ ಸಹಕಾರದಿಂದ ಅಲ್ಪ-ಸ್ವಲ್ಪ ಹಣ ಸಂಗ್ರಹವಾಗುತ್ತಿದ್ದು ದಾನಿಗಳು, ಸಂಘ ಸಂಸ್ಥೆಗಳು, ರಾಜಕೀಯ ಪ್ರತಿನಿಧಿಗಳು ಬಾಲಕನ ಜೀವ ಉಳಿಸುವ ಕಾರ್ಯಕ್ಕೆ ಮುಂದಾಗಬೇಕಿದೆ.

ಬಾಲಕನ ಮುಗ್ದತೆ

‘ಶಕ್ತಿ’ ಕಚೇರಿಗೆ ತಾಯಿಯೊಂದಿಗೆ ಬಂದಿದ್ದ ಸಿನಾನ್, ಇದು ‘ಬ್ಲಡ್ ಟ್ರಾನ್ಸ್ಫ್ಯೂಷನ್’ನ ವಿಡಿಯೋ, ಇದು ನನ್ನ ಹಾಸ್ಪಿಟಲ್ ಎಂದು ತಾಯಿಯ ಫೋನಿನಲ್ಲಿದ್ದ ತನ್ನ ಚಿಕಿತ್ಸೆಯ ಚಿತ್ರಗಳನ್ನು ಕಚೇರಿ ಸಿಬ್ಬಂದಿಗೆ ತೋರಿಸುತ್ತಿದ್ದನು. ಒಂದು ಸಂದರ್ಭದಲ್ಲಿ ಆ್ಯಂಬುಲೆನ್ಸ್ನಲ್ಲಿ ಬಾಲಕನನ್ನು ಕರೆದೊಯ್ದಿದ್ದಾಗ, ಅದರ ವಿಡಿಯೋವನ್ನೂ ತಾಯಿ ಚಿತ್ರೀಕರಿಸಿದ್ದು, ಈ ವಿಡಿಯೋವನ್ನು ಸಹ ‘ಇದು ಎಮರ್ಜನ್ಸಿ’ ವಿಡಿಯೋ ಎಂದು ಮುಗ್ದ ಮನಸ್ಸಿನಿಂದ ಬಾಲಕ ಕಚೇರಿ ಸಿಬ್ಬಂದಿಯೊAದಿಗೆ ಹಂಚಿಕೊAಡ.

ತಲಸ್ಸೇಮಿಯಾ ಮೇಜರ್ (ರಕ್ತದಲ್ಲಿ ಹಿಮೋಗ್ಲೋಬಿನ್ ತೀವ್ರ ಕಡಿಮೆ ಪ್ರಮಾಣದಲ್ಲಿ ಇರುತ್ತದೆ) ಎಂಬ ರೋಗ ನಿವಾರಣೆಗೆ ಇರುವುದು ಒಂದೇ ದಾರಿ - ಬೋನ್ ಮ್ಯಾರೋ ಟ್ರಾನ್ಸ್ಪ್ಲಾಂಟ್. ಬೋನ್ ಮ್ಯಾರೋ ಅಂದರೆÀ ಮನುಷ್ಯನ ಮೂಳೆಗಳ ನಡುವೆ ಇರುವ ಮೃದುವಾದ ಪದಾರ್ಥ. ರಕ್ತ ಜೀವಕೋಶಗಳ (ಃಟooಜ ಅeಟಟs) ಉತ್ಪಾದನೆಗೆ ಸಹಾಯಕಾರಿಯಾಗಿದೆ. ಬೋನ್ ಮ್ಯಾರೋವನ್ನು ಒಬ್ಬ ವ್ಯಕ್ತಿಯಿಂದ ಮತ್ತೊಂದು ವ್ಯಕ್ತಿಗೆ ವರ್ಗಾಯಿಸಲು ಇಬ್ಬರಲ್ಲಿರುವ ಊಐಂ ಎಂಬ ಪ್ರೊಟೀನ್ ಹೊಂದಿಕೊAಡಿರಬೇಕು. ಹೆಚ್ಚಾಗಿ ರಕ್ತ ಸಂಬAಧಿಕರಿAದ ಮಾತ್ರ ಇದು ಸಾಧ್ಯ. ಸಂಪೂರ್ಣ ಹೋಲಿಕೆಯಾಗದಿದ್ದರೆ, ಅರ್ಧದಷ್ಟು ಹೋಲುವ ದಾನಿಗಳಿಂದಲೂ ಬೋನ್ ಮ್ಯಾರೋ ಟ್ರಾನ್ಸ್ಪ್ಲಾಂಟ್ ನೆರವೇರಿಸಬಹುದು. ಬಾಲಕನ ತಾಯಿಯಲ್ಲಿರುವ ಊಐಂ ಬಾಲಕನಲ್ಲಿರುವ ಊಐಂ ಗೆ ಅರ್ಧದಷ್ಟು ಹೋಲಿಕೆ ಇರುವ ಕಾರಣ ಅವರನ್ನೇ ದಾನಿಯನ್ನಾಗಿ ಪರಿಗಣಿಸಿ ರೂ.೪೦ ಲಕ್ಷದಷ್ಟು ವೆಚ್ಚದಲ್ಲಿ ಆಪರೇಷನ್ ಕೈಗೊಂಡರೆ ಬಾಲಕನಿಗೆ ಮರುಜೀವ ಸಿಗುತ್ತದೆ.

ನೆರವು ನೀಡಲು ಬ್ಯಾಂಕ್ ಖಾತೆ ವಿವರ

ಖಾತೆ ಸಂಖ್ಯೆ - ೧೯೬೧೦೧೦೦೦೩೯೭೯೬

ಹೆಸರು - ಪಿ.ಎಸ್ ಸಾಹಿರ

IಈSಅ :ಈಆಖಐ೦೦೦೧೯೬೧ – ಈಇಆಇಖಂಐ ಃಂಓಏ,

ಗೋಣಿಕೊಪ್ಪ ಶಾಖೆ

ಒIಅಖ : ೫೭೧೦೪೯೫೨೨

ಗೂಗಲ್ ಪೇ, ಫೋನ್ ಪೇ ಸಂಖ್ಯೆ - ೯೦೦೮೭೮೫೨೪೫

ಸಾಹಿರ ಅವರನ್ನು ಈ ಸಂಖ್ಯೆಯ ಮೂಲಕ ಸಂಪರ್ಕಿಸಬಹುದು - ೬೩೬೬೧೯೮೩೭೩