ಚೆಟ್ಟಳ್ಳಿ, ಸೆ. ೨೯: ಎಸ್.ಕೆ.ಎಸ್.ಎಸ್.ಎಫ್. ವೀರಾಜಪೇಟೆ ವಲಯ ಲೀಡರ್ಸ್ ಸಭೆ ಕಲ್ಲುಬಾಣೆ ಎಸ್.ಕೆ.ಎಸ್.ಎಸ್.ಎಫ್. ಕಚೇರಿಯಲ್ಲಿ ವಲಯ ಅಧ್ಯಕ್ಷ ಸಹದ್ ಫೈಝಿ ಅಧ್ಯಕ್ಷತೆಯಲ್ಲಿ ನಡೆಯಿತು. ಪ್ರವಾದಿ ಪೈಗಂಬರವರ ಜನ್ಮ ದಿನದ ತಿಂಗಳು ಆಗಮಿಸುತ್ತಿರುವುದರಿಂದ ಎಲ್ಲಾ ಶಾಖೆಗಳಲ್ಲಿ ಮೌಲಿದ್ ಹಾಗೂ ಮತ ಪ್ರಭಾಷಣ ನಡೆಸಲು ಕರೆ ನೀಡಿದರು. ಉದ್ಘಾಟನೆಯನ್ನು ಸ್ಥಳೀಯ ಖತೀಬ್ ಎಸ್.ಕೆ.ಎಸ್.ಎಸ್. ಜಿಲ್ಲಾ ಉಪಾಧ್ಯಕ್ಷ ಹನೀಫ್ ಫೈಜಿ ಮಾಡಿದರು. ಎಸ್.ಕೆ.ಎಸ್.ಎಸ್.ಎಫ್. ವಲಯ ರಬೀಹ್ ಸಂಗಮವನ್ನು ಎಮ್ಮೆಮಾಡಿನಲ್ಲಿ ನಡೆಸಲು ತೀರ್ಮಾನಿಸಲಾಯಿತು. ಈ ಸಂದರ್ಭ ಎಸ್.ಕೆ.ಎಸ್.ಎಸ್.ಎಫ್. ಜಿಲ್ಲಾ ಕಾರ್ಯದರ್ಶಿ ಸುಹೈಬ್ ಫೈಜಿ ಇದ್ದರು. ಸಾಜಿಕ್ ಪೊನ್ನಂಪೇಟೆ ಸ್ವಾಗತಿಸಿ, ಅಶ್ರಫ್ ಮಿಸ್ಬಾಹಿ ಪ್ರಾರ್ಥಿಸಿದರು.