ಮಡಿಕೇರಿ, ಸೆ. ೩೦: ಕೆಲವು ದಿನಗಳ ಹಿಂದೆ ಮಡಿಕೇರಿಯಲ್ಲಿ ಆರ್.ಡಿ.ಪಿ.ಆರ್ ಇಲಾಖೆಯಲ್ಲಿನ ಕೆಲವು ಅಧಿಕಾರಿಗಳು ಭ್ರಷ್ಟಾಚಾರದ ಆಪಾದನೆಯಲ್ಲಿ ನೇರವಾಗಿ ಭ್ರಷ್ಟಾಚಾರ ನಿಗ್ರಹ ದಳ (ಎ.ಸಿ.ಬಿ.) ನಡೆಸಿದ ಯಶಸ್ವಿ ಕಾರ್ಯಾಚರಣೆಯಲ್ಲಿ ಸಿಕ್ಕಿ ಬಿದ್ದು ಜೈಲು ಸೇರಿದ್ದಾರೆ. ಪಂಚಾಯತ್ ರಾಜ್ ಇಂಜಿನಿಯರಿAಗ್ ವಿಭಾಗದ ಕಾರ್ಯಪಾಲಕ ಅಭಿಯಂತರ ಶ್ರೀಕಂಠಯ್ಯ ಕಚೇರಿಯ ತಾಂತ್ರಿಕ ಸಹಾಯಕ ತೌಸಿಫ್, ಕಂಪ್ಯೂಟರ್ ಆಪರೇಟರ್ ಕವನ್, ದ್ವಿತೀಯ ದರ್ಜೆ ಸಹಾಯಕ ರಮೇಶ್ ಹಾಗೂ ಚಾಲಕ ಮತ್ತು ಏಜೆಂಟ್ ಸಂತೋಷ್ ಬಂಧನಕ್ಕೆ ಒಳಗಾದವರು. ಇವರ ಬಗ್ಗೆ ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ನೀಡಿದವರು ಕೊಳಗದಾಳುವಿನ ಗುತ್ತಿಗೆದಾರರಾದ ಬಿ.ಎಂ. ನಂದಕುಮಾರ್ ಅವರು. ಇವರು ದೂರಿನ ಬಗ್ಗೆ ಕೂಲಂಕುಶವಾಗಿ ಪರಿಶೀಲಿಸಿ ಇದು ನಿಜವಾದ ಪ್ರಕರಣವೆಂದು ಅರ್ಥೈಸಿಕೊಂಡ ಎ.ಸಿ.ಬಿ. ಅಧಿಕಾರಿಗಳು ತಮ್ಮದೇ ಶೈಲಿಯಲ್ಲಿ ಬಲೆ ಬೀಸಿದ್ದಾರೆ. ಇದಕ್ಕೆ ನಂದಕುಮಾರ್ ಅವರ ಸಹಕಾರವೂ ಸಂದರ್ಭೋಚಿತವಾಗಿದ್ದ ಹಿನ್ನಲೆಯಲ್ಲಿ ಎಲ್ಲಾ ಮಿಕಗಳು ‘ರೆಡ್ಹ್ಯಾಂಡ್’ ಆಗಿ ಸಿಕ್ಕಿಬಿದ್ದಿದ್ದಾರೆ. ಈ ಘಟನೆ ನಡೆದು ಇದೀಗ ೧೦ ದಿನಗಳು ಕಳೆದಿವೆ. ಬಂಧಿತರೆಲ್ಲರೂ ಜೈಲು ಪಾಲಾಗಿದ್ದಾರೆ. ಆದರೆ ಗೆಜೆಟೆಡ್ ದರ್ಜೆಯ ಅಧಿಕಾರಿಯೂ ಸೇರಿದಂತೆ ಇವರುಗಳು ಯಾರನ್ನೂ ಇಲಾಖೆ ಇನ್ನೂ ಕನಿಷ್ಟ ಅಮಾನತು ಕೂಡ ಮಾಡಿಲ್ಲ. ಈ ಬಗ್ಗೆ ಸ್ವತ: