*ವೀರಾಜಪೇಟೆ, ಸೆ. ೨೯: ಶಿಕ್ಷಕರ ದಿನಾಚರಣೆ ಅಂಗವಾಗಿ ವೀರಾಜ ಪೇಟೆ ಲಯನ್ಸ್ ಕ್ಲಬ್ ನಗರದ ಎಟುಝೆಡ್ ಸಭಾಂಗಣದಲ್ಲಿ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಕಾರ್ಯಕ್ರಮದ ಮುಖ್ಯ ಅತಿಥಿ ದೇವಣಗೇರಿ ಶಾಲೆಯ ನಿವೃತ್ತ ಶಿಕ್ಷಕಿ ಕರ್ನಂಡ ಎನ್. ಬೊಳ್ಳಮ್ಮ ಅವರನ್ನು ಕ್ಲಬ್ ವತಿಯಿಂದ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿ, ತಂದೆ ತಾಯಿಯ ಮೇಲೆ ಭಕ್ತಿಯಿಟ್ಟವರು ಜೀವನದಲ್ಲಿ ಅಭಿವೃದ್ಧಿಯಾಗುತ್ತಾರೆ. ನÀಮ್ಮ ಕಾಲದಲ್ಲಿ ಶಾಲೆಗಳು ಕೊಡಗಿನಲ್ಲಿ ಅತ್ಯಂತ ವಿರಳವಾಗಿದ್ದವು. ಆದರೀಗ ನಮ್ಮ ಕೊಡಗು ಶಿಕ್ಷಣದಲ್ಲಿ ಬಹಳ ಮುಂದಿದೆ ಎಂದು ಅಭಿಪ್ರಾಯಪಟ್ಟರು. ಮತ್ತೋರ್ವ ಮುಖ್ಯ ಅತಿಥಿ ರೀಜಿನಲ್ ಛೇರ್ ಪರ್ಸನ್ ಲಯನ್ ಧನು ಉತ್ತಯ್ಯ ಮಾತನಾಡಿ, ದಕ್ಷಿಣ ಕೊಡಗಿನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ನಮ್ಮ ತಾತನವರ ಕೊಡುಗೆ ಅಗಾಧವಾದುದು. ಕೊಡಗು ಪುಟ್ಟ ಜಿಲ್ಲೆಯಾದರೂ ಸಾಕಷ್ಟು ಸಂಕಷ್ಟಗಳ ನಡುವೆ ಶಿಕ್ಷಣದಲ್ಲಿ ಕ್ರಾಂತಿ ಮಾಡಿದೆ. ಕೊಡಗಿನ್ನಲ್ಲಿ ಇತ್ತೀಚೆಗೆ ಹಲವರು ಅಂಗಾAಗದಾನಗಳಿಗೆ ಮನಸು ಮಾಡುತ್ತಿದ್ದಾರೆ. ಅಂಥವರನ್ನು ಲಯನ್ಸ್ ಕ್ಲಬ್ ಗುರುತಿಸು ವಂತಾಗಬೇಕು ಅದರಿಂದ ಇತರರು ಅಂಗಾAಗ ದಾನಕ್ಕೆ ಸ್ಪೂರ್ತಿ ಪಡೆಯುತ್ತಾರೆ ಎಂದರು.
ಅಧ್ಯಕ್ಷತೆಯನ್ನು ವೀರಾಜಪೇಟೆ ಲಯನ್ಸ್ ಕ್ಲಬ್ ಅಧ್ಯಕ್ಷ ಲಯನ್ ಬಿ.ಎಸ್ ಪುಷ್ಪರಾಜ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ಜಿಲ್ಲಾಪ್ರಶಸ್ತಿಗಳನ್ನು ವಿಜೇತ ಲಯನ್ಸ್ ಕ್ಲಬ್ ಸದಸ್ಯರಿಗೆ ಅತಿಥಿಗಳು ಪ್ರಧಾನ ಮಾಡಿದರು. ವೇದಿಕೆಯಲ್ಲಿ, ಡಾ.ಪಂಚಮ್ ತಿಮ್ಮಯ್ಯ, ಜ್ಯೋತಿ ಉತ್ತಯ್ಯ, ಪ್ರಿಯದರ್ಶಿನಿ ಪುಷ್ಪರಾಜ್, ನರೇಂದ್ರ, ಪ್ರವೀಣ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಪ್ರಾಂತೀಯ ಅಧ್ಯಕ್ಷರುಗಳು, ಲಯನ್ಸ್ ಕ್ಲಬ್ ಸದಸ್ಯರು ಹಾಜರಿದ್ದರು.