ನಂದಕುಮಾರ್ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇಲಾಖೆ ತುರ್ತು ಕ್ರಮ ಕೈಗೊಳ್ಳದಿರಲು ಯಾರ ಪ್ರಭಾವ ಕಾರಣ ಇದರ ಹಿಂದೆ ಇನ್ನಷ್ಟು ಮಂದಿಯ ಶಾಮೀಲಾತಿ ಇದೆಯೇ ಎಂಬದು ಅವರ ಪ್ರಶ್ನೆಯಾಗಿದೆ. ತಾವು ಯಾವದೇ ಸ್ವಾರ್ಥ ಮನೋಭಾವ, ಪ್ರಚಾರದ ಆಸೆಯಿಂದ ಇವರ ಬಗ್ಗೆ ದೂರು ನೀಡಿಲ್ಲ. ಭ್ರಷ್ಟತೆ ಎಲ್ಲೆ ಮೀರಿ ಹೋಗಿದ್ದು ಇದನ್ನು ಸಹಿಸಲು ಅಸಾಧ್ಯವಾಗಿ ಈ ನಿರ್ಧಾರಕ್ಕೆ ಬಂದಿದ್ದಾಗಿ ಹೇಳುವ ನಂದಕುಮಾರ್ ಮುಂದಿನ ದಿನದಳಲ್ಲೂ ಭ್ರಷ್ಟಾಚಾರದ ವಿರುದ್ಧ ಎದ್ದು ನಿಲ್ಲುವುದಾಗಿ ಹೇಳುತ್ತಾರೆ. ಈ ಬಾರಿ ಕಾರ್ಯಾಚರಣೆಯಲ್ಲಿ ಒಟ್ಟಿಗೆ ಐದು ಮಂದಿಯನ್ನು ಎ.ಸಿ.ಬಿ. ಬಂಧಿಸಿದೆ. ಇದರ ಹಿಂದೆ ಭಾರೀ ಪ್ರಯತ್ನ ಅಡಗಿದೆ. ಈ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ದುಡಿದ ಅಧಿಕಾರಿಗಳಾದ ಎ.ಸಿ.ಬಿ. ಎಸ್ಪಿ. ಅರುಣಾಂಶುಗಿರಿ, ಡಿ.ವೈ.ಎಸ್.ಪಿ.ಗಳಾದ ಕೃಷ್ಣಮೂರ್ತಿ, ಸದಾನಂದ ತಿಪ್ಪಣ್ಣನವರು, ಸಿ.ಐ.ಗಳಾದ ಕುಮಾರ್, ಹರೀಶ್, ಕಿರಣ್ ಕುಮಾರ್ ಹಾಗೂ ತಂಡವನ್ನು ಸ್ಮರಿಸಿಕೊಳ್ಳುವದಾಗಿ ಅವರು ಹೇಳಿದ್ದಾರೆ.
ಇವರು ಘಟನೆಯ ಬಗ್ಗೆ ತಿಳಿಸಿರುವ ವಿವರ ಇಂತಿದೆ
೨೦೨೦ ನವೆಂಬರ್ನಲ್ಲಿ ನನ್ನ ಹೆಸರಿಗೆ ಸುಮಾರು ಒಂದು ಕೋಟಿಯಷ್ಟು ೫ ಟೆಂಡರ್ಗಳಾದವು. ಅದರಲ್ಲಿ ಮಡಿಕೇರಿ ವ್ಯಾಪ್ತಿಯಲ್ಲಿ ಕಸ ವಿಲೇವಾರಿ ಘಟಕದ ಟೆಂಡರ್ ೧೮.೫ ಲಕ್ಷದ ಕಾಮಗಾರಿಯು ಸೇರಿತ್ತು. ನನ್ನ ಹೆಸರಿನಲ್ಲಿ ಈ ಕಾಮಗಾರಿಯು ಐ೧ ಆಗಿದ್ದು ನಂತರ ನಾನು ಇ.ಒ.ಆ, S.ಖಿ. ಮತ್ತು ವ್ಯತ್ಯಾಸದ ಮೊತ್ತ ಎಲ್ಲವನ್ನು ಕಟ್ಟಿದ್ದು. ನನ್ನ ಹೆಸರಿನಲ್ಲಿ ಎಲ್ಲವು ವರ್ಕ್ ಆರ್ಡರ್ ಅಗ್ರಿಮೆಂಟ್ ಎಲ್ಲವೂ ಇದೆ. ಆದರೆ ಇದುವರೆಗೂ ೯ ತಿಂಗಳಿನಿAದ ತೌಸೀಫ್ ಅವರು ಜಾಗ ಹಸ್ತಾಂತರÀ ಮಾಡಿಕೊಟ್ಟಿರುವುದಿಲ್ಲ. ಈ ಬಗ್ಗೆ ಹಲವಾರು ಬಾರಿ ಮೌಖಿಖವಾಗಿ ಮನವಿ ಮಾಡಿದರೂ ಲಿಖಿತವಾಗಿ ಮನವಿ ಮಾಡಿದರು. ಅದಕ್ಕೆ ಸ್ಪಂದನ ಮಾಡಿರುವುದಿಲ್ಲ ಸುಮಾರು ೩ ಲಕ್ಷ ಹಣವನ್ನು ಭದ್ರತಾ ಠೇವಣಿ ಬಿಲೋ ಎಮೋಂಟ್ ಬ್ಯಾಂಕಿನಲ್ಲಿ ಇ.ಇ. ಹೆಸರಿನಲ್ಲಿ ಇಟ್ಟಿರುವ ಪೂರ್ಣ ದಾಖಲಾತಿ ನನ್ನ ಬಳಿ ಇರುತ್ತದೆ. ಆದರೂ ನನ್ನನ್ನು ಸುಮ್ಮನೆ ಸತಾಯಿಸುತ್ತಿದ್ದರು. ಅದು ಸಿ.ಎಸ್.ನಿಂದ ಒಪ್ಪಿಗೆÀ ಆಗಿಲ್ಲ. ಬಂದ ತಕ್ಷಣ ಮಾಡಿಕೊಡುವೆ ಎಂದು ಸಬೂಬು ಹೇಳಿರುತ್ತಾರೆ.
ಕಡಗದಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ೨೦೨೦ ನವೆಂಬರ್ನಲ್ಲಿ ಆದ ಕಸವಿಲೇವಾರಿ ಘಟಕ ೧೧ ಲಕ್ಷ ರೂಪಾಯಿ ಅದು ಐ೧ ನನ್ನ ಹೆಸರಿಗೆ ಈ ಪೆಕ್ಯೂರ್ಮೆಂಟ್ನಲ್ಲಿ ಆಗಿದ್ದು. ತದನಂತರ ಈ ಬಗ್ಗೆ ನಾನು ಹಲವಾರು ಬಾರಿ ಇ.ಇ. ಮತ್ತು ತೌಸೀಫ್ ಅವರ ಬಳಿ ಜಾಗ ಹಸ್ತಾಂತರ ಮಾಡಿ ಮಾಡಿಕೊಡಿ ಎಂದು ಗುತ್ತಿಗೆದಾರರಾದ ಕೆ.ಎ. ದೀಪಕ್ (ಅವರ ಸಮ್ಮುಖದಲ್ಲಿ ಕೇಳಿಕೊಂಡೆನು. ಆಗ ಅವರು ಆಯಿತು ಆದರೆ ನನಗೆ ಬರುವ ಕಮಿಷನ್ ಬಂದ ಮೇಲೆ ಮಾಡಿಕೊಡುವುದೆಂದು ಇಬ್ಬರು ಹೇಳಿದರು. ಈ ಕೆಲಸಕ್ಕೆ ಅಂದಾಜು ೭೫ ಸಾವಿರ ಹಣವನ್ನು ಅವರು ಬೇಡಿಕೆ ಇಟ್ಟರು.)
ಮೊನ್ನೆ ನಡೆದ ಘಟನೆ ೨೦೨೧-೨೦೨೨ರ ಸಾಲಿನ ಮಳೆ ಹಾನಿ ಮತ್ತು ಎನ್.ಡಿ.ಆರ್.ಎಫ್. ಫಂಡ್ನಲ್ಲಿ ಸುಮಾರು ೬೫ ಕೋಟಿ ಮತ್ತು ಬೇರೆ-ಬೇರೆ ಫಂಡ್ನಲ್ಲಿ ೨೫ ಕೋಟಿ ನಮ್ಮ ಸರ್ಕಾರದಿಂದ ಬಿಡುಗಡೆಯಾಗಿರುತ್ತದೆ. ಒಂದು ಲಕ್ಷಕ್ಕಿಂತ ಒಳಗಡೆ ಇದ್ದರೆ ಅದು ಪೀಸ್ವರ್ಕ್. ಒಂದು ಲಕ್ಷದ ಮೇಲಿದ್ದರೆ ಅದು ಟೆಂಡರ್ವರ್ಕ್ ಎಂದು ಪರಿಗಣಿಸಲಾಗುತ್ತದೆ. ಸರ್ಕಾರದ ನಿಯಮದ ಪ್ರಕಾರ ಒಂದು ಲಕ್ಷದ ಮೇಲೆ ಯಾವುದೇ ಅನುದಾನ ಬಿಡುಗಡೆಯಾದರೆ ಟೆಂಡರ್ ಮಾಡಬೇಕೆಂಬ ಆದೇಶ ಸರ್ಕಾರದ ಮಟ್ಟದಲ್ಲಿ ಇರುತ್ತದೆ. ಇ.ಇ. ಶ್ರೀಕಂಠಯ್ಯ ಅವರು ಟೆಂಡರ್ ಕರೆಯುವುದು ಬಿಟ್ಟು, ಬಿಡಿ-ಬಿಡಿ ಮಾಡಿ ರಿಟೈಲ್ ವ್ಯಾಪಾರಕ್ಕೆ ಇಳಿಯುತ್ತಾರೆ. ಕಾನೂನು ಇದ್ದರು ಕೂಡ ಕಮಿಷನ್ ಆದಾಯ ಕಡಿಮೆ ಬರುವ ನೆಪವೊಡ್ಡಿ ಅದನ್ನು ವ್ಯಾಪಾರದ ದೃಷ್ಟಿಯಲ್ಲಿ ಕೈಹಾಕಿ ಒಂದು ಮಿಲಿಯನಷ್ಟು ಅನುದಾನವನ್ನು ಪುಡಿ ಪುಡಿ ಮಾಡಿ ತುಂಡು ತುಂಡು ಮಾಡಿ ಕಾನೂನನ್ನು ತನ್ನ ಖುರ್ಚಿಯ ಕೆಳಗಡೆ ಇಟ್ಟು ತಾನೇ ನಿರ್ಧಾರ ಮಾಡಿದಂತ ಕಾನೂನಿನ ಮೇಲೆ ಕಮಿಷನ್ ದಂಧೆಯನ್ನು ಪ್ರಾರಂಭಿಸುತ್ತಾನೆ. ಈ ಎಲ್ಲದಕ್ಕೂ ಇವರು ಮಾಡುವ ಕೃತ್ಯಗಳಿಗೆ ಗಾಡ್ಫಾದರ್ ಇವರ ಶ್ರೀರಕ್ಷೆಯಾಗಿ ನಿಲ್ಲುತ್ತಾರೆ. ಕಾರಣ ಇಷ್ಟೇ. ಜೇನು ಕುಯಿದವರು ಕೈ ನೆಕ್ಕಲೆಬೇಕಲ್ಲವೆ. ಇ.ಇ. ಶ್ರೀಕಂಠಯ್ಯ ಅವರು ಈ ವರ್ಷದ ಮಳೆ ಹಾನಿ ಕಾಮಗಾರಿಗಳನ್ನು, ಅಗ್ರಿಮೆಂಟ್ ಆಗುವವರೆಗೆ ಶೇ. ೧೨ ರಷ್ಟು ಹಣವನ್ನು ಅವರು ಒಬ್ಬರೆ ಕಿತ್ತುಕೊಳ್ಳುತ್ತಾರೆ. ನಂತರ ಂ.W.ಇ. ಶೇ. ೩ ಸೆಕ್ಷನ್ ಇಂಜಿನಿಯರ್ ಶೇ. ೫ ಅದು ಅಲ್ಲದೆ ನಮ್ಮ ಪೇಪರ್ ಯಾವ ಟೇಬಲ್ ಹೋಗುತ್ತದೆ. ಅಲ್ಲೆಲ್ಲ ನಾವು ಕೈಬಿಸಿ ಮಾಡಬೇಕು. ನಂತರ ಕಾಮಗಾರಿ ಮುಗಿದ ಮೇಲೆ ಚೆಕ್ ಕೊಡುವ ಸಮಯದಲ್ಲಿ ನಾನು ಶೇ. ೮ ಹಣವನ್ನು ಸರ್ಕಾರಿ ಮಟ್ಟದಲ್ಲಿ ಕೊಟ್ಟು ತಂದಿರುತ್ತೇವೆ ಎಂದು ಪುನ: ಇ.ಇ.ಯವರು ಪಡೆದುಕೊಳ್ಳುತ್ತಾರೆ. ಇವರುಗಳ ಕಮಿಷನ್ ಕರ್ಮಕಾಂಡ ಅಂದಾಜು ಶೇ. ೩೦ ರಿಂದ ೩೫ ಆಗುವುದು ನಂತರ ಸರ್ಕಾರಕ್ಕೆ ಶೇ. ೧೦ ರಿಂದ ೧೫ ಉSಖಿ ಕಟ್ಟಬೇಕು. ನಮಗೆ ಸಿಗುವುದು ಕೇವಲ ರೂ. ೧ ಲಕ್ಷಕ್ಕೆ ೫೦ ಸಾವಿರ ಮಾತ್ರ. ನಾವು ಹೇಗೆ ಕ್ವಾಲಿಟಿ ಮೈಂಟೆನ್ ಮಾಡುವುದು ನೀವೇ ಹೇಳಿ. ಸಾರ್ವಜನಿಕ ದೃಷ್ಟಿಯಲ್ಲಿ ನಾವು ಕಳಪೆ ಮಟ್ಟದ ಗುತ್ತಿಗೆದಾರರು ಕಳಪೆ ಮಾಡಲು ಕಾರಣ ಈ ಭ್ರಷ್ಟ ಅಧಿಕಾರಿಗಳು ಮತ್ತು ಅವರ ಗಾಡ್ ಫಾದರ್ಗಳು. ಇವರಿಗೆ ೪.೧೦.೨೦೨೧ ರವರೆಗೆ ಜೈಲು ವಾಸವನ್ನು ಮ್ಯಾಜಿಸ್ಟೆçÃಟ್ ನೀಡಿರುತ್ತಾರೆ. ಆದರೆ ಒಬ್ಬ ಗಜಿಸ್ಟೇಡ್ ರ್ಯಾಂಕ್ ಆಫೀಸರ್ ೪೮ ಗಂಟೆ ಜೈಲಿನಲ್ಲಿದ್ದರೆ, ಆತನನ್ನು ಕೂಡಲೇ ಸಸ್ಪೆಂಡ್ ಅಥವಾ ಡಿಸ್ಮಿಸ್ ಮಾಡುವ ಅಧಿಕಾರ ಸಿ.ಎಸ್. ಅವರಿಗೆ ಇರುತ್ತದೆ. ಇವರು ಏಕೆ ಸಸ್ಪೆಂಡ್ ಮಾಡಲಿಲ್ಲ ಎಂಬ ಸಂಶಯ ಮೂಡುತ್ತದೆ. ಸಿ.ಎಸ್. ರವರು ಕಡಕ್ ಅಧಿಕಾರಿಯಾದರೆ ಇವರನ್ನು ಕೂಡಲೇ ಅಮಾನತು ಮಾಡಿ ಜನರಿಗೆ ಕೊಡುವ ಕಿರುಕುಳ ಮತ್ತು ಭ್ರಷ್ಟಚಾರದ ಅಪರಾಧಿಗೆ ಶಿಕ್ಷೆ ವಿಧಿಸುವಂತೆ ಕೆಲಸಕ್ಕೆ ಕೈಹಾಕಲಿ. ೨೦೨೧-೨೦೨೨ರ ಸಾಲಿನಲ್ಲಿ ಬಂದ ಅನುದಾನದಲ್ಲಿ ನಾನು ಕೂಡ ಕೆಲಸವನ್ನು ಕೇಳಿ ನನಗೆ ೨೩.೫ ಲಕ್ಷ ಹಣದ ಕೆಲಸವನ್ನು ಕೊಡುತ್ತೇನೆಂದು ಸತಾಯಿಸುತ್ತಿದ್ದರು. ನಂತರ ೧.೯೨ ಲಕ್ಷ ಹಣ ತಂದರೆ ಕೆಲಸ ಕೊಡುತ್ತೇವೆ ಎಂದರು. ನಂತರ ನಾನು ಎ.ಸಿ., ಡಿ.ಎಸ್.ಪಿ., ಡಿ.ವೈ.ಎಸ್.ಪಿ. ಅವರನ್ನು ಸಂಪರ್ಕಿಸಿದೆ. ಆಗ ಅವರ ಮಾರ್ಗದರ್ಶನದಲ್ಲಿ ಇವರು ಬೋನಿಗೆ ಬಿದ್ದರು. ಆದರಿಂದ ಪ್ರಜ್ಞಾವಂತ ಸಾರ್ವಜನಿಕರು ಈ ಶ್ರೀಕಂಠಯ್ಯ ಪುನ: ಬಂದು ಕೊಡಗಿನಲ್ಲಿ ಕರ್ತವ್ಯ ನಿರ್ವಹಿಸಿದ್ದೆ ಆದರೆ ಕೊಡಗು ಜಿಲ್ಲೆಯಾಂದ್ಯತ ಜನರನ್ನು ಒಗ್ಗೂಡಿಸಿ ಅಧಿಕಾರಿಗಳು ಭ್ರಷ್ಟರಿಗೆ ನೀರು ನೆರಳು ಕೊಟ್ಟು ಪ್ರೋತ್ಸಾಹಿಸುವವರನ್ನು ಅತಿ ಭ್ರಷ್ಟರಲ್ಲಿ ಅತಿ ಭ್ರಷ್ಟರೆಂದು ಪರಿಗಣಿಸಿ ಅವರ ವಿರುದ್ಧವು ಅಮರಣಾಂತ ಉಪವಾಸವನ್ನು ತಾಲೂಕು ಮಟ್ಟದಲ್ಲಿ ಜಿಲ್ಲಾಮಟ್ಟದಲ್ಲಿ ಹೋರಾಟ ಮಾಡ ಬೇಕಾಗುತ್ತದೆ. ಹಿರಿಯ ಅಧಿಕಾರಿಗಳು ಕೂಡ ಕಾನೂನಿನ ಚೌಕಟ್ಟಿನಲ್ಲಿ ಅವರನ್ನು ಅಮಾನತ್ತು ಮತ್ತು ಸರ್ಕಾರದಿಂದ ವಜಾಗೊಳಿಸಬೇಕಾಗಿ ಮನವಿ ಮಾಡಿ ಕೊಳ್ಳುತ್ತೇನೆ. ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡಲು ತಮ್ಮ ಅಭಿಪ್ರಾಯ ಸಲಹೆ ಸೂಚನೆಯನ್ನು ನೀಡಿ ಭ್ರಷ್ಟರಿಗೆ ಒಂದು ಕರೆ ಗಂಟೆಯ ಮೂಲಕ ಎಚ್ಚರ ಕೊಡುವ ಎಂಬ ಸಂದೇಶಕ್ಕೆ ತಮ್ಮ ಪ್ರತಿಕ್ರಿಯೆಯನ್ನು ತಿಳಿಸಬೇಕಾಗಿ ಕೇಳಿಕೊಳ್ಳುತ್ತೇನೆ